ರಕ್ತ ಸಂಬಂಧಿಗಳೇ ಕೇಳಲ್ಲ, ಸಮಾಜ ಮಾತು ಕೇಳುತ್ತಾ?


Team Udayavani, Apr 19, 2018, 6:23 PM IST

Premier-Padmini_(179).jpg

ಜಗ್ಗೇಶ್‌ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅದೇನೆಂದರೆ, ಇನ್ನು ಮುಂದೆ ವೃತ್ತಿಪರತೆ ಇಲ್ಲದವರ ಜೊತೆಗೆ ಚಿತ್ರ ಮಾಡಬಾರದು ಎಂದು. ಜಗ್ಗೇಶ್‌ ಅವರಿಗೆ ಯಾಕೆ ಹೀಗನಿಸಿತು ಎಂದರೆ, ಅದಕ್ಕೆ ಅವರ ಬಳಿ ಉತ್ತರ ಇದೆ. “ನನ್ನ ಹತ್ತಿರ ದುಡ್ಡಿದೆ. ದುಡ್ಡಿಗಾಗಿ ಚಿತ್ರ ಮಾಡಬೇಕಾಗಿಲ್ಲ. ನಟನೆಯಲ್ಲಿರುವ ಖುಷಿ, ಬೇರೆ ಯಾವುದರಲ್ಲೂ ಇಲ್ಲ ಎಂಬುದು ಅರ್ಥವಾಗಿದೆ. ಪ್ರಪಂಚದಲ್ಲಿ ಯಾವುದಾದರೂ ವಿಷಯ ಸಂತೋಷ ಕೊಡುತ್ತದೆ ಎಂದರೆ ಅದು ನಟನೆ ಎನ್ನುತ್ತಿದ್ದರು ಡಾ. ರಾಜಕುಮಾರ್‌. ಅವರ ಮಾತು ನೂರಕ್ಕೆ ನೂರು ಸತ್ಯ.

ಹಾಗಾಗಿ ಇನ್ನು ಮುಂದೆ ಒಂದಿಷ್ಟು ಒಳ್ಳೆಯ ಪಾತ್ರಗಳನ್ನು ಮಾಡಬೇಕೆಂದು ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ ಜಗ್ಗೇಶ್‌. ಬುಧವಾರ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಜಗ್ಗೇಶ್‌ ಅಭಿನಯದ ಹೊಸ ಚಿತ್ರ “ಪ್ರೀಮಿಯರ್‌ ಪದ್ಮಿನಿ’ ಪ್ರಾರಂಭವಾಯಿತು. ಮುಹೂರ್ತದ ನಂತರ ನಡೆದ
ಪತ್ರಿಕಾಗೋಷ್ಠಿಯಲ್ಲಿ, ಜಗ್ಗೇಶ್‌ ಚಿತ್ರದ ಬಗ್ಗೆ ಮಾತನಾಡಿದರು. ಆ ನಂತರ ಹಲವು ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇನ್ನು ಇತ್ತೀಚೆಗೆ ಅವರು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಜಗ್ಗೇಶ್‌ ಈ ಬಾರಿ ಸ್ಪರ್ಧಿಸುತ್ತಿಲ್ಲ. ಈ ಕುರಿತು ಮಾತನಾಡುವ ಅವರು, “ಗೆದ್ದು ಬಿಟ್ಟೇ ಸೇವೆ ಮಾಡಬೇಕು ಅಂತಿಲ್ಲ. ರಾಯರ ಆಶೀರ್ವಾದದಿಂದ, ರಾಜ್ಯದ ಯಾವುದೇ ಭಾಗದಲ್ಲೂ, ಯಾವುದೇ ಅಧಿಕಾರಿಗೆ ಫೋನ್‌ ಮಾಡಬಹುದು. ಆ ಮಟ್ಟಿಗಿನ ಗೌರವ ಇದೆ. ಇನ್ನು ಇವತ್ತಿನ ಸ್ಥಿತಿಗತಿ ಇಷ್ಟ ಆಗುತ್ತಿಲ್ಲ. ಬಾಕ್ಸರ್‌ ಆದವನು ನೇರವಾಗಿ ಫೈಟ್‌ ಮಾಡಬೇಕು. ಈಗ ನೇರವಾಗಿಲ್ಲ. ಬರೀ ವಾಮಮಾರ್ಗ. ಮೊನ್ನೆ ಒಂದು ಘಟನೆ ನಡೆಯಿತು.

“ಭೂಮಿಗೀತ’ ನಿರ್ಮಾಪಕರಿಗೆ ಸಹಾಯ ಮಾಡೋದಕ್ಕೆ ಹೋಗಿ ನಾನು ಸಮಸ್ಯೆಗೆ ಸಿಲುಕಿಕೊಂಡೆ. 420 ರವಿ ಎಂಬ ರೌಡಿಶೀಟರ್‌, ಒಂದೂವರೆ ತಿಂಗಳಿನಿಂದ ಅವರಿಗೆ ರೋಲ್‌ಕಾಲ್‌ ಮಾಡುತ್ತಿದ್ದ. ನಾನು ಸ್ಟೇಷನ್‌ಗೆ ದೂರು ಕೊಟ್ಟೆ. ಆದರೆ, ಏನಾಯಿತು? ನನ್ನ ಬಗ್ಗೆಯೇ ಅಪಪ್ರಚಾರ ಶುರು ಆಯಿತು. ಇಷ್ಟಕ್ಕೂ ಯಾರನ್ನೋ ಕಟ್ಟಿಕೊಂಡು ನನಗೇನಾಗಬೇಕು? ಅವತ್ತೇ ನಿರ್ಧಾರ ಮಾಡಿದೆ. ನಾನು ಸಂತೋಷವಾಗಿದ್ದೀನಿ. ಇಲ್ಲದ ಉಸಾಬರಿ ನಮಗೇಕೆ ಬೇಕು? ರಾಜ್ಯಾದ್ಯಂತ ಸಾಕಷ್ಟು ಆಧ್ಯಾತ್ಮಿಕ ಕೇಂದ್ರಗಳಿವೆ. ಮಠಾಧಿಪತಿಗಳು ಕರೆಸಿ ಆಧ್ಯಾತ್ಮದ ಬಗ್ಗೆ ಮಾತಾಡುತ್ತಾರೆ. ನನಗೆ ಅದರಲ್ಲಿ ಬಹಳ ಸಂತೋಷವಿದೆ.

ನನಗೂ 55 ವರ್ಷವಾಗಿದೆ. ಈ ಸಂದರ್ಭದಲ್ಲಿ ಈ ಹೋರಾಟಗಳೆಲ್ಲಾ ಯಾರಿಗೆ ಬೇಕು? ರಕ್ತ ಸಂಬಂಧಿಗಳೇ ಮಾತು ಕೇಳಲ್ಲ, ಇನ್ನು ದೇಶಕ್ಕೆ, ಸಮಾಜಕ್ಕೆ ಬುದ್ಧಿ ಹೇಳ್ಳೋಕೆ ಆಗುತ್ತಾ? ಯಾಕೆ ಸಮಯ ಹಾಳು ಮಾಡಿಕೊಳ್ಳಬೇಕು. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ ನನಗೆ. ನನ್ನ ಪಾಡಿಗೆ ನಾನು ಇರಿ¤àನಿ. ನನ್ನ ಸಹಕಲಾವಿದರಿಗೆ ಕಷ್ಟ ಬಂದರೆ ಸ್ಪಂದಿಸುತ್ತೀನಿ. ನನ್ನ ಪರಿಸರದಲ್ಲಿ ಏನು ಮಾಡೋಕೆ ಸಾಧ್ಯವೋ ಅವೆಲ್ಲವನ್ನೂ ಮಾಡುತ್ತೀನಿ’ ಎನ್ನುತ್ತಾರೆ ಜಗ್ಗೇಶ್‌.

“ಅದೊಂದೇ ಘಟನೆ ಅಲ್ಲ, ಬೇಕಾದಷ್ಟು ಘಟನೆಗಳಿಂದ ಬೇಸರವಾಗಿದೆ’ ಎನ್ನುತ್ತಾರೆ ಜಗ್ಗೇಶ್‌. “ಅವತ್ತಾದ ಘಟನೆಯನ್ನು ರಾಜಕೀಯವಾಗಿ ಬಳಸಿಕೊಂಡರು. ಬಿಜೆಪಿ ನಾಯಕ ಹೀಗೆ ಮಾಡಿದ ಅಂತ ಸುದ್ದಿ ಮಾಡಿದರು. ಜವಾಬ್ದಾರಿ ಸ್ಥಾನದಲ್ಲಿದ್ದವರು ಪೊಲೀಸ್‌ ಸ್ಟೇಷನ್‌ಗೆ ಹೋಗಿ ಕೇಸ್‌ ಆಗಿದೆಯಾ ನೋಡಿದರಾ? ನನ್ನಿಂದ ತಪ್ಪಾಗಿದ್ದರೆ ಬುದ್ಧಿ ಕಲಿಸಿ. ಆದರೆ, ಮಾತಾಡುವ ಸ್ವಾತಂತ್ರ್ಯ ಇದೆ ಅಂತ ಪತಿವ್ರತೆನಾ ವ್ಯಭಿಚಾರಿ ಮಾಡಿ, ವ್ಯಭಿಚಾರಿನಾ ಪತಿವ್ರತೆ ಮಾಡೋದು ತಪ್ಪು. 

ಆ ಸಂದರ್ಭದಲ್ಲಿ, ನನ್ನ ಹಲವು ಅಭಿಮಾನಿಗಳು, ಇದೆಲ್ಲಾ ಹೊಲಿಸಿನಿಂದ ಆಚೆ ಬನ್ನಿ ಅಂತ ಕಿವಿ ಮಾತು ಹೇಳಿದರು. ಅವರ ಮಾತು ಕೇಳಿ, ಇನ್ಮುಂದೆ ಸನ್ಯಾಸಿ ತರಹ ಬದುಕುತ್ತೀನಿ ಅಂತ ಹೇಳಿದ್ದೀನಿ. ನನ್ನ ಪಾಡಿಗೆ ನಾನಿದ್ದುಬಿಟ್ಟಿದ್ದೇನೆ. ಬರೀ ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ ಬಿಟ್ಟರೆ ಸೋಷಿಯಲ್‌ ಮೀಡಿಯಾದಲ್ಲಿ  ಕಾಣಿಸಿಕೊಳ್ಳುತ್ತಿಲ್ಲ. ಮನೆಯಲ್ಲಿದ್ದರೂ ಹೊತ್ತೇ  ಹೋಗುವುದಿಲ್ಲ. ಆ ಮಟ್ಟಿಗೆ ಪಾರಿವಾಳ, ನಾಯಿ, ಸಂಗೀತ ಅಂತ ಸಮಯ ಕಳೆಯುತ್ತಿದ್ದೇನೆ. ಇದಕ್ಕಿಂತ ಸೌಭಾಗ್ಯ ಬೇಕಾ? ಹಿಂದೊಮ್ಮೆ ಒಂದು ಆಟೋ ಸಿಕ್ಕರೆ ಸಾಕು, ದಿನಕ್ಕೆ ನೂರು ರೂಪಾಯಿ ದುಡಿಮೆ ಆದರೆ, ಸಾಕು ಅಂತ ಕಾಯುತ್ತಿದ್ದೆ. ರಾಯರ ಕೃಪೆಯಿಂದ ನನ್ನ ಗಣಿತ ಸುಳ್ಳಾಯ್ತು. ಇವತ್ತು ಇಲ್ಲಿಯವರೆಗೂ ಬಂದಿದ್ದೇನೆ’ ಎನ್ನುತ್ತಾರೆ ಜಗ್ಗೇಶ್‌.

ಕಾಲಭೈರವನ ಸನ್ನಿಧಿಯಲಿ
ಜಗ್ಗೇಶ್‌ ಕಳೆದ ಕೆಲವು ತಿಂಗಳುಗಳಿಂದ ತಮ್ಮ ತವರೂರು ಜಡೆಮಾಯಸಂದ್ರದಲ್ಲಿ ಕಾಲಭೈರವನ ದೇವಸ್ಥಾನ ಕಟ್ಟಿಸುತ್ತಿದ್ದಾರಂತೆ. ಕಳೆದ ವರ್ಷ ಅಲ್ಲಿಗೆ ಒಮ್ಮೆ ಹೋದಾಗ, ಆ ಗ್ರಾಮದ ಹಿರಿಯಜ್ಜ ರೊಬ್ಬರು ಹಳೆಯ ದೇವಸ್ಥಾನದ ಬಗ್ಗೆ ಗಮನಕ್ಕೆ ತಂದರಂತೆ. ಆ ದೇವಸ್ಥಾನಕ್ಕೆ ಜಗ್ಗೇಶ್‌ ಅವರು ಹಿರಿಯರು ನಡೆದುಕೊಳ್ಳುತ್ತಿದ್ದರಂತೆ. ಹಾಗಾಗಿ ಆ ದೇವಸ್ಥಾನವನ್ನು ಜಗ್ಗೇಶ್‌ ಪುನರುಜ್ಜೀವನಗೊಳಿಸುತ್ತಿದ್ದಾರೆ. ಐದೂಮುಕ್ಕಾಲು ಅಡಿಯ ಭೈರವನನ್ನು ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.  ಸದ್ಯಕ್ಕೆ ಕೆಲಸಗಳು ನಡೆಯುತ್ತಿದ್ದು, ಐದಾರು ತಿಂಗಳಲ್ಲಿ ದೇವಸ್ಥಾನದ ಕೆಲಸ  ಗಿಯಲಿದೆಯಂತೆ.

ಟಾಪ್ ನ್ಯೂಸ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರೋಪ ಸಾಭೀತು ಪಡಿಸಲು ವಿಫಲ… ವಿಚ್ಛೇದನ ಕೋರಿ ದುನಿಯಾ ವಿಜಯ್ ಸಲ್ಲಿಸಿದ ಅರ್ಜಿ ವಜಾ

Court Verdict: ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಡಿವೋರ್ಸ್ ಕೇಸ್… ದುನಿಯಾ ವಿಜಯ್- ನಾಗರತ್ನ ತೀರ್ಪು ಇಂದು

Sandalwood ನಲ್ಲಿ ಮತ್ತೊಂದು ಡಿವೋರ್ಸ್ ಕೇಸ್… ದುನಿಯಾ ವಿಜಯ್- ನಾಗರತ್ನ ತೀರ್ಪು ಇಂದು

5-bhuvan

Harshika and Bhuvanಗೆ ಹಲ್ಲೆ: ಆರೋಪಿಗಳ ಜಾಮೀನು ಅರ್ಜಿ ವಜಾ

Hubballi: ನಟ ದರ್ಶನ್ ಪ್ರಕರಣದ ಕುರಿತು ಇಂದ್ರಜಿತ್ ಲಂಕೇಶ್ ಹೇಳಿದ್ದೇನು?

ನನಗೂ ದರ್ಶನ್ ಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಆದರೆ… ಇಂದ್ರಜಿತ್ ಲಂಕೇಶ್ ಹೇಳಿದ್ದೇನು?

3-darshan

Renuka Swamy Case: ಪ್ರಕರಣದಲ್ಲಿ ಪವಿತ್ರಾ ಗೌಡ ಏನೂ ತಪ್ಪು ಮಾಡಿಲ್ಲ!.. ಮಾಜಿ ಪತಿ

MUST WATCH

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

ಹೊಸ ಸೇರ್ಪಡೆ

1-asdsadas

Government ಭೂಮಿ ಮಣ್ಣು ವ್ಯಾಪಾರಕ್ಕೆ ಅವಕಾಶವಿಲ್ಲ; ಬೇಳೂರು ಎಚ್ಚರಿಕೆ

4

ಬಂಟ್ವಾಳ ಸರಕಾರಿ ಆಸ್ಪತ್ರೆ ಬಳಿಯಿಂದ ಬೈಕ್‌ ಕಳವು

court

Illegal mining case; ಬಿಜೆಪಿ ಮುಖಂಡರಾದ ಶಶಿರಾಜ್ ಶೆಟ್ಟಿ, ಪ್ರಮೋದ್ ಗೆ ಜಾಮೀನು

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.