ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್

Team Udayavani, Mar 30, 2023, 12:35 PM IST

ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್

ಹಿಂದಿ ಚಿತ್ರರಂಗದ ಜನಪ್ರಿಯ ನಟ ಅನುಪಮ್‌ ಖೇರ್‌ ಇದೀಗ ಶಿವರಾಜಕುಮಾರ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ “ಘೋಸ್ಟ್‌’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅನುಪಮ್‌ ಖೇರ್‌ ಕನ್ನಡ ಚಿತ್ರರಂಗಕ್ಕೂ ಪರಿಚಯವಾಗುತ್ತಿದ್ದಾರೆ.

ಅಂದಹಾಗೆ, “ಘೋಸ್ಟ್‌’ ಅನುಪಮ್‌ ಖೇರ್‌ ಅಭಿನಯದ 535ನೇ ಸಿನಿಮಾ. ಹಿಂದಿ ಸಿನಿಮಾಗಳ ಜೊತೆಗೆ ಈಗಾಗಲೇ ದಕ್ಷಿಣ ಭಾರತದ ಮಲಯಾಳಂ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ಬಣ್ಣ ಹಚ್ಚಿರುವ ಅನುಪಮ್‌ ಖೇರ್‌ ಅವರಿಗೆ “ಘೋಸ್ಟ್‌’ ಮೊದಲ ಕನ್ನಡ ಸಿನಿಮಾ. ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿರುವ “ಘೋಸ್ಟ್‌’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅನುಪಮ್‌ ಖೇರ್‌, ತಮ್ಮ ಮೊದಲ ಕನ್ನಡ ಸಿನಿಮಾದ ಬಗ್ಗೆ ಒಂದಷ್ಟು ಮಾತುಗಳನ್ನಾಡಿದ್ದಾರೆ.

“ಸಿನಿಮಾಕ್ಕೆ ಎಂದಿಗೂ ಭಾಷೆ ಅಡ್ಡಿ ಬರುವುದಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಅಳು, ನಗು, ನೋವು ಹೀಗೆ ಎಲ್ಲ ಭಾವನಾತ್ಮಕ ಅಂಶಗಳೂ ಎಲ್ಲ ಭಾಷೆಗಳಲ್ಲೂ ಒಂದೇ ಆಗಿರುತ್ತದೆ. ಅದಕ್ಕೆ ಭಾಷೆಯ ಭೇದ ಇರುವುದಿಲ್ಲ. ಸಿನಿಮಾ ಕೂಡ ಹಾಗೆಯೇ. ಸಿನಿಮಾಗಳನ್ನು ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌, ಅಂಥ ಬೇರೆ ಬೇರೆಯಾಗಿ ನೋಡುವುದು ಸರಿಯಲ್ಲ. ಭಾರತದಲ್ಲಿ ತಯಾರಾಗುವ ಸಿನಿಮಾಗಳನ್ನು ಭಾರತೀಯ ಸಿನಿಮಾಗಳು ಅಂಥ ನೋಡುವುದು ಸೂಕ್ತ. ನನ್ನ ಮಟ್ಟಿಗೆ ಹೇಳುವುದಾದರೆ, ಯಾವುದೇ ಭಾಷೆಯ ಸಿನಿಮಾಗಳಲ್ಲಿ ನನಗೆ ತಾರತಮ್ಯವಿಲ್ಲ. ಈಗಾಗಲೇ ಹಿಂದಿ, ತೆಲುಗು, ತಮಿಳು, ಮಲೆಯಾಳಂ, ಬೆಂಗಾಳಿ, ಮರಾಠಿ ಹೀಗೆ ಎಲ್ಲ ಭಾಷೆಯ ಸಿನಿಮಾಗಳಲ್ಲೂ ಅಭಿನಯಿಸಿದ್ದೇನೆ. ಕನ್ನಡ ಸಿನಿಮಾದಲ್ಲೂ ಅಭಿನಯಿಸಬೇಕು ಎಂಬ ಆಸೆಯಿತ್ತು. ಆ ಆಸೆ ಈಗ “ಘೋಸ್ಟ್‌’ ಸಿನಿಮಾದ ಮೂಲಕ ಈಡೇರಿದೆ’ ಎಂಬುದು ಅನುಪಮ್‌ ಖೇರ್‌ ಮಾತು.

ಇನ್ನು “ಘೋಸ್ಟ್‌’ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ? ಎಂಬ ಪ್ರಶ್ನೆಗೆ, “ಸಿನಿಮಾದ ಕಥೆಗೆ ತಿರುವು ನೀಡುವಂಥ ಪಾತ್ರ ನನ್ನದು. ಪಾತ್ರಕ್ಕೆ ಅದರದ್ದೇ ಆದ ಮಹತ್ವವಿದೆ. ಆದರೆ ನಿರ್ದೇಶಕರು ನನ್ನ ಪಾತ್ರದ ಬಗ್ಗೆ ಈಗಲೇ ಹೆಚ್ಚೇನೂ ಮಾಹಿತಿ ನೀಡಬಾರದು ಎಂದು ತಿಳಿಸಿರುವುದರಿಂದ, ನನ್ನ ಪಾತ್ರದ ಬಗ್ಗೆ ಹೆಚ್ಚು ವಿವರಣೆ ಕೊಡುವುದು ಸೂಕ್ತವಲ್ಲ’ ಎಂಬ ಉತ್ತರ ಅನುಮಪ್‌ ಖೇರ್‌ ಅವರದ್ದು.

“ಸುಮಾರು ಹತ್ತು ವರ್ಷಗಳ ಹಿಂದೆಯೇ ಕನ್ನಡ ಸಿನಿಮಾದಲ್ಲಿ ಅಭಿನಯಿಸುವ ಆಫ‌ರ್ ಬಂದಿತ್ತು. ಆದರೆ ಸಮಯದ ಹೊಂದಾಣಿಕೆ ಮತ್ತಿತರ ಕಾರಣಗಳಿಂದ ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೂಮ್ಮೆ “ಘೋಸ್ಟ್‌’ ಸಿನಿಮಾದ ಮೂಲಕ ಕನ್ನಡ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂದಿದೆ. ಸಿನಿಮಾದ ಸ್ಕ್ರಿಪ್ಟ್ ಮತ್ತು ಪಾತ್ರ ಇಷ್ಟವಾಗಿದ್ದರಿಂದ, “ಘೋಸ್ಟ್‌’ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡೆ’ ಎನ್ನುವುದು ಅನುಪಮ್‌ ಖೇರ್‌ ಮಾತು.

ಅಂದಹಾಗೆ, ಶ್ರೀನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಘೋಸ್ಟ್‌’ ಸಿನಿಮಾವನ್ನು ಸಂದೇಶ್‌ ನಾಗರಾಜ್‌ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ಶಿವರಾಜಕುಮಾರ್‌, ಅನುಪಮ್‌ ಖೇರ್‌ ಅವರೊಂದಿಗೆ ಮಲೆಯಾಳಂ ನಟ ಜಯರಾಮ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಟಾಪ್ ನ್ಯೂಸ್

dina-ss

Daily Horoscope: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ಮಂಗಳೂರು: ಇನ್‌ಸ್ಪೆಕ್ಟರ್‌ಗಳು ಮತ್ತೆ ಹಿಂದಿನ ಠಾಣೆಗೆ ವರ್ಗ

ಮಂಗಳೂರು: ಇನ್‌ಸ್ಪೆಕ್ಟರ್‌ಗಳು ಮತ್ತೆ ಹಿಂದಿನ ಠಾಣೆಗೆ ವರ್ಗ

CRUDE OIL

Crude oil: ಕಚ್ಚಾತೈಲಕ್ಕಾಗಿ ವಿದೇಶಗಳನ್ನೇ ಅವಲಂಬಿಸಿರುವ ದೇಶದಿಂದ ತೈಲ ಮಾರಾಟದಲ್ಲಿ ವಿಕ್ರಮ

ಉಡುಪಿ: 9 ವರ್ಷಗಳಲ್ಲಿ ಕೇಂದ್ರ ಸರಕಾರದ ಹಲವು ಸಾಧನೆ

ಉಡುಪಿ: 9 ವರ್ಷಗಳಲ್ಲಿ ಕೇಂದ್ರ ಸರಕಾರದ ಹಲವು ಸಾಧನೆ

MODI US PARLIAMENT

2ನೇ ಬಾರಿ ಅಮೆರಿಕದ ಜಂಟಿ ಸಂಸತ್‌ ಉದ್ದೇಶಿಸಿ PM ಮೋದಿ ಭಾಷಣ

ತಪ್ಪು ಮಾಹಿತಿಗೆ ದಂಡ ಗ್ಯಾರಂಟಿ! ಯುವನಿಧಿ ಯೋಜನೆಯ ಮಾರ್ಗಸೂಚಿ ಬಿಡುಗಡೆ

ತಪ್ಪು ಮಾಹಿತಿಗೆ ದಂಡ ಗ್ಯಾರಂಟಿ! ಯುವನಿಧಿ ಯೋಜನೆಯ ಮಾರ್ಗಸೂಚಿ ಬಿಡುಗಡೆ

ಕರಾವಳಿಯ ಯಾತ್ರಿಕರು ಅಪಾಯದಿಂದ ಪಾರು: ಯಾತ್ರೆ ಹೊರಟಿದ್ದ ತಂಡದವರ ಮಾತು

ಕರಾವಳಿಯ ಯಾತ್ರಿಕರು ಅಪಾಯದಿಂದ ಪಾರು: ಯಾತ್ರೆ ಹೊರಟಿದ್ದ ತಂಡದವರ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rudra-garuda-purana

‘ರುದ್ರ ಗರುಡ ಪುರಾಣ’ದಲ್ಲಿ ರಿಷಿ

‘ಇಲ್ಲಿ ನನ್ನನ್ನು ತುಳಿಯುತ್ತಿದ್ದಾರೆ…’: ಸಿನಿಮಾದಿಂದ ದೂರವಾಗಲು JK ನಿರ್ಧಾರ

‘ಇಲ್ಲಿ ನನ್ನನ್ನು ತುಳಿಯುತ್ತಿದ್ದಾರೆ…’: ಸಿನಿಮಾದಿಂದ ದೂರವಾಗಲು JK ನಿರ್ಧಾರ

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

Naveen shankar spoke about cini journey

ಹೀರೋ- ವಿಲನ್ ಅಂತೇನಿಲ್ಲ, ಪಾತ್ರಗಳಿಗೆ ನ್ಯಾಯ ಕೊಡುವುದೇ ನನ್ನಉದ್ದೇಶ… ನವೀನ್‌ ಶಂಕರ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ