ಗತ ವೈಭವ ನಾಯಕಿ ಆಶಿಕಾ ರಂಗನಾಥ್‌


Team Udayavani, Aug 4, 2022, 12:47 PM IST

ಗತ ವೈಭವ ನಾಯಕಿ ಆಶಿಕಾ ರಂಗನಾಥ್‌

ಸಿಂಪಲ್‌ ಸುನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಗತ ವೈಭವ’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ “ಗತ ವೈಭವ’ ಸಿನಿಮಾದ 35%ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಕೊಡಗು, ದೇವರಾಯನ ದುರ್ಗ, ತುಮಕೂರು ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಇದೀಗ “ಗತ ವೈಭವ’ ಸಿನಿಮಾದ ಬಗ್ಗೆ ಚಿತ್ರತಂಡದ ಕಡೆಯಿಂದ ಹೊಸ ಅಪ್ಡೇಟ್‌ ಒಂದು ಹೊರಬಿದ್ದಿದೆ. ಅದೇನೆಂದರೆ, “ಗತ ವೈಭವ’ ಸಿನಿಮಾದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್‌ ಕಾಣಿಸಿ ಕೊಳ್ಳುತ್ತಿದ್ದಾರೆ.

ಹೌದು, “ಗತ ವೈಭವ’ ಸಿನಿಮಾದಲ್ಲಿ ನವ ನಾಯಕ ನಟ ದುಶ್ಯಂತ್‌ ಅವರೊಂದಿಗೆ ತೆರೆಮೇಲೆ ಆಶಿಕಾ ರಂಗನಾಥ್‌ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಫ್ಯಾಂಟಸಿ ಮತ್ತು ರೊಮ್ಯಾಂಟಿಕ್‌ -ಕಾಮಿಡಿ ಕಥಾಹಂದರದ “ಗತ ವೈಭವ’ ಸಿನಿಮಾದಲ್ಲಿ ನಾಯಕ ದುಶ್ಯಂತ್‌ ಪೈರೆಟ್ಸ್‌ ಮತ್ತು ಪೊರ್ಚುಗೀಸ್‌ ಲುಕ್‌ನ ಡಬಲ್‌ ಶೇಡ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾಯಕಿ ಆಶಿಕಾ ಸಿನಿಮಾದಲ್ಲಿ ದೇವಕನ್ಯೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈಗಾಗಲೇ ಸದ್ದಿಲ್ಲದೆ “ಗತ ವೈಭವ’ ಚಿತ್ರತಂಡ ಸೇರಿಕೊಂಡಿರುವ ಆಶಿಕಾ, ಕಳೆದ ಕೆಲ ದಿನಗಳಿಂದ “ಗತ ವೈಭವ’ ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದಾರೆ. ಇನ್ನು “ಗತ ವೈಭವ’ ಸಿನಿಮಾದಲ್ಲಿ ಅಶಿಕಾ ರಂಗನಾಥ್‌ ಅಭಿನಯಿಸುತ್ತಿರುವ ದೇವಕನ್ಯೆ ಲುಕ್‌ ಹೇಗಿರಲಿದೆ ಅನ್ನೋ ಕುತೂಹಲಕ್ಕೆ ಇಂದು ಚಿತ್ರತಂಡ ಉತ್ತರ ನೀಡಲಿದೆ. ನಾಯಕಿಯ ಅನಾವರಣ ದೃಶ್ಯ ತುಣುಕು ಇಂದು “ಸುನಿ ಸಿನಿಮಾಸ್‌’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದ್ದು, ಆಶಿಕಾ ಲುಕ್‌ ರಿವೀಲ್‌ ಆಗಲಿದೆ.

“ಸುನಿ ಸಿನಿಮಾಸ್‌’ ಬ್ಯಾನರ್‌ನಲ್ಲಿ ಸಿಂಪಲ್‌ ಸುನಿ, ದೀಪಕ್‌ ಜಂಟಿಯಾಗಿ ನಿರ್ಮಿಸುತ್ತಿರುವ “ಗತ ವೈಭವ’ ಸಿನಿಮಾಕ್ಕೆ ವಿಲಿಯಂ ಡೇವಿಡ್‌ ಛಾಯಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.

ಇನ್ನು ತಮ್ಮ ಹೊಸ “ದೇವಕನ್ಯೆ’ಯ ಪಾತ್ರದ ಬಗ್ಗೆ ಆಶಿಕಾ ರಂಗನಾಥ್‌ ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯದೊಳಗೆ “ಗತ ವೈಭವ’ ತೆರೆಗೆ ಬರುವ ಯೋಚನೆಯಲ್ಲಿದೆ.

ಟಾಪ್ ನ್ಯೂಸ್

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್‌

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್‌

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ

tricolour flag

ಮನೆ ಮನೆಗಳಲ್ಲಿ ಹಾರಿಸಿದ ತ್ರಿವರ್ಣ ಧ್ವಜ ಇಳಿಸುವ ಮುನ್ನ ಈ ಅಂಶಗಳನ್ನು ನೆನಪಿಡಿ

news-1

ಕಡಬ: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಮೃತ್ಯು

ವಾಡಿ : ಎಸಿಸಿ ಆವರಣದಲ್ಲಿ ಉಲ್ಟಾ ಹಾರಿದ ರಾಷ್ಟ್ರ ಬಾವುಟ!

ವಾಡಿ : ಎಸಿಸಿ ಆವರಣದಲ್ಲಿ ಉಲ್ಟಾ ಹಾರಿದ ರಾಷ್ಟ್ರ ಬಾವುಟ!

ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಿದೆ: ನಳಿನ್‍ ಕುಮಾರ್ ಕಟೀಲ್

ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಿದೆ: ನಳಿನ್‍ ಕುಮಾರ್ ಕಟೀಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ಲಕ್ಷ್ಮೀ ಪುತ್ರನ ನಂಬಿ ಬಂದವರು…

ಲಕ್ಷ್ಮೀ ಪುತ್ರನ ನಂಬಿ ಬಂದವರು…

ಕಾಂತಾರದಿಂದ “ಸಿಂಗಾರ ಸಿರಿಯೇ” ಹಾಡು ಸೋಮವಾರ ಬಿಡುಗಡೆ

ಕಾಂತಾರದಿಂದ “ಸಿಂಗಾರ ಸಿರಿಯೇ” ಹಾಡು ಸೋಮವಾರ ಬಿಡುಗಡೆ

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

monsoon raga

‘ಮಾನ್ಸೂನ್‌ ರಾಗ’ ರಿಲೀಸ್‌ ಮುಂದಕ್ಕೆ: ಆ.19ಕ್ಕೆ ತೆರೆ ಕಾಣುತ್ತಿಲ್ಲ ಡಾಲಿ ಚಿತ್ರ

MUST WATCH

udayavani youtube

Aurobindo Ghoseರ ಕನಸಿನ ಭಾರತ ಹೇಗಿತ್ತು ಗೊತ್ತಾ?

udayavani youtube

ಮಂಗಳೂರು: ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ತಿರಂಗಾ ಕಲಾಕೃತಿ ರಚನೆ |

udayavani youtube

ಮರೆತುಹೋದ ಅಗೆಲು ಸೇವೆಯ ಪ್ರಸಾದದ ಊಟ ಮೂರು ದಿನವಾದ್ರೂ ಹಾಳಾಗಿರಲಿಲ್ಲ.. |ಕೊರಗಜ್ಜ ಸ್ವಾಮಿ

udayavani youtube

ಷೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ

udayavani youtube

ಉಬ್ಬು ಶಿಲ್ಪದಲ್ಲಿ ಅರಳಿದೆ ಅಮರ ಸುಳ್ಯ ಕ್ರಾಂತಿಯ ಚರಿತ್ರೆ

ಹೊಸ ಸೇರ್ಪಡೆ

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ಕಾಪು ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಕಾಪು ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ ವಿಶ್ವಚೇತನ

ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ ವಿಶ್ವಚೇತನ

k gopalaiah

ದೇಶದ ಸಂಸ್ಕೃತಿ, ಪರಂಪರೆಗೆ ಪ್ರಾಕೃತ ಭಾಷೆಯ ಕೊಡುಗೆ ಅಪಾರ: ಕೆ.ಗೋಪಾಲಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.