Udayavni Special

ತೆಲುಗಿನತ್ತ ಅಯೋಗ್ಯ: ಬಿಡುಗಡೆ ಅಡ್ಡಿಗೆ ಸಿಕ್ತು ಪರಿಹಾರ


Team Udayavani, Aug 28, 2018, 12:08 PM IST

ayogya.jpg

ಸತೀಶ್‌ ನೀನಾಸಂ ಅಭಿನಯದ “ಅಯೋಗ್ಯ’ ಚಿತ್ರ ತೆಲುಗಿನತ್ತ ಮುಖ ಮಾಡಿದ್ದು, ಅಲ್ಲಿ ಬಿಡುಗಡೆ ಸಮಸ್ಯೆ ಎದುರಿಸಿದ್ದು ಎಲ್ಲವೂ ಗೊತ್ತು. ಈಗ ಹೊಸ ಸುದ್ದಿ ಅಂದರೆ, ಹೈದರಾಬಾದ್‌ನಲ್ಲಿ ಬಿಡುಗಡೆಗೆ ಅಡ್ಡಿಯಾಗಿದ್ದ ಆ ಸಮಸ್ಯೆ ಈಗ ಬಗೆಹರಿದಿದೆ. ಹೌದು, ಹೈದರಾಬಾದ್‌ನಲ್ಲಿ “ಅಯೋಗ್ಯ’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕ ಮಹೇಶ್‌ ಮತ್ತು ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌ ಎಲ್ಲಾ ತಯಾರಿ ನಡೆಸಿದ್ದರು.

ಆದರೆ, ಅಲ್ಲಿನ ಮಲ್ಟಿಪ್ಲೆಕ್ಸ್‌ನಲ್ಲಿ ಮಾತ್ರ “ಅಯೋಗ್ಯ’ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ. ಇದರಿಂದಾಗಿ ಚಿತ್ರತಂಡಕ್ಕೆ ತೀವ್ರ ಅಸಮಾಧಾನವಾಗಿದ್ದು ನಿಜ. ಚಿತ್ರತಂಡ ಮಲ್ಟಿಪ್ಲೆಕ್ಸ್‌ನ ಧೋರಣೆ ವಿರುದ್ಧ ಪ್ರತಿಭಟಿಸಿದ್ದೂ ಉಂಟು. ಆದರೆ, ಹೈದರಾಬಾದ್‌ ಮಲ್ಟಿಪ್ಲೆಕ್ಸ್‌ ಆಡಳಿತ ವರ್ಗ ಮಾತ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಚಿತ್ರಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಿ ಎಂಬ ಪತ್ರ ಕಳುಹಿಸಿದರೆ ಮಾತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಾಗಿ ಪಟ್ಟು ಹಿಡಿದಿತ್ತು.

ಅದರಂತೆ, ಚಿತ್ರತಂಡ ಸೋಮವಾರ ಫಿಲ್ಮ್ ಚೇಂಬರ್‌ಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ವಿವರಿಸಿದೆ. ಸಮಸ್ಯೆ ಅರಿತ ಮಂಡಳಿ ಪದಾಧಿಕಾರಿಗಳು, ಹೈದರಾಬಾದ್‌ ಮಲ್ಟಿಪ್ಲೆಕ್ಸ್‌ಗೆ ಪತ್ರ ರವಾನಿಸಿದ್ದಾರೆ. ಹೀಗಾಗ, “ಅಯೋಗ್ಯ’ ಚಿತ್ರ ಪ್ರದರ್ಶನದ ಸಮಸ್ಯೆ ಬಗೆಹರಿದಂತಾಗಿದೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಸತೀಶ್‌ ನೀನಾಸಂ, “ರಾಜ್ಯದಲ್ಲಿ “ಅಯೊಗ್ಯ’ ಒಳ್ಳೆಯ ಮೆಚ್ಚುಗೆ ಪಡೆದಿದೆ.

ನಮ್ಮ ಚಿತ್ರವನ್ನು ಹೊರ ರಾಜ್ಯದಲ್ಲಿರುವ ಕನ್ನಡಿಗರೂ ವೀಕ್ಷಣೆ ಮಾಡಬೇಕು ಎಂಬ ಕಾರಣಕ್ಕೆ ಹೈದರಾಬಾದ್‌ ಮಲ್ಟಿಪ್ಲೆಕ್ಸ್‌ನಲ್ಲಿ ಹಾಕಲು ತಯಾರಿ ನಡೆಸಿದಾಗ, ಸಮಸ್ಯೆ ಎದುರಾಗಿತ್ತು. ಫಿಲ್ಮ್ ಚೇಂಬರ್‌ ಮಧ್ಯಸ್ಥಿಕೆ ವಹಿಸಿ, ಆ ಸಮಸ್ಯೆ ಬಗೆಹರಿಸಿದೆ. ನಿಜಕ್ಕೂ ಇದು “ಅಯೋಗ್ಯ’ನ ಹೋರಾಟಕ್ಕೆ ಸಿಕ್ಕ ಜಯ. ಎಲ್ಲೆಡೆ ಗಳಿಕೆ ಚೆನ್ನಾಗಿ ಆಗುತ್ತಿದೆ. ಹೊರಗಡೆಯೂ ನಮ್ಮ ಚಿತ್ರದ ಬಗ್ಗೆ ಗೊತ್ತಾಬೇಕು ಅಂತ ಹೋದರೆ, ಅಲ್ಲಿ ಅವಕಾಶ ಸಿಗಲಿಲ್ಲ.

ಅದು ನಮ್ಮ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಚೆನ್ನೈ, ಪೂನಾ, ಗೋವಾ, ಮುಂಬೈನಲ್ಲಿ ಪ್ರದರ್ಶನವಾಗುತ್ತಿದೆ. ಆದರೆ, ಹೈದರಾಬಾದ್‌ನಲ್ಲಿ ಸಮಸ್ಯೆ ಎದುರಾಗಿದ್ದು ಎಷ್ಟು ಸರಿ? ಕನ್ನಡ ಚಿತ್ರಗಳಿಗೆ ಈ ರೀತಿಯ ಧೋರಣೆ ಮಾಡಬಾರದು. ಸದ್ಯಕ್ಕೆ ಮಲ್ಟಿಪ್ಲೆಕ್ಸ್‌ ಸಮಸ್ಯೆ ಬಗೆಹರಿದಿದೆ. ಅಲ್ಲಿರುವ ಸಿಂಗಲ್‌ ಸ್ಕ್ರೀನ್‌ನಲ್ಲೂ “ಅಯೋಗ್ಯ’ ಪ್ರದರ್ಶನ ಕಾಣಬೇಕು ಎಂಬುದು ನಮ್ಮ ಮನವಿ. ಈ ನಿಟ್ಟಿನಲ್ಲೂ ಮಂಡಳಿ ಅಲ್ಲಿನ ಮಂಡಳಿ ಜೊತೆ ಮಾತನಾಡುವುದಾಗಿ ಭರವಸೆ ಕೊಟ್ಟಿದೆ.

ಬೇರೆ ಭಾಷೆ ಚಿತ್ರಗಳನ್ನು ಕನ್ನಡಿಗರು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ಇದು ಕನ್ನಡಿಗರು ತೋರುವ ಪ್ರೀತಿ. ಆದರೆ, ಕನ್ನಡ ಚಿತ್ರಗಳಿಗೇಕೆ ಅಲ್ಲಿ ಮನ್ನಣೆ ಸಿಗುವುದಿಲ್ಲ. ಇದು ನಮಗೆ ಸಿಕ್ಕ ಮೊದಲ ಜಯ. ಇನ್ನು ಮುಂದೆ ಎಲ್ಲರೂ ಹೋರಾಡಬೇಕು’ ಎಂಬುದು ಸತೀಶ್‌ ಮಾತು. ನಿರ್ದೇಶಕ ಮಹೇಶ್‌ ಅವರಿಗೂ ಎಲ್ಲಿಲ್ಲದ ಖುಷಿ. ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ.

“ಆರಂಭದಲ್ಲಿ “ಅಯೋಗ್ಯ’ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಚಿತ್ರ ನೋಡಿದ ಗ್ರಾಮ ಪಂಚಾಯ್ತಿ ಸದಸ್ಯರೆಲ್ಲರೂ ಖುಷಿಗೊಂಡಿದ್ದಾರೆ. ಒಳ್ಳೆಯ ಚಿತ್ರವನ್ನು ಕನ್ನಡಿಗರು ಎಂದಿಗೂ ಬಿಟ್ಟಿಲ್ಲ. ನಾವೇನು ವಿನಾಕಾರಣ ಗಿಮಿಕ್‌ ಮಾಡುತ್ತಿಲ್ಲ. ಆದ ತೊಂದರೆ ಬಗ್ಗೆ ಗಮನಕ್ಕೆ ತಂದಿದ್ದೇವೆ. ಮಂಡಳಿ ಸ್ಪಂದಿಸಿದೆ. ಇದು ಶಾಶ್ವತ ಪರಿಹಾರವೇನಲ್ಲ. ಕನ್ನಡದ ಎಲ್ಲಾ ಚಿತ್ರಗಳಿಗೂ ಅಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವಂತಾಗಬೇಕು’ ಎಂಬುದು ಮಹೇಶ್‌ ಆಗ್ರಹ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆನ್‌ಲೈನ್‌ ಪಾಠಕ್ಕೆ ಅಸ್ತು ; ಶ್ರೀಧರ್‌ ನೇತೃತ್ವದ ತಜ್ಞರ ಸಮಿತಿಯಿಂದ 10 ಶಿಫಾರಸು

ಆನ್‌ಲೈನ್‌ ಪಾಠಕ್ಕೆ ಅಸ್ತು ; ಶ್ರೀಧರ್‌ ನೇತೃತ್ವದ ತಜ್ಞರ ಸಮಿತಿಯಿಂದ 10 ಶಿಫಾರಸು

ಕೋವಿಡ್ 19 ಕಡಿವಾಣ: ಕನ್ನಡಿಗ ಸ್ಟಾರ್ಟ್‌ಅಪ್‌ಗಳ ಸಾಧನೆ

ಕೋವಿಡ್ 19 ಕಡಿವಾಣ: ಕನ್ನಡಿಗ ಸ್ಟಾರ್ಟ್‌ಅಪ್‌ಗಳ ಸಾಧನೆ

ನಗರಗಳಿಗೆ 24 ತಾಸು ಕುಡಿಯುವ ನೀರು

ನಗರಗಳಿಗೆ 24 ತಾಸು ಕುಡಿಯುವ ನೀರು

24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು

24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಸಾವು

ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಸಾವು

ದ.ಕ.: ಕೋವಿಡ್ 19ನಿಂದ ಮತ್ತೊಬ್ಬರ ಸಾವು ; ಉಡುಪಿ ಜಿಲ್ಲೆ : 28 ಪಾಸಿಟಿವ್‌

ದ.ಕ.: ಕೋವಿಡ್ 19ನಿಂದ ಮತ್ತೊಬ್ಬರ ಸಾವು ; ಉಡುಪಿ ಜಿಲ್ಲೆ : 28 ಪಾಸಿಟಿವ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನಿಷ್ಟದ ಸಿನೆಮಾ ಯುವ ಜನರ ಅಯ್ಕೆ: ಮುತ್ತಿನ ಹಾರ ; ಬದುಕಿನ ಸವಾಲು ತೆರೆದಿಡುವ ಚಿತ್ರ

ನನ್ನಿಷ್ಟದ ಸಿನೆಮಾ ಯುವ ಜನರ ಅಯ್ಕೆ: ಮುತ್ತಿನ ಹಾರ ; ಬದುಕಿನ ಸವಾಲು ತೆರೆದಿಡುವ ಚಿತ್ರ

revati nikil

ಪತ್ನಿ ಜೊತೆ ನಿಖಿಲ್ ವರ್ಕೌಟ್ ಹೇಗಿದೆ ಗೊತ್ತಾ?

yogi birthday

“ಒಂಬತ್ತನೇ ದಿಕ್ಕಿ’ನಲ್ಲಿ ಯೋಗಿ ಹುಟ್ಟುಹಬ್ಬ!

aari-vaikunta

ಕುಂಬಳಕಾಯಿ ಒಡೆದ “ದಾರಿ ಯಾವುದಯ್ಯಾ ವೈಕುಂಠಕ್ಕೆ’

tiger shoot

ಹಾಡುಗಳ ಚಿತ್ರೀಕರಣದತ್ತ “ತ್ರಿವಿಕ್ರಮ’

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

ಆನ್‌ಲೈನ್‌ ಪಾಠಕ್ಕೆ ಅಸ್ತು ; ಶ್ರೀಧರ್‌ ನೇತೃತ್ವದ ತಜ್ಞರ ಸಮಿತಿಯಿಂದ 10 ಶಿಫಾರಸು

ಆನ್‌ಲೈನ್‌ ಪಾಠಕ್ಕೆ ಅಸ್ತು ; ಶ್ರೀಧರ್‌ ನೇತೃತ್ವದ ತಜ್ಞರ ಸಮಿತಿಯಿಂದ 10 ಶಿಫಾರಸು

ಕೋವಿಡ್ 19 ಕಡಿವಾಣ: ಕನ್ನಡಿಗ ಸ್ಟಾರ್ಟ್‌ಅಪ್‌ಗಳ ಸಾಧನೆ

ಕೋವಿಡ್ 19 ಕಡಿವಾಣ: ಕನ್ನಡಿಗ ಸ್ಟಾರ್ಟ್‌ಅಪ್‌ಗಳ ಸಾಧನೆ

seveenty icu

ಐಸಿಯುನಲ್ಲಿ ಒಟ್ಟು 175 ಸೋಂಕಿತರು

hechida-sonku

ಹೆಚ್ಚಿದ ಸೋಂಕು.. ಡ್ಯೂಟಿಗೆ ಬಂಕು..

ನಗರಗಳಿಗೆ 24 ತಾಸು ಕುಡಿಯುವ ನೀರು

ನಗರಗಳಿಗೆ 24 ತಾಸು ಕುಡಿಯುವ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.