ವಿಕ್ರಾಂತ್‌ ರೋಣನಿಗೆ ‘ಬಿಗ್‌ ಬಿ’ ಸಾಥ್‌

Team Udayavani, Jun 28, 2022, 9:25 AM IST

amitabh bachchan shows support to Kiccha sudeep’s Vikrant Rona

ಸುದೀಪ್‌ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ 3ಡಿ ಚಿತ್ರ “ವಿಕ್ರಾಂತ್‌ ರೋಣ’ ಜೋರಾಗಿಯೇ ಸದ್ದು ಮಾಡುತ್ತಿದೆ. “ವಿಕ್ರಾಂತ್‌ ರೋಣ’ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡ ತನ್ನ ಪ್ರಚಾರ ಕಾರ್ಯ ಆರಂಭಿಸಿದೆ. ಕನ್ನಡ ಚಿತ್ರರಂಗದ ದಿಗ್ಗಜರು ಬಂದು ವಿಕ್ರಾಂತ್‌ ರೋಣಗೆ ಹರಸಿದ್ದಾರೆ. ದಕ್ಷಿಣ ಭಾರತದ ಅನೇಕ ಸ್ಟಾರ್ ಕೂಡಾ ಸಾಥ್‌ ನೀಡಿದ್ದಾರೆ.

ಇನ್ನು ಹಿಂದಿ ಅವತರಣಿಕೆಯಲ್ಲಿ ಸಲ್ಮಾನ್‌ ಖಾನ್‌ ಚಿತ್ರ ಬಿಡುಗಡೆಯಲ್ಲಿ ಸಹಾಯವಾಗಿ ನಿಂತಿದ್ದಾರೆ. ಇದೀಗ ಭಾರತೀಯ ಚಿತ್ರರಂಗದ ಮೇರು ನಟ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಕೂಡಾ ಕಿಚ್ಚನಿಗೆ ಸಾಥ್‌ ನೀಡಿದ್ದಾರೆ. ತಮ್ಮ ಟ್ವೀಟರ್‌ನಲ್ಲಿ ವಿಕ್ರಾಂತ್‌ ರೋಣ ಚಿತ್ರದ ಟ್ರೇಲರ್‌ ಹಂಚಿಕೊಂಡಿದ್ದು, “ಕನ್ನಡದ ತಾರೆ ಸುದೀಪ್‌, ಪ್ಯಾನ್‌ ಇಂಡಿಯಾ ಚಿತ್ರ ವಿಕ್ರಾಂತ್‌ ರೋಣ 3ಡಿಯಲ್ಲಿ ಜುಲೈ 28 ರಂದು 5 ಭಾಷೆಗಳಲ್ಲಿ ಬಿಡುಗಡೆಯಾಗಿಲಿದೆ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿಕ್ರಾಂತ್‌ ರೋಣ ಚಿತ್ರಕ್ಕೆ ದೊಡ್ಡ ಬೆಂಬಲ ಸಿಕ್ಕಂತಾಗಿದೆ. ಅಂದಹಾಗೆ, ಚಿತ್ರ ಜುಲೈ 28ರಂದು ಬಿಡುಗಡೆಯಾಗಲಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ ಹಿಟ್‌ಲಿಸ್ಟ್‌ ಸೇರಿದೆ. ಜೊತೆಗೆ ಚಿತ್ರದ “ಗಡಂಗ್‌ ರಕ್ಕಮ್ಮ’ ಹಾಡಿನಲ್ಲಿ ಜಾಕ್ವೆಲಿನ್‌ ಫ‌ರ್ನಾಂಡೀಸ್‌ ಸಖತ್‌ ಹಾಟ್‌ ಸ್ಟೆಪ್‌ ಹಾಕಿದ್ದು, ಆ ಹಾಡು ಕೂಡಾ ವೈರಲ್‌ ಆಗಿದೆ.

ಇನ್ನು, ಈ ಚಿತ್ರಕ್ಕೆ ಶಾಲಿನಿ ಜಾಕ್‌ ಮಂಜು ಹಾಗೂ ಅಲಂಕಾರ್‌ ಪಾಂಡಿಯನ್‌ ಬಂಡವಾಳ ಹೂಡಿದ್ದಾರೆ. ನಿರೂಪ್‌ ಭಂಡಾರಿ, ನೀತಾ ಅಶೋಕ್‌, ರವಿಶಂಕರ್‌ ಗೌಡ, ಮಧುಸೂಧನ್‌ ರಾವ್‌ ಎಂಬ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಅನೂಪ್‌ ಭಂಡಾರಿ ನಿರ್ದೇಶನ, ಬಿ. ಅಜನೀಶ್‌ ಲೋಕ್‌ನಾಥ್‌ ಸಂಗೀತ ಸಂಯೋಜನೆ, ವಿಲಿಯಂ ಡೇವಿಡ್‌ ಛಾಯಾಗ್ರಹಣ, ಆಶಿಕ್‌ ಕುಸುಗೊಳ್ಳಿ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ:ಈ ದೇಶದಲ್ಲಿ ಪಾನಿ ಪುರಿಗೆ ನಿಷೇಧ: ಕಾರಣ ಏನು ಗೊತ್ತೇ?

ನಿರ್ದೇಶಕ ಅನೂಪ್‌ ಭಂಡಾರಿ ಪ್ರಕಾರ, “ವಿಕ್ರಾಂತ್‌ ರೋಣ’ದಲ್ಲಿ ನಟ ಸುದೀಪ್‌ ಅವರ ಸ್ಟಾರ್‌ ಡಮ್‌ ಮತ್ತು ಅವರ ಪರ್ಫಾರ್ಮೆನ್ಸ್‌ ಎರಡರ ಸಮಾಗಮವಾಗಿದೆಯಂತೆ. “ಸುದೀಪ್‌ ಅವರಿಗೆ ದೇಶದಾದ್ಯಂತ ಅವರದ್ದೇ ಆದ ಫ್ಯಾನ್ಸ್‌ ಬಳಗವಿದೆ. ಇಲ್ಲಿಯವರೆಗೆ ಅವರು ಮಾಡಿರುವ ಸಿನಿಮಾಗಳಲ್ಲಿ ತಮ್ಮ ಪರ್ಫಾರ್ಮೆನ್ಸ್‌ ಏನು ಅನ್ನೋದನ್ನ ತೋರಿಸಿದ್ದಾರೆ. ಅವರಿಗೆ ಅವರದ್ದೇ ಆದ ಸ್ಟಾರ್‌ಡಮ್‌ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು “ವಿಕ್ರಾಂತ್‌ ರೋಣ’ ಸಿನಿಮಾ ಮಾಡಿದ್ದೇವೆ. ಇದರಲ್ಲಿ ಅವರ ಸ್ಟಾರ್‌ಡಮ್‌ ಮತ್ತು ಪರ್ಫಾರ್ಮೆನ್ಸ್‌ ಎರಡಕ್ಕೂ ಸಾಕಷ್ಟು ಸ್ಪೇಸ್‌ ಇದೆ’ ಎನ್ನುವುದು ಅನೂಪ್‌ ಮಾತು.

“ಈ ಸಿನಿಮಾದ ಸಬೆjಕ್ಟ್ ಮತ್ತು ಸ್ಕ್ರಿಪ್ಟ್ ಎರಡೂ ಕೂಡ ಸುದೀಪ್‌ ಅವರಿಗಾಗಿಯೇ ಹೇಳಿ ಮಾಡಿಸಿದಂತೆ, ಸಹಜವಾಗಿ ಮೂಡಿಬಂದಿದೆ. ಸುದೀಪ್‌ ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಮಾಡಲಾಗದು ಎನ್ನುವಷ್ಟರ ಮಟ್ಟಿಗೆ ಈ ಸಬ್ಜೆಕ್ಟ್ ಅವರಿಗೆ ಮ್ಯಾಚ್‌ ಆಗುತ್ತದೆ. ಸಿನಿಮಾದಲ್ಲಿ ಯಾವುದನ್ನೂ ಅತಿಯಾಗಿ ಸೇರಿಸಲು ಹೋಗಿಲ್ಲ. ಎಲ್ಲವೂ ಆರ್ಗಾನಿಕ್‌ ಆಗಿದೆ’ ಎನ್ನುತ್ತಾರೆ ಅನೂಪ್‌.

ಟಾಪ್ ನ್ಯೂಸ್

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

1-adadada

40 ರ ಹರೆಯದಲ್ಲೂ ಕಮಾಲ್: 16 ವರ್ಷಗಳ ನಂತರ ಟಿಟಿ ಸಿಂಗಲ್ಸ್ ಚಿನ್ನ ಗೆದ್ದ ಶರತ್

ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್

ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್

1-asdsadsad

ಕಾಂಗ್ರೆಸ್ ಸೇರಲು ನಿರ್ಧರಿಸಿದ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಪುತ್ರ

train

ನೀರಿನ ಬಾಟಲ್‌ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರು

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

1-wqwq-wwqe

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಖತ್ ಸದ್ದು ಮಾಡುತ್ತಿದೆ ‘ವಾಸಂತಿ ನಲಿದಾಗ’ ಹಾಡು

ಸಖತ್ ಸದ್ದು ಮಾಡುತ್ತಿದೆ ‘ವಾಸಂತಿ ನಲಿದಾಗ’ ಹಾಡು

‘ಹೊಂದಿಸಿ ಬರೆಯಿರಿ’ ಚಿತ್ರದ ಮೊದಲ ಹಾಡು ಬಿಡುಗಡೆ

‘ಹೊಂದಿಸಿ ಬರೆಯಿರಿ’ ಚಿತ್ರದ ಮೊದಲ ಹಾಡು ಬಿಡುಗಡೆ

tdy-7

ಸಾರ್ವಜನಿಕರೇ ಇಲ್ಲಿ ಕೇಳಿ.. ವಿಶೇಷ ಪೋಸ್ಟ್‌ ಹಾಕಿ ಕಾಳಜಿ ತೋರಿಸಿದ ರಶ್ಮಿಕಾ ಮಂದಣ್ಣ

ಎಲ್ರ ಕಾಲೆಳಿಯತ್ತೆ ಕಾಲ ಚಿತ್ರದ ಗೋಲ್ಡ್‌ ಸಾಂಗ್‌ ಬಿಡುಗಡೆ

ಎಲ್ರ ಕಾಲೆಳಿಯತ್ತೆ ಕಾಲ ಚಿತ್ರದ ಗೋಲ್ಡ್‌ ಸಾಂಗ್‌ ಬಿಡುಗಡೆ

ಕ್ರೇಜಿಸ್ಟಾರ್‌ ಗೋಲ್ಡನ್‌ ಸ್ಟಾರ್‌ ಜೊತೆಜೊತೆಯಲಿ..12ಕ್ಕೆ ಗಾಳಿಪಟ2, ರವಿಬೋಪಣ್ಣ ರಿಲೀಸ್‌

ಕ್ರೇಜಿಸ್ಟಾರ್‌ ಗೋಲ್ಡನ್‌ ಸ್ಟಾರ್‌ ಜೊತೆಜೊತೆಯಲಿ..12ಕ್ಕೆ ಗಾಳಿಪಟ2, ರವಿಬೋಪಣ್ಣ ರಿಲೀಸ್‌

MUST WATCH

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

ಹೊಸ ಸೇರ್ಪಡೆ

accident

ಕೊರಟಗೆರೆ : ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಢಿಕ್ಕಿ: ವೃದ್ದ ಸಾವು

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

1-adadada

40 ರ ಹರೆಯದಲ್ಲೂ ಕಮಾಲ್: 16 ವರ್ಷಗಳ ನಂತರ ಟಿಟಿ ಸಿಂಗಲ್ಸ್ ಚಿನ್ನ ಗೆದ್ದ ಶರತ್

ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್

ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್

1-asdsadsad

ಕಾಂಗ್ರೆಸ್ ಸೇರಲು ನಿರ್ಧರಿಸಿದ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಪುತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.