ಪುನೀತ್‌ ಬರ್ತ್‌ ಡೇಗೆ ‘ಅಪ್ಪು’ಗೆಯ ಗಾನ

Team Udayavani, Mar 18, 2023, 12:32 PM IST

ಪುನೀತ್‌ ಬರ್ತ್‌ ಡೇಗೆ ‘ಅಪ್ಪು’ಗೆಯ ಗಾನ

ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಚಿತ್ರರಂಗಕ್ಕೆ ಬರುವ ಅನೇಕ ಪ್ರತಿಭಾವಂತರಿಗೆ ಪ್ರೇರಣೆ. ಪುನೀತ್‌ ಅಗಲಿ ವರ್ಷ ಕಳೆದರೂ, ಅವರ ನೆನಪಿನ “ಅಪ್ಪು’ಗೆಯಲ್ಲಿ ಚಿತ್ರರಂಗಕ್ಕೆ ಬರುತ್ತಿರುವವರ ಸಂಖ್ಯೆ ಲೆಕ್ಕಕ್ಕೆ ಸಿಲುಕದ್ದು. ಪುನೀತ್‌ ರಾಜಕುಮಾರ್‌ ಅವರಿಂದ ಪ್ರೇರಣೆ ಪಡೆದುಕೊಂಡ ಇಂಥದ್ದೇ ಒಂದು ತಂಡ ಈಗ ಅವರ ನೆನಪಿನಲ್ಲಿಯೇ ಒಂದು ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಸಾರಿಗೆ, ರಿಯಲ್‌ ಎಸ್ಟೇಟ್‌ ಮೊದಲಾದ ಉದ್ಯಮಗಳಲ್ಲಿ ಗುರುತಿಸಿ ಕೊಂಡಿರುವ, ಪುನೀತ್‌ ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿಯೂ ಆಗಿರುವ ಮಹಿ ಶಿವ ಶಂಕರ್‌ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಇದರ ಮೊದಲ ಭಾಗವಾಗಿ ಪುನೀತ್‌ ರಾಜಕುಮಾರ್‌ ಜನ್ಮದಿನದ ಸಂದರ್ಭದಲ್ಲಿ “ಅಪ್ಪು ಕಥಾ ಗಾನ’ ಎಂಬ ವಿಡಿಯೋ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ನಿರ್ಮಾಪಕ ಮಹಿ ಶಿವಶಂಕರ್‌ ನಿರ್ಮಿಸಿ, ಅಭಿನಯಿಸಿರುವ ಈ ವಿಡಿಯೋ ಹಾಡಿಗೆ ಚರಣ್‌ ಅರ್ಜುನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ನಟ ಕಂ ನಿರ್ಮಾಪಕ ಮಹಿ ಶಿವಶಂಕರ್‌, “ನಾನು ಮೊದಲಿನಿಂದಲೂ ಪುನೀತ್‌ ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ. ಅವರೊಂದಿಗೆ ಸಿನಿಮಾ ಮಾಡಬೇಕೆಂಬ ಕನಸು ನನಸಾಗಲಿಲ್ಲ. ಹಾಗಾಗಿ ಅವರ ನಿಧನದ ನಂತರ ಅವರ ಬಗ್ಗೆಯೇ ಸಿನಿಮಾ ಮಾಡೋಣ ಎಂಬ ನಿರ್ಧಾರಕ್ಕೆ ಬಂದೆವು. ಪುನೀತ್‌ ರಾಜಕುಮಾರ್‌ ಅವರನ್ನು ಹೃದಯದಲ್ಲಿ ಆರಾಧಿಸುವ ಅಭಿಮಾನಿಯೊಬ್ಬನ ಕಥೆ ಈ ಸಿನಿಮಾದಲ್ಲಿದೆ. ಪುನೀತ್‌ ಅಗಲಿಕೆಯ ನೋವು ಆತನ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ಎಂಬುದು ಈ ಸಿನಿಮಾದ ಕಥೆಯ ಒಂದು ಎಳೆ. ಸದ್ಯ ಈ ಸಿನಿಮಾದ ಕೆಲಸ ಶುರುವಾಗಿದ್ದು, ಪುನೀತ್‌ ಅವರ ಮೇಲಿನ ಹಾಡನ್ನೇ ಮೊದಲು ಚಿತ್ರೀಕರಿಸಲಾಗಿದೆ. ಪುನೀತ್‌ ಅವರ ಜನ್ಮದಿನದ ಅಂಗವಾಗಿ ಸಿನಿಮಾದಲ್ಲಿ ಬರುವ ಈ ಹಾಡನ್ನು ಮೊದಲು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸೋಹನ್‌ ಅಭಿರಾಮ್‌, “ಈ ಸಿನಿಮಾಕ್ಕೆ “ಅಪ್ಪು’ ಎಂದು ಟೈಟಲ್‌ ಇಡಬೇಕೆಂದು ನಿರ್ಧರಿಸಿ, ಟೈಟಲ್‌ ನೀಡುವಂತೆ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದೇವೆ. ಈ ಟೈಟಲ್‌ ಸಿಕ್ಕರೆ, ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತೇವೆ’ ಎಂದು ವಿವರಣೆ ನೀಡಿದರು.

ಟಾಪ್ ನ್ಯೂಸ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

2–gadaga

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

tdy-2ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

surya rohith

ಕೆಲವು ಪಂದ್ಯಗಳಿಗೆ ರೋಹಿತ್‌ ರೆಸ್ಟ್‌ : ಸೂರ್ಯಕುಮಾರ್‌ ಯಾದವ್‌ ಉಸ್ತುವಾರಿ ನಾಯಕ

d k

ವಿಧಾನ-ಕದನ 2023: ಇಲ್ಲಿ ವ್ಯಕ್ತಿ ನಿಷ್ಠೆಗಿಂತ ಪಕ್ಷನಿಷ್ಠೆಯೇ ಅಂತಿಮ!

poli

ಡೈಲಿ ಡೋಸ್‌: ಆಡಿಸುವಾತ ಆಟವ ಮುಗಿಸಿ ಸೀಟಿ ಊದಿದ ಓಡುವಾತನ ಕುರ್ಚಿ ಕಸಿದು ಕೆಳಗೆ ಕೂರಿಸಿದ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-23

ಮಾಸ್‌ ರಾಮಾಚಾರಿ 2.0

tdy-13

ಯಲಾಕುನ್ನಿಗೆ ಮುಹೂರ್ತ ಸಂಭ್ರಮ

tdy-12

ಹಾರರ್‌ ʼತಾಯ್ತʼದಲ್ಲಿ ಹರ್ಷಿಕಾ ನಟನೆ

ಶಿವಾಜಿ ಸುರತ್ಕಲ್‌ 2 ಟ್ರೇಲರ್‌ ಮಾ.31ಕ್ಕೆ ರಿಲೀಸ್

ಶಿವಾಜಿ ಸುರತ್ಕಲ್‌ 2 ಟ್ರೇಲರ್‌ ಮಾ.31ಕ್ಕೆ ರಿಲೀಸ್

part 3 trend in sandalwood

ಪಾರ್ಟ್‌-2 ಆಯ್ತು ಈಗ ಪಾರ್ಟ್‌-3 ಟ್ರೆಂಡ್

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ