ಕ್ರಶ್ ನಲ್ಲಿ ಫ್ರೆಶ್ ಲವ್ ಸ್ಟೋರಿ; ಹೊಸಬರ ಗೆಲ್ಲುವ ಕನಸು


Team Udayavani, May 27, 2019, 3:17 PM IST

crush-1

ಕನ್ನಡಕ್ಕೆ ದಿನ ಕಳೆದಂತೆ ಹೊಸಬರು ಕಾಲಿಡುತ್ತಲೇ ಇದ್ದಾರೆ. ಆ ಸಾಲಿಗೆ ಈಗ “ಕ್ರಶ್‌’ ಚಿತ್ರತಂಡವೂ ಸೇರ್ಪಡೆಯಾಗಿದೆ. ಹೌದು, ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಶೇ.60 ರಷ್ಟು ಶೂಟಿಂಗ್‌ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಅಭಿ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ಇವರಿಗೆ ಇದು ಮೊದಲ ಚಿತ್ರ. ಈ ಹಿಂದೆ “ಕಿರಾತಕ’ ಹಾಗು “ಮಮ್ಮಿ ಸೇವ್‌ ಮಿ’ ಚಿತ್ರ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಆರ್ಯ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಆರ್ಯ, “ರಂಗ್‌ಬಿರಂಗಿ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ಇವರಿಗೆ ನಾಯಕಿಯಾಗಿ ಪ್ರತಿಭಾ ಎಂಬ ಹೊಸ ಪ್ರತಿಭೆ ಜೋಡಿಯಾಗಿದೆ.

“ಕ್ರಶ್‌’ ಅಂದಾಕ್ಷಣ, ಇದು ಪಕ್ಕಾ ಲವ್‌ಸ್ಟೋರಿ ಚಿತ್ರ ಅಂತ ಹೇಳುವ ಅಗತ್ಯವಿಲ್ಲ. ಮೊದಲ ಸಲ ಹುಡುಗ ಅಥವಾ ಒಬ್ಬರನ್ನೊಬ್ಬರನ್ನು ನೋಡಿದಾಗ ಆಗುವ ಆಕರ್ಷಣೆಯೇ ಈ “ಕ್ರಶ್‌’. ಆ ವಿಷಯ ಇಟ್ಟುಕೊಂಡೇ ನಿರ್ದೇಶಕರು ಲವ್‌ಸ್ಟೋರಿ ಹೆಣೆದು ಚಿತ್ರ ಮಾಡಿದ್ದಾರೆ. ಹಾಗಂತ, ಇಲ್ಲಿ ಬರೀ ಪ್ರೀತಿಗೆ ಜಾಗವಿಟ್ಟಿಲ್ಲ. ಇಲ್ಲಿ ತಾಯಿ ಸೆಂಟಿಮೆಂಟ್‌, ಎಮೋಷನ್ಸ್‌, ಅಲ್ಲಲ್ಲಿ ಹಾಸ್ಯ ಇತ್ಯಾದಿ ಅಂಶಗಳೂ ಚಿತ್ರದಲ್ಲಿವೆ. ಹುಡುಗಿಯೊಬ್ಬಳನ್ನು ಹುಡುಗ ನೋಡಿದಾಗ, ಆಕೆಯ ಮೇಲೆ “ಕ್ರಶ್‌’ ಆಗಿ ಹೇಗೆಲ್ಲಾ ಅವಳನ್ನು ಇಂಪ್ರಸ್‌ ಮಾಡುತ್ತಾನೆ ಎಂಬುದು ಕಥೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಅಭಿ.

ಇನ್ನು, ಚಿತ್ರದಲ್ಲಿ ಮಂಜುನಾಥ ಹೆಗ್ಡೆ ಅವರು ತಂದೆ ಪಾತ್ರ ನಿರ್ವಹಿಸಿದರೆ, ಅಭಿನಯ ಅವರಿಲ್ಲಿ ತಾಯಿಯಾಗಿ ನಟಿಸುತ್ತಿದ್ದಾರೆ. ಅಭಿನಯ ಅವರಿಗೆ ಎರಡು ಶೇಡ್‌ ಪಾತ್ರವಿದ್ದು, ಅದನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ನಿರ್ದೇಶಕರು, ಈಗಾಗಲೇ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಶೇ.60 ರಷ್ಟು ಚಿತ್ರೀಕರಣ ನಡೆಸಿದ್ದು, ಎರಡನೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಚಿತ್ರೀಕರಿಸುವುದಾಗಿ ಹೇಳುತ್ತಾರೆ.

ಚಿತ್ರಕ್ಕೆ ಸತೀಶ್‌ ಛಾಯಾಗ್ರಹಣವಿದೆ. “ಮುದ್ದು ಮನಸೇ’ ಚಿತ್ರಕ್ಕೆ ಸಂಗೀತ ನೀಡಿದ್ದ ವಿನೀತ್‌ರಾಜ್‌ ಮೆನನ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ. ಸೆಂಟಿಮೆಂಟ್‌, ಡ್ಯುಯೆಟ್‌ ಹಾಗು ಡ್ಯಾನ್ಸಿಂಗ್‌ ಸಾಂಗ್‌ ಚಿತ್ರದಲ್ಲಿವೆ. ನಿರ್ದೇಶಕ ಅಭಿ ಕಥೆ, ಚಿತ್ರಕಥೆ ಬರೆದರೆ, ವಸಂತ್‌ ಎಂಬ ಹೊಸ ಪ್ರತಿಭೆ ಸಂಭಾಷಣೆ ಬರೆದಿದ್ದಾರೆ.

ಟಾಪ್ ನ್ಯೂಸ್

1-33

ಮಾವನಿಗೆ ದಾದಾ ಸಾಹೇಬ್ ಫಾಲ್ಕೆ, ಅಳಿಯನಿಗೆ ಅತ್ಯುತ್ತಮ ನಟ ಪ್ರಶಸ್ತಿ

Untitled-1

ಗೋವಾದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಪಿ.ಚಿದಂಬರಂ

1-rr

ಪಾಕ್ ವಿರುದ್ಧ ಸೋಲಿನ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ

Untitled-1

ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ಬಾಲಕ ನೀರುಪಾಲು

25ramamandira

ಅಯೋಧ್ಯೆ ರಾಮ ಮಂದಿರದ ತಳಪಾಯಕ್ಕೆ ಕರ್ನಾಟಕದ ಶಿಲೆಗಳು

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

randeep surjewala

ಬಿಜೆಪಿಯವರು ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ: ಸುರ್ಜೇವಾಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

love mocktail 2

ಲವ್‌ ಮಾಕ್ಟೇಲ್‌-2ಗೆ “ಯು’ ಪ್ರಮಾಣ ಪತ್ರ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

meghana gaonkar

ಶಿವಾಜಿ ಸುರತ್ಕಲ್‌-2: ಮೇಘನಾ ಗಾಂವ್ಕರ್‌ ಎಂಟ್ರಿ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

MUST WATCH

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

udayavani youtube

ಅಡಿಕೆಯನ್ನು ಸುಲಭವಾಗಿ ಬೆಳೆಯುವ ಹಲವು ವಿಧಾನಗಳು

udayavani youtube

ಭೂಕುಸಿತ ಪತ್ತೆಗೆ ಹೊಸ ಸ್ವದೇಶಿ ತಂತ್ರಜ್ಞಾನ ಸಿದ್

udayavani youtube

ನೂಜಿಬಾಳ್ತಿಲ ಶಾಲೆಯಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆ; ತಪ್ಪಿದ ಭಾರೀ ದುರಂತ

ಹೊಸ ಸೇರ್ಪಡೆ

ಅಕ್ರಮ  ಮರಳುಗಾರಿಕೆ ತಡೆಯದಿದ್ದರೆ ಅಮರಣಾಂತರ ಉಪವಾಸ ಸತ್ಯಾಗ್ರಹ ಎಚ್ಚರಿಕೆ: ಯತಿರಾಜ್

ಅಕ್ರಮ  ಮರಳುಗಾರಿಕೆ ತಡೆಯದಿದ್ದರೆ ಅಮರಣಾಂತರ ಉಪವಾಸ ಸತ್ಯಾಗ್ರಹ ಎಚ್ಚರಿಕೆ: ಯತಿರಾಜ್

ವಿನಾಯಕ ನಗರದ ಕಾಳಿ ನದಿಯಲ್ಲಿ ಮುಂದುವರಿದ ಬಾಲಕನ ಶೋಧ ಕಾರ್ಯಾಚರಣೆ

ವಿನಾಯಕ ನಗರದ ಕಾಳಿ ನದಿಯಲ್ಲಿ ಮುಂದುವರಿದ ಬಾಲಕನ ಶೋಧ ಕಾರ್ಯಾಚರಣೆ

1-33

ಮಾವನಿಗೆ ದಾದಾ ಸಾಹೇಬ್ ಫಾಲ್ಕೆ, ಅಳಿಯನಿಗೆ ಅತ್ಯುತ್ತಮ ನಟ ಪ್ರಶಸ್ತಿ

Untitled-1

ಗೋವಾದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಪಿ.ಚಿದಂಬರಂ

ಪಾಲಿಕೆಗೆ ಬರಬೇಕಿದೆ 18.81 ಕೋಟಿ ನೀರಿನ ಕರ „ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡರೆ ಎಲ್ಲರ ಮನೆಗೂ ನೀರು

ತುಮಕೂರಲ್ಲಿ 15 ಸಾವಿರಕ್ಕೂ ಹೆಚ್ಚು ಅಕ್ರಮ ನಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.