ಬಡವ ರಾಸ್ಕಲ್‌ ಸಕ್ಸಸ್‌ ಖುಷಿಯಲ್ಲಿ ಅಮೃತಾ


Team Udayavani, Jan 12, 2022, 9:53 AM IST

ಬಡವ ರಾಸ್ಕಲ್‌ ಸಕ್ಸಸ್‌ ಖುಷಿಯಲ್ಲಿ ಅಮೃತಾ

“ಸಿನಿಮಾ ಇಂಡಸ್ಟ್ರಿಗೆ ಬಂದವರೆಲ್ಲರೂ ಒಂದಾದ್ರೂ ಬಿಗ್‌ ಸಕ್ಸಸ್‌ ಸಿಗಬೇಕು ಅಂಥ ಕಾಯ್ತಿರುತ್ತಾರೆ. ಆದ್ರೆ ಇಲ್ಲಿ ಕೆಲವರಿಗೆ ಬೇಗ ಸಕ್ಸಸ್‌ ಸಿಗುತ್ತೆ. ಇನ್ನು ಕೆಲವರಿಗೆ ಲೇಟ್‌ ಆಗಿ ಸಕ್ಸಸ್‌ ಸಿಗುತ್ತೆ. ಆದ್ರೆ ಸಿನಿಮಾ ಸಕ್ಸಸ್‌ ವಿಷಯದಲ್ಲಿ ನಾನಂತೂ ತುಂಬಾ ಅದೃಷ್ಟವಂತೆ ಎಂದೇ ಹೇಳ್ಬೇಕು. ನಾಲ್ಕೈದು ವರ್ಷದ ಹಿಂದೆ ಸಿನಿಮಾ ಇಂಡಸ್ಟ್ರಿಗೆ ಬಂದಾಗ ಏನು ಆಗ್ಬೇಕು ಅಂಥ ಕನಸು ಕಂಡಿದ್ದೆನೋ, ಅದು ಈಗ ನನಸಾಗಿದೆ. ಒಮ್ಮೆ ಹಿಂದಿರುಗಿ ನೋಡಿದ್ರೆ, ಇಲ್ಲಿಗೆ ಬಂದಿರುವುದಕ್ಕೂ ಖುಷಿಯಿದೆ…’ ಇದು ನಟಿ ಅಮೃತಾ ಅಯ್ಯಂಗಾರ್‌ ಮಾತು.

ಇತ್ತೀಚೆಗಷ್ಟೇ ಅಮೃತಾ ಅಯ್ಯಂಗಾರ್‌ ಅಭಿನಯದ “ಬಡವ ರಾಸ್ಕಲ್‌’ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ತೆರೆಕಂಡ ಎಲ್ಲ ಕೆಂದ್ರಗಳಲ್ಲೂ ಯಶಸ್ವಿ ಪ್ರದರ್ಶನ ಕಂಡಿದ್ದು, ಒಮಿಕ್ರಾನ್‌ ಆತಂಕ, ಲಾಕ್‌ಡೌನ್‌ ಭಯದ ನಡುವೆಯೂ “ಬಡವ ರಾಸ್ಕಲ್‌’ ಬಾಕ್ಸ್ ಆಫೀಸ್‌ನಲ್ಲೂ ಗೆಲುವಿನ ನಗೆ ಬೀರಿದೆ. ಇನ್ನು “ಬಡವ ರಾಸ್ಕಲ್‌’ ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್‌ ನಾಯಕಿಯಾಗಿ ಎರಡು ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅಮೃತಾಅವರ ಅಭಿನಯಕ್ಕೂ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದೇ ಖುಷಿಯಲ್ಲಿ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕ ಅಮೃತಾ ಅಯ್ಯಂಗಾರ್‌ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು. “ಸುಮಾರು ಎರಡೂವರೆ ವರ್ಷದಿಂದ “ಬಡವ ರಾಸ್ಕಲ್‌’ ಸಿನಿಮಾಕ್ಕಾಗಿ ಇಡೀ ತಂಡ ಸಾಕಷ್ಟು ಪರಿಶ್ರಮವಹಿಸಿ ಕೆಲಸ ಮಾಡಿದೆ. ಕೋವಿಡ್‌ ಆತಂಕ, ಲಾಕ್‌ಡೌನ್‌ ಭಯದ ನಡುವೆಯೇ ಸಿನಿಮಾ ಮಾಡಿದ್ದೆವು. ಕೊನೆಗೆ ಇದೇ ಭಯದ ನಡುವೆಯೇ ಸಿನಿಮಾ ರಿಲೀಸ್‌ ಕೂಡ ಮಾಡಿದ್ದೆವು. ಕೊನೆಗೆ ನಮ್ಮ ನಿರೀಕ್ಷೆಯಂತೆ, ಸಿನಿಮಾ ಆಡಿಯನ್ಸ್‌ಗೆ ಇಷ್ಟವಾಯ್ತು. “ಬಡವ ರಾಸ್ಕಲ್‌’ ಸಕ್ಸಸ್‌ನಿಂದ ಇಡೀ ಟೀಮ್‌ ಖುಷಿಯಾಗಿದೆ. ಎಲ್ಲರೂ ಇಂಥದ್ದೊಂದು ಸಕ್ಸಸ್‌ ನಿರೀಕ್ಷೆಯಲ್ಲಿದ್ದರು. ಕೊನೆಗೂ ನಮ್ಮೆಲ್ಲರ ಕನಸು ನನಸಾಗಿದೆ. ನನ್ನ ಮಟ್ಟಿಗೆ ಹೇಳುವುದಾದ್ರೆ, ಇದೊಂದುಎಮೋಶನಲ್‌ ಸಕ್ಸಸ್‌ ಸಿನಿಮಾ’ ಅನ್ನೋದು ಅಮೃತಾ ಮಾತು.

“ಬಡವ ರಾಸ್ಕಲ್‌’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಯ ಬಗ್ಗೆ ಮಾತನಾಡುವ ಅಮೃತಾ, “ನಾನು ಈ ಹಿಂದೆ ಅಭಿನಯಿಸಿದ್ದ “ಲವ್‌ ಮಾಕ್ಟೇಲ್‌’ ಮತ್ತು “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಎರಡೂ ಸಿನಿಮಾಗಳೂ ಹಿಟ್‌ ಆಗಿದ್ದವು. ಆದ್ರೆ, ಈ ಎರಡೂ ಸಿನಿಮಾಗಳಲ್ಲೂ ಹೀರೋ ನನಗೆ ಕೈಕೊಟ್ಟು ಹೋಗುವಂಥ ಪಾತ್ರಗಳೇ ಸಿಕ್ಕಿದ್ದವು. ಆ ಎರಡೂ ಸಿನಿಮಾಗಳಲ್ಲಿ ನನ್ನ ಪಾತ್ರ ನೋಡಿದ ಅನೇಕರು, “ಛೇ… ಪಾಪ.., ನಿಮ್ಮ ಪಾತ್ರಕ್ಕೆ ಸಿನಿಮಾದಲ್ಲಿ ಹೀಗಾಗಬಾರದಿತ್ತು…’ ಅಂತಿದ್ರು.

ಆದ್ರೆ “ಬಡವರಾಸ್ಕಲ್‌’ ಸಿನಿಮಾದಲ್ಲಿ ಹಾಗಾಗಲಿಲ್ಲ. ಇಲ್ಲಿ ಒಂದೇ ಸಿನಿಮಾದಲ್ಲಿ ಎರಡು ಶೇಡ್‌ನ‌ ಪಾತ್ರ ನನಗೆ ಸಿಕ್ಕಿದೆ.ಫ‌ಸ್ಟ್‌ಹಾಫ್ ಒಂದು ಲುಕ್‌, ಸೆಕೆಂಡ್‌ ಹಾಫ್ ಇನ್ನೊಂದು ಲುಕ್‌. ಎರಡೂ ಲುಕ್‌ನಲ್ಲೂಅಭಿನಯಕ್ಕೆ ಸಾಕಷ್ಟು ಅವಕಾಶವಿತ್ತು. ನನಗೂ ಈ ಥರದ ಕ್ಯಾರೆಕ್ಟರ್‌ ತುಂಬಚಾಲೆಂಜಿಂಗ್‌ ಆಗಿತ್ತು. ನಾನು ನನ್ನಕೈಲಾದ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದೆ. ಸಿನಿಮಾ ರಿಲೀಸ್‌ ಆದಮೇಲೆ ನನ್ನ ಪಾತ್ರ ನೋಡಿದಆಡಿಯನ್ಸ್‌ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ’ ಎಂದು ತಮ್ಮ ಖುಷಿ ಹಂಚಿಕೊಳ್ಳುತ್ತಾರೆ.

ಇನ್ನು ಕಳೆದ ಒಂದು ತಿಂಗಳಿನಿಂದ “ಬಡವ ರಾಸ್ಕಲ್‌’ ಸಿನಿಮಾದ ಪ್ರಮೋಶನ್ಸ್‌ಗಾಗಿ ಸಂಪೂರ್ಣ ಸಮಯ ತೆಗೆದಿರಿಸಿರುವ ಅಮೃತಾ ಅಯ್ಯಂಗಾರ್‌, ಚಿತ್ರತಂಡದ ಜೊತೆ ಅರ್ಧದಷ್ಟು ಕರ್ನಾಟಕ ಸುತ್ತಾಡಿ “ಬಡವ ರಾಸ್ಕಲ್‌’ ಪ್ರಚಾರ ಮಾಡಿ ಬಂದಿದ್ದಾರಂತೆ. ಹೋದ ಕಡೆಗಳಲ್ಲಿ ಜನ ಪ್ರೀತಿಯಿಂದ ಬಂದು ಅಮೃತಾ ಅವರ ಪಾತ್ರದ ಬಗ್ಗೆ ಅಭಿನಯದ ಬಗ್ಗೆ ಮಾತನಾಡುತ್ತಿದ್ದಾರಂತೆ.

ಟಾಪ್ ನ್ಯೂಸ್

ಚಾಮರಾಜನಗರ: ಜನ್ಮದಿನದಂದೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಕಾಲೇಜು ಉಪನ್ಯಾಸಕಿ

ಚಾಮರಾಜನಗರ: ಜನ್ಮದಿನದಂದೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಕಾಲೇಜು ಉಪನ್ಯಾಸಕಿ

india ajadi ka amruth singh

ಸ್ವಾತಂತ್ರ್ಯ ಸಮರ @75: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು? ಇಲ್ಲಿದೆ ಮಾಹಿತಿ

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು?

independence 75 k

ಸ್ವಾತಂತ್ರ್ಯ ವೀರರು@75: ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ಹೋರಾಡಿದ್ದ ಧೀರ ಅಮಚಡಿ ತೇವನ್

thumb 4 politics

ಬಿಹಾರದಲ್ಲಿ ಜೆಡಿಯು, ಬಿಜೆಪಿ ಮೈತ್ರಿ ಸರ್ಕಾರ ಪತನ; 4 ಗಂಟೆಗೆ ರಾಜ್ಯಪಾಲರ ಭೇಟಿ: ನಿತೀಶ್

ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ: ಕಾಂಗ್ರೆಸ್ ಟೀಕೆ

ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ: ಕಾಂಗ್ರೆಸ್ ಟೀಕೆ

prasanna

ಹಳ್ಳದಲ್ಲಿ ಕಾರು ಸಹಿತ ಕೊಚ್ಚಿ ಹೋದ ವ್ಯಕ್ತಿ: ಶ್ರಾವಣಕ್ಕೆ ಹೋದಾತ ಸಾವಿನ ಮನೆ ಸೇರಿದ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ಪದವಿ ಪೂರ್ವ’ ಚಿತ್ರದ ಫ್ರೆಂಡ್‌ಶಿಪ್‌ ಸಾಂಗ್‌ ರಿಲೀಸ್

‘ಪದವಿ ಪೂರ್ವ’ ಚಿತ್ರದ ಫ್ರೆಂಡ್‌ಶಿಪ್‌ ಸಾಂಗ್‌ ರಿಲೀಸ್

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು? ಇಲ್ಲಿದೆ ಮಾಹಿತಿ

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು?

ಇದು ನನಗೆ ಬ್ರೇಕ್‌ ಕೊಡುವ ಸಿನಿಮಾ: ಗಾಳಿಪಟ-2 ಚೆಲುವೆ ವೈಭವಿ ಮಾತು…

ಇದು ನನಗೆ ಬ್ರೇಕ್‌ ಕೊಡುವ ಸಿನಿಮಾ: ಗಾಳಿಪಟ-2 ಚೆಲುವೆ ವೈಭವಿ ಮಾತು…

ಸಖತ್ ಸದ್ದು ಮಾಡುತ್ತಿದೆ ‘ವಾಸಂತಿ ನಲಿದಾಗ’ ಹಾಡು

ಸಖತ್ ಸದ್ದು ಮಾಡುತ್ತಿದೆ ‘ವಾಸಂತಿ ನಲಿದಾಗ’ ಹಾಡು

‘ಹೊಂದಿಸಿ ಬರೆಯಿರಿ’ ಚಿತ್ರದ ಮೊದಲ ಹಾಡು ಬಿಡುಗಡೆ

‘ಹೊಂದಿಸಿ ಬರೆಯಿರಿ’ ಚಿತ್ರದ ಮೊದಲ ಹಾಡು ಬಿಡುಗಡೆ

MUST WATCH

udayavani youtube

ಮರೆಯಾಗುತ್ತಿದೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹೆಜ್ಜೆ ಕುಣಿತ

udayavani youtube

ಪ್ರವಾಹದ ನೀರಿನಲ್ಲಿ ಕಾರು ಚಲಾಯಿಸಿ ಸಿಲುಕಿಕೊಂಡ ಯುವಕರು… ಕೊನೆಗೂ ಪಾರಾದರು

udayavani youtube

ಸೌಹಾರ್ದತೆಗೆ ಸಾಕ್ಷಿಯಾದ ನಾಲತವಾಡ : ಹಿಂದೂ ಮುಸ್ಲಿಂ ಸೇರಿ ಮೊಹರಂ ಆಚರಣೆ

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

ಹೊಸ ಸೇರ್ಪಡೆ

16

ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

tdy-14

ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗೆ ಪರಿಹಾರ

ಚಾಮರಾಜನಗರ: ಜನ್ಮದಿನದಂದೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಕಾಲೇಜು ಉಪನ್ಯಾಸಕಿ

ಚಾಮರಾಜನಗರ: ಜನ್ಮದಿನದಂದೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಕಾಲೇಜು ಉಪನ್ಯಾಸಕಿ

ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸಿ

ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸಿ

15

ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿಲ್ಲ ಮೇಲ್ಛಾವಣಿ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.