Betegara: 29 ವರ್ಷದ ಹಿಂದಿನ ಸಿನಿಮಾ ವಿರುದ್ಧ ದೂರು
Team Udayavani, Aug 10, 2024, 12:22 PM IST
ಭಟ್ಕಳ: ಕಳೆದ 29 ವರ್ಷಗಳ ಹಿಂದೆ ತೆರೆಕಂಡ “ಬೇಟೆಗಾರ’ ಸಿನೆಮಾ ದೃಶ್ಯವೊಂದರಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ಇರಿಸಿ ಅವಮಾನ ಮಾಡಲಾಗಿದೆ ಎಂದು ಮುರ್ಡೇಶ್ವರದ ಸತೀಶ ನಾಯ್ಕ ಎಂಬುವವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ನನ್ನ ಪುತ್ರಿ ಮಾನ್ಯ ನಾಯ್ಕ ಟಿವಿಯಲ್ಲಿ ಈ ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ಐಜಿಪಿ ಪಾತ್ರಧಾರಿಯ ಟೇಬಲ್ ಮೇಲೆ ರಾಷ್ಟ್ರಧ್ವಜ ತಲೆಕೆಳಗಾಗಿಟ್ಟಿರುವ ದೃಶ್ಯ ಕಂಡು ಬಂದಿದೆ. ಬಳಿಕ ಪರಿಶೀಲಿಸಿದಾಗ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ. ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಸಿನೆಮಾ ನೋಡಿದಾಗಲೂ ರಾಷ್ಟ್ರಧ್ವಜ ತಲೆಕೆಳಗಾಗಿರುವ 1 ನಿಮಿಷ 13 ಸೆಕೆಂಡ್‌ನ ದೃಶ್ಯ ಕಾಣಿಸುತ್ತಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ರಾಷ್ಟ್ರಧ್ವಜ ತಲೆಕೆಳಗಾಗಿಟ್ಟು ಚಿತ್ರೀಕರಣ ನಡೆಸಿದ್ದು ಕ್ಷಮಾರ್ಹ ಅಲ್ಲ. ಪದೇ ಪದೇ ಈ ದೃಶ್ಯ ನೋಡಿ ದೇಶದ ರಾಷ್ಟ್ರಧ್ವಜಕ್ಕೆ ಅಪಮಾನ ಆಗಲಿದೆ. ಆದ್ದರಿಂದ ಎಲ್ಲೆಡೆ ಈ ಸಿನೆಮಾ ಪ್ರದರ್ಶನ ನಿಲ್ಲಿಸಬೇಕು. ತಕ್ಷಣ ಇದಕ್ಕೆ ಕಾರಣ ರಾದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿರುವ ಅವರು, ಚಿತ್ರದ ತುಣುಕನ್ನೂ ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.