
ಅರ್ಜುನ್ ಜನ್ಯಾ ‘45’ ಚಿತ್ರಕ್ಕೆ ನಾಯಕಿಯ ಹುಡುಕಾಟ
Team Udayavani, Mar 26, 2023, 2:05 PM IST

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ಸಿನಿಮಾ ನಿರ್ದೇಶನದತ್ತ ಮುಖ ಮಾಡಿದ್ದು, ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾಕ್ಕೆ “45′ ಎಂದು ಟೈಟಲ್ ಕೂಡ ಫಿಕ್ಸ್ ಆಗಿದ್ದು ನಿಮಗೆ ಗೊತ್ತಿರಬಹುದು.
ಇನ್ನು “45′ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಒಟ್ಟಾಗಿ ಅಭಿನಯಿಸುತ್ತಿದ್ದು, ಸದ್ಯ ಸಿನಿಮಾದ ಅಂತಿಮ ಹಂತದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನಿಮಾದ ನಾಯಕಿಯ ಹುಡುಕಾಟಕ್ಕೆ ಇಳಿದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಹೀರೋಯಿನ್‌ಗಾಗಿ ಆಡಿಷನ್ ಕಾಲ್ ಮಾಡಿರುವ ಚಿತ್ರತಂಡ, “45′ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಆಸಕ್ತಿಯಿರುವವರು ತಮ್ಮ ಇತ್ತೀಚಿನ ಎಡಿಟ್ ಮಾಡದ ಫೋಟೊ ಹಾಗೂ ಚಿಕ್ಕ ವಿಡಿಯೋ ತುಣುಕನ್ನು ಚಿತ್ರತಂಡಕ್ಕೆ ಕಳುಹಿಸಬಹುದು. ಕನ್ನಡ ಬರುವವರಿಗೆ ಮೊದಲ ಆದ್ಯತೆ ಎಂದು ತಿಳಿಸಿದೆ.
ಈ ಹಿಂದೆ “ನಾತಿಚರಾಮಿ’, “ಪಡ್ಡೆಹುಲಿ’, “ಗಾಳಿಪಟ-2′ ಮೊದಲಾದ ಸಿನಿಮಾಗಳನ್ನು ನಿರ್ಮಿಸಿರುವ ರಮೇಶ್ ರೆಡ್ಡಿ “45′ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಸಿನಿಮಾ ಕನ್ನಡದ ಜೊತೆಗೆ ತಮಿಳು, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲೂ ತೆರೆಗೆ ಬರಲಿದೆ.
ಟಾಪ್ ನ್ಯೂಸ್
