ಕಾಣೆಯಾದವರ ಹಿಂದೆ ಬಂದ ಅನಿಲ್‌

ಪ್ರಯೋಗಾತ್ಮಕ ಚಿತ್ರದಲ್ಲಿ ರವಿಶಂಕರ್‌, ರಂಗಾಯಣ ರಘು, ತಬಲನಾಣಿ

Team Udayavani, Jul 11, 2019, 3:00 AM IST

ಕನ್ನಡದಲ್ಲೀಗ ದಿನ ಕಳೆದಂತೆ ಹೊಸಬಗೆಯ ಚಿತ್ರಗಳು ಶುರುವಾಗುತ್ತಿವೆ. ಅದರಲ್ಲೂ ಪ್ರಯೋಗಾತ್ಮಕ ಚಿತ್ರಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ ಎಂಬುದು ವಿಶೇಷ. ಕಮರ್ಷಿಯಲ್‌ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ ಚಿತ್ರಗಳು ಗಮನಸೆಳೆಯುತ್ತಿವೆ ಎಂಬುದು ಮತ್ತೊಂದು ವಿಶೇಷ. ಅಂದಹಾಗೆ, ಹೊಸ ಪ್ರಯೋಗಕ್ಕೆ ಇಳಿದವರು ಹೊಸಬರಂತೂ ಅಲ್ಲ ಎಂಬುದು ನೆನಪಿರಲಿ.

ಹೌದು, ನಿರ್ದೇಶಕ ಅನಿಲ್‌ ಈಗ ಅಂಥದ್ದೊಂದು ಹೊಸ ಪ್ರಯೋಗದ ಸಿನಿಮಾಗೆ ಕೈ ಹಾಕಿದ್ದಾರೆ. ಅವರ ಪ್ರಯೋಗದ ಚಿತ್ರಕ್ಕೆ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಎಂದು ಹೆಸರಿಡಲಾಗಿದೆ. ಶೀರ್ಷಿಕೆ ಕೇಳಿದಾಕ್ಷಣ, ಇದೊಂದು ಕಾಣೆಯಾದವರ ಕುರಿತಾದ ಚಿತ್ರ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ. ಈವರೆಗೆ ಕಮರ್ಷಿಯಲ್‌ ಚಿತ್ರಗಳ ಹಿಂದೆ ಇದ್ದ ಅನಿಲ್‌ , ಈ ಚಿತ್ರ ಮಾಡೋಕೆ ಕಾರಣ, ಕಥೆ.

ಅವರಿಗೆ ಆ ಕಥೆಯ ಎಳೆ ಹೊಳೆದದ್ದೇ ತಡ, ಚಿತ್ರ ಮಾಡೋಕೆ ಅಣಿಯಾಗಿದ್ದಾರೆ. ನವೀನ್‌ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ಇದು ಮೊದಲ ಚಿತ್ರ. ಇಲ್ಲಿ ನಾಯಕ, ನಾಯಕಿ ಅನ್ನುವುದೇನೂ ಇಲ್ಲ. ಚಿತ್ರದಲ್ಲಿ ಸುಮಾರು 65 ವರ್ಷ ವಯಸ್ಸಿನ ಪಾತ್ರಗಳೇ ಹೈಲೈಟ್‌. ಇಲ್ಲಿ ಮೂರು ಪಾತ್ರಗಳು ವಿಶೇಷವಾಗಿ ಕಾಣಿಸಿಕೊಳ್ಳಲಿವೆ.

ಆ ಕುರಿತು ಹೇಳಿಕೊಳ್ಳುವ ನಿರ್ದೇಶಕ ಅನಿಲ್‌, “ರವಿಶಂಕರ್‌, ರಂಗಾಯಣ ರಘು, ತಬಲನಾಣಿ ಪ್ರಮುಖ ಪಾತ್ರಧಾರಿಗಳು. ಅವರೆಲ್ಲರೂ ತಾತನ ಪಾತ್ರದಲ್ಲಿ ಮಿಂಚಲಿದ್ದಾರೆ. ಅವರಿಗೆ ಯಾರೂ ನಾಯಕಿಯರು ಇರುವುದಿಲ್ಲ. ಮೊದಲೇ ಹೇಳಿದಂತೆ ಇದು ಕಮರ್ಷಿಯಲ್‌ ಚಿತ್ರವಂತೂ ಅಲ್ಲ. ಹಾಫ್ಬೀಟ್‌ ಸಿನಿಮಾ ಇದಾಗಿದ್ದು, ಇಲ್ಲೊಂದಷ್ಟು ಸಸ್ಪೆನ್ಸ್‌ ಕೂಡ ಇದೆ.

ಅದರೊಂದಿಗೆ ಮಾನವೀಯ ಗುಣಗಳು ಚಿತ್ರದ ಹೈಲೈಟ್‌ ಆಗಿರಲಿವೆ. 1950, 70, 80 ರ ದಶಕ ಸೇರಿದಂತೆ 2019ರವರೆಗೆ ನಡೆಯುವ ವಿಷಯಗಳು ಇರಲಿವೆ. ಇಡೀ ಚಿತ್ರ ಹೊಸತನದೊಂದಿಗೆ ಸಾಗಲಿದೆ. ನೋಡುಗರಿಗೊಂದು ಆಪ್ತಭಾವ ಮೂಡಿಸುವ ಪ್ರಯತ್ನ ಇಲ್ಲಿ ಮಾಡಲಾಗುತ್ತಿದೆ ‘ ಎಂದು ವಿವರಿಸುತ್ತಾರೆ ನಿರ್ದೇಶಕ ಅನಿಲ್‌.

ಆಗಸ್ಟ್‌ 6 ರಿಂದ ಚಿತ್ರೀಕರಣ ಶುರುವಾಗಲಿದೆ. ಬ್ಯಾಂಕಾಕ್‌ನಲ್ಲಿ 20 ದಿನಗಳ ಮೊದಲ ಹಂತವನ್ನು ಮುಗಿಸಿಕೊಂಡು ಆ ನಂತರ ಇಲ್ಲಿ ಚಿತ್ರೀಕರಣ ಮಾಡಲಾಗುವುದು. ಚಿಕ್ಕಣ್ಣ ಕೂಡ ಇಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಎರಡು ವಿಶೇಷ ಪಾತ್ರಗಳಿರಲಿದ್ದು, ಅದು ಇನ್ನೂ ಅಂತಿಮವಾಗಿಲ್ಲ ಎಂಬುದು ಅನಿಲ್‌ ಕೊಡುವ ವಿವರ. ಚಿತ್ರಕ್ಕೆ ಶಿವು ಛಾಯಾಗ್ರಹಣವಿದೆ.

ಅರ್ಜುನ್‌ ಜನ್ಯ ಸಂಗೀತ, ಕೆ.ಎಂ.ಪ್ರಕಾಶ್‌ ಸಂಕಲನ ಮಾಡಲಿದ್ದಾರೆ. ರವಿವರ್ಮ ಸಾಹಸವಿದೆ. ಅನಿಲ್‌ ಸದ್ಯಕ್ಕೆ “ದಾರಿ ತಪ್ಪಿದ ಮಗ’ ಚಿತ್ರವನ್ನು ಮುಗಿಸಿದ್ದಾರೆ. ಇನ್ನೊಂದು ಹಾಡು ಬಾಕಿ ಉಳಿದಿದ್ದು, ಅದನ್ನು ಇಷ್ಟರಲ್ಲೇ ಚಿತ್ರೀಕರಿಸುವ ಯೋಜನೆ ಅವರದು. ಅದಕ್ಕೂ ಮುನ್ನ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರ ಕೈಗೆತ್ತಿಕೊಂಡು, ಒಂದು ಹಂತ ಮುಗಿಸಿದ ನಂತರ “ದಾರಿ ತಪ್ಪಿದ ಮಗ’ ಚಿತ್ರದ ಕೆಲಸಕ್ಕೆ ಹೊರಡುವುದಾಗಿ ಹೇಳುತ್ತಾರೆ ಅನಿಲ್‌.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕನ್ನಡ ಚಿತ್ರರಂಗವೀಗ ಹೊಸಾ ಸಾಧ್ಯತೆಗಳತ್ತ ತೆರೆದುಕೊಂಡಿದೆ. ಈ ಕಾರಣದಿಂದಲೇ ಒಂದು ಕಾಲದಲ್ಲಿ ಕನ್ನಡದತ್ತ ಅಸಡ್ಡೆಯಿಂದ ನೋಡುತ್ತಿದ್ದ ಕಣ್ಣುಗಳಲ್ಲಿಯೇ ಬೆರಗೊಂದು...

  • ಯಾವುದೇ ನಟ ಇರಲಿ. ತಾನು ವಿಭಿನ್ನ ಪಾತ್ರದ ಮೂಲಕ ನೋಡುಗರನ್ನು ರಂಜಿಸಬೇಕು ಎಂಬ ಆಸೆ ಇದ್ದೇ ಇರುತ್ತೆ. ಕೆಲವರಿಗೆ ಮಾತ್ರ ವಿಭಿನ್ನ ಪಾತ್ರ ನಿರ್ವಹಿಸುವ ಅವಕಾಶ...

  • ಕ್ರೇಜಿಸ್ಟಾರ್‌ ರವಿಚಂದ್ರನ್‌ ತಮ್ಮ ಸಿನಿಮಾಗಳಲ್ಲಿ ಹೊಸ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳೋದು ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ರವಿಚಂದ್ರನ್‌ ತಮ್ಮ ಹೊಸ...

  • ನರಸಿಂಹರಾಜು ಅವರ ಮಗಳು ಸುಧಾ ನರಸಿಂಹರಾಜು ಹಲವು ವರ್ಷಗಳ ನಂತರ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಈಗಾಗಲೇ ಸದ್ದಿಲ್ಲದೇ ಆ ಚಿತ್ರ ಬಿಡುಗಡೆಯೂ ಆಗಿದೆ. ಅಂದಹಾಗೆ,...

  • ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಅಚ್ಚ ಕನ್ನಡದ ಶೀರ್ಷಿಕೆಗಳು ಜನಪ್ರಿಯವಾಗುತ್ತಿವೆ. ಆ ಸಾಲಿಗೆ ಇದೀಗ "ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರವೂ ಸೇರಿದೆ....

ಹೊಸ ಸೇರ್ಪಡೆ