ಸಲಗ ಹಿಂದೆ ಕೆ.ಪಿ.ಶ್ರೀಕಾಂತ್‌

ದುನಿಯಾ ವಿಜಿ ಚಿತ್ರಕ್ಕೆ ಟಗರು ತಂಡ ಕೆಲಸ

Team Udayavani, May 7, 2019, 3:02 AM IST

ದುನಿಯಾ ವಿಜಯ್‌ ಅವರು “ಸಲಗ’ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದು ನೆನಪಿರಬಹುದು. “ಕುಸ್ತಿ’ ಚಿತ್ರ ಮಾಡುವುದಾಗಿ ಅನೌನ್ಸ್‌ ಮಾಡಿದ್ದ ದುನಿಯಾ ವಿಜಯ್‌, ಕೆಲ ಕಾರಣಗಳಿಂದ ಆ ಚಿತ್ರವನ್ನು ಕೈ ಬಿಟ್ಟು, ಬೇರೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಕೆಲ ದಿನಗಳ ಬಳಿಕ “ಸಲಗ’ ಎಂಬ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಾಯಿತು.

“ಸಲಗ’ ಚಿತ್ರವನ್ನು ದುನಿಯಾ ವಿಜಯ್‌ ಅವರೇ ನಿರ್ಮಾಣ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಅದೊಂದು ಬೇರೆ ರೀತಿಯ ಆ್ಯಕ್ಷನ್‌ ಸಿನಿಮಾ ಎಂದು ಹೇಳಿದ್ದ ವಿಜಯ್‌, ಆಗ ಸಿಕ್ಕ ಕಥೆಗೆ ನಿರ್ದೇಶಕರು ಯಾರು ಎಂಬುದನ್ನು ಹೇಳಿರಲಿಲ್ಲ. ಆಗಿನ್ನೂ ಸ್ಕ್ರಿಪ್ಟ್ ಹಂತದಲ್ಲಿದ್ದ “ಸಲಗ’ ಚಿತ್ರ ಈಗ ಶುರುವಾಗುವ ಲಕ್ಷಣ ಕಾಣುತ್ತಿದೆ.

ಹೊಸ ವಿಷಯವೆಂದರೆ, “ಸಲಗ’ ಚಿತ್ರದಲ್ಲೊಂದು ಹೊಸ ಬದಲಾವಣೆಯಾಗಿದೆ. ಚಿತ್ರವನ್ನು ಕೆ.ಪಿ.ಶ್ರೀಕಾಂತ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ ಎಂಬುದೇ ಆ ಹೊಸ ಬದಲಾವಣೆ. ಹೌದು, “ಟಗರು’ ಸಿನಿಮಾ ನಂತರ ಕೆ.ಪಿ.ಶ್ರೀಕಾಂತ್‌ ಅವರು, “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರವನ್ನು ನಿರ್ಮಿಸುವುದಾಗಿ ಹೇಳಿದ್ದರು.

ಚಿತ್ರೀಕರಣ ಶುರುವಾದ ಬಳಿಕ ಆ ಸಿನಿಮಾದಿಂದ ಹೊರಬಂದ ಕೆ.ಪಿ.ಶ್ರೀಕಾಂತ್‌, ಸುದೀಪ್‌ ಅವರಿಗೊಂದು ಸಿನಿಮಾ ಮಾಡುವುದಾಗಿ ಘೋಷಿಸಿದರು. ಆ ಚಿತ್ರಕ್ಕೆ ದುನಿಯಾ ಸೂರಿ ನಿರ್ದೇಶಕ ಎಂಬುದನ್ನೂ ಹೇಳಿಕೊಂಡರು. ಆ ಸಿನಿಮಾಗೂ ಮುನ್ನ, ದುನಿಯಾ ವಿಜಯ್‌ ಅಭಿನಯದ “ಸಲಗ’ ಚಿತ್ರ ಸೆಟ್ಟೇರಲಿದೆ ಎಂಬ ಮಾಹಿತಿ ಇದೆ. ವೀನಸ್‌ ಎಂಟರ್‌ಟೈನರ್‌ ಬ್ಯಾನರ್‌ನಲ್ಲಿ ಚಿತ್ರ ತಯಾರಾಗುತ್ತಿದೆ.

ಇನ್ನು, ಈ ಚಿತ್ರಕ್ಕಿನ್ನೂ ನಿರ್ದೇಶಕರು ಯಾರು ಎಂಬುದು ಪಕ್ಕಾ ಆಗಿಲ್ಲ. ಉಳಿದಂತೆ ಚರಣ್‌ರಾಜ್‌ ಸಂಗೀತ ನೀಡಲಿದ್ದಾರೆ. ಬಹುತೇಕ “ಟಗರು’ ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಇಲ್ಲೂ ಕೆಲಸ ಮಾಡಲಿದೆ. ಕೆ.ಪಿ.ಶ್ರೀಕಾಂತ್‌ ನಿರ್ಮಾಣದ ಅದ್ಧೂರಿ ಬಜೆಟ್‌ ಚಿತ್ರಗಳಲ್ಲಿ ‘ಸಲಗ’ವೂ ಒಂದಾಗಲಿದೆ ಎಂಬುದು ಚಿತ್ರತಂಡದ ಮಾತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ