Daredevil Mustafa ಮುಖದಲ್ಲಿ ಗೆಲುವಿನ ನಗೆ

Team Udayavani, Jun 9, 2023, 6:26 PM IST

Daredevil mustafa running successfully

ಇತ್ತೀಚೆಗಷ್ಟೇ ಕನ್ನಡದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕೃತಿಯನ್ನು ಅಧರಿಸಿದ “ಡೇರ್‌ ಡೆವಿಲ್‌ ಮುಸ್ತಾಫಾ’ ಸಿನಿಮಾ ತೆರೆಗೆ ಬಂದಿದ್ದು ನಿಮಗೆ ಗೊತ್ತಿರಬಹುದು. ಸದ್ಯ ಬಿಡುಗಡೆಯಾಗಿ ಮೂರು ವಾರಗಳ ಯಶಸ್ವಿ ಪ್ರದರ್ಶನ ಕಂಡಿರುವ “ಡೇರ್‌ ಡೆವಿಲ್‌ ಮುಸ್ತಾಫಾ’ ಸಿನಿಮಾ ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾ ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿತು.

ಇದೇ ವೇಳೆ ಮಾತನಾಡಿದ ನಟ ಧನಂಜಯ್‌, “ನಾನು ಈ ಸಿನಿಮಾದ ಗೆಲುವಿನ ಸಂಭ್ರಮವನ್ನು ನೋಡಲು ಬಂದಿದ್ದೇನೆ. ಎಲ್ಲ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ರಿಲೀಸ್‌ಗೆ ಮಾತ್ರ ಸಿನಿಮಾಗಳು ಖರ್ಚು ಮಾಡಲು ಆಗುವುದಿಲ್ಲ. ಮಾಧ್ಯಮದವರು ಸಿನಿಮಾ ಜೊತೆಗೆ ನಿಂತಿವೆ. ಒಳ್ಳೆಯದು ಏನೂ ಆಗುತ್ತಿದೆ ಎಂದಾಗ ನಾವು ಅದರ ಭಾಗವಾಗುವುದು ತುಂಬಾ ಮುಖ್ಯ. ಪೂರ್ಣಚಂದ್ರ ತೇಜಸ್ವಿ ಅವರನ್ನು ಸೆಲೆಬ್ರೆಟ್‌ ಮಾಡಲು ಸಿಕ್ಕ ಅವಕಾಶ. ನನ್ನ ಕಟೌಟ್‌ ಮುಂದೆ ಕುಣಿದಾಗಲು ಇಷ್ಟು ಖುಷಿ ಕೊಟ್ಟಿರಲಿಲ್ಲ. ಅಷ್ಟೊಂದು ಖುಷಿ ಪೂರ್ಣಚಂದ್ರ ತೇಜಸ್ವಿ ಕಟೌಟ್‌ ಮುಂದೆ ಕುಣಿದಾಗ ಸಿಕ್ಕಿದೆ’ ಎಂದರು.

ನಿರ್ದೇಶಕ ಶಶಾಂಕ್‌ ಸೋಗಲ್‌ ಮಾತನಾಡಿ, “ಒಳ್ಳೆ ಸಿನಿಮಾ ಮಾಡಬೇಕು ಅಂತಾ ಫೋಕಸ್‌ ಮಾಡಿದ್ದೆ. ಇಂಜನಿಯರಿಂಗ್‌ ಓದುವಾಗ ಕನ್ನಡ ಸಿನಿಮಾ ಹೋಗ್ತೀವಿ ಎಂದಾಗ ಬೇರೆ ರೀತಿ ನೋಡುವವರು. ಆಗ ತುಂಬಾ ಕೋಪ ಬರುವುದು. ಒಳ್ಳೆ ಸಿನಿಮಾ ಮಾಡಬೇಕು ಎಂಬ ಒಂದೆ ಉದ್ದೇಶವಿತ್ತು. ಮಾಡಿದ್ದೇನೋ ಇಲ್ವೋ ಗೊತ್ತಿಲ್ಲ. ಜನ ಸ್ವೀಕರಿಸಿದ್ದಾರೆ ಎಂದರೆ ಅದು ಒಳ್ಳೆ ಕೃತಿಯಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಆ ಒಂದೊಳ್ಳೆ ಉದ್ದೇಶದಿಂದ ಎಷ್ಟು ಒಳ್ಳೆ ಸ್ನೇಹಿತರು ಸಿಕ್ಕಿದ್ದಾರೆ. ಸಿನಿಮಾಗೆ ಎಲ್ಲೆಡೆಯಿಂದ ರೆಸ್ಪಾನ್ಸ್‌ ಸಿಗುತ್ತಿದೆ. ಜನಕ್ಕೆ ರೀಚ್‌ ಆಗುತ್ತಿರುವುದು ಖುಷಿಕೊಟ್ಟಿದೆ. ವೀಕೆಂಡ್‌ನ‌ಲ್ಲಿ ಅದ್ಭುತ ರೆಸ್ಪಾನ್ಸ್‌ ಸಿಗುತ್ತಿದೆ. ಹೊರ ದೇಶದಲ್ಲಿಯೂ ಈ ಕಥೆಯನ್ನು ಮೆಚ್ಚಿಕೊಂಡಿದ್ದಾರೆ’ ಎಂದರು.

ರಾಮಾನುಜ ಅಯ್ಯಂಗಾರಿ ಪಾತ್ರಧಾರಿ ಆದಿತ್ಯ ಅಶ್ರಿ, “ರಾಮಾನುಜ ಅಯ್ಯಂಗಾರಿ ಪಾತ್ರದ ಮೇಲೆ ಪ್ರೀತಿ ಸಿಟ್ಟು ಎಲ್ಲದನ್ನೂ ಮಾಡಿಕೊಂಡಿದ್ದಾರೆ. ಸಿನಿಮಾ ನೋಡಿದ ಮೇಲೆ ಎಲ್ಲರೂ ಎತ್ತಿ ಕೊಂಡಾಡುತ್ತಿದ್ದಾರೆ. 18 ವರ್ಷಕ್ಕೆ ಇಂಡಸ್ಟ್ರೀಗೆ ಬಂದೆ. ಎಷ್ಟೋ ಅವಮಾನ, ಕಾಯುವಿಕೆ ಬಳಿಕ ಒಂದೊಳ್ಳೆ ಪಾತ್ರ ಸಿಕ್ಕಿದೆ. ಜನ ಗುರುತಿಸುತ್ತಿದ್ದಾರೆ. ಈ ಸಿನಿಮಾದಿಂದ ಇನ್ನೊಂದು ಚಿತ್ರದಲ್ಲಿ ನಾಯಕ ನಟಿಸುವ ಅವಕಾಶ ಪಡೆದಿದ್ದೇನೆ’ ಎಂದು ಖುಷಿ ವ್ಯಕ್ತಪಡಿಸಿದರು.

ಉಳಿದಂತೆ ಮುಸ್ತಾಫಾ ಪಾತ್ರಧಾರಿ ಶಿಶಿರ್‌ ಬೈಕಾಡಿ, ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಅನುಭವಗಳನ್ನು ಹಂಚಿಕೊಂಡರು.

ಟಾಪ್ ನ್ಯೂಸ್

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

trMangaluru”14 ಮಿನಿಟ್ಸ್‌ ಮಿರಾಕಲ್‌’ ಯೋಜನೆ: ವಂದೇ ಭಾರತ್‌ ರೈಲಿನ ಸ್ವಚ್ಛತೆ

Mangaluru”14 ಮಿನಿಟ್ಸ್‌ ಮಿರಾಕಲ್‌’ ಯೋಜನೆ: ವಂದೇ ಭಾರತ್‌ ರೈಲಿನ ಸ್ವಚ್ಛತೆ

Udupi ಜಿಲ್ಲಾಡಳಿತ-ಲಾರಿ, ಟೆಂಪೋ ಮಾಲಕರ ಸಂಧಾನ ಸಭೆ ವಿಫ‌ಲ

Udupi ಜಿಲ್ಲಾಡಳಿತ-ಲಾರಿ, ಟೆಂಪೋ ಮಾಲಕರ ಸಂಧಾನ ಸಭೆ ವಿಫ‌ಲ

Kundapura ಯಕ್ಷಗಾನ ಕಲಾರಂಗ ದೊಡ್ಡ ಆಸ್ತಿ:ಯಶ್‌ಪಾಲ್‌

Kundapura ಯಕ್ಷಗಾನ ಕಲಾರಂಗ ದೊಡ್ಡ ಆಸ್ತಿ:ಯಶ್‌ಪಾಲ್‌

Udupi ಪರೀಕ್ಷಾ ಸಮಯದಲ್ಲಿ ಬಂದ್‌ ಬೇಡ: ಕೋಟ ಶ್ರೀನಿವಾಸ ಪೂಜಾರಿ

Udupi ಪರೀಕ್ಷಾ ಸಮಯದಲ್ಲಿ ಬಂದ್‌ ಬೇಡ: ಕೋಟ ಶ್ರೀನಿವಾಸ ಪೂಜಾರಿ

Belthangady ಕಾನರ್ಪದಲ್ಲಿ ಕಾಡಾನೆ ದಾಳಿ: ಭತ್ತದ ಗದ್ದೆ ನಾಶ

Belthangady ಕಾನರ್ಪದಲ್ಲಿ ಕಾಡಾನೆ ದಾಳಿ: ಭತ್ತದ ಗದ್ದೆ ನಾಶ

1-saasd

Temples; ರಜೆ ಹಿನ್ನೆಲೆಯಲ್ಲಿ ಕರಾವಳಿಯ ದೇಗುಲಗಳಲ್ಲಿ ಭಕ್ತರ ದಂಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sasdasd

Actor; ‘ದೇಸಾಯಿ’ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಅಥಣಿ ಶಾಸಕ ಲಕ್ಷ್ಮಣ ಸವದಿ

hivanna

GHOST: ಶಿವಣ್ಣನ ಘೋಸ್ಟ್ ಅವತಾರಕ್ಕೆ ಫ್ಯಾನ್ಸ್ ಫಿದಾ; ಟ್ರೇಲರ್ ನೋಡಿ

Sandalwood ; 7 movies releasing on October 6

Sandalwood ಸಿನಿಜಾತ್ರೆ; ಅಕ್ಟೋಬರ್‌ 6ಕ್ಕೆ 7 ಸಿನಿಮಾಗಳು ಬಿಡುಗಡೆ

‘ಮಾರ್‌’ ಮುಹೂರ್ತಕ್ಕೂ ಮೊದಲೇ ಹಾಡು ಬಿಡುಗಡೆ

Sandalwood; ‘ಮಾರ್‌’ ಮುಹೂರ್ತಕ್ಕೂ ಮೊದಲೇ ಹಾಡು ಬಿಡುಗಡೆ

ಸದ್ದು ಮಾಡುತ್ತಿದೆ ‘ಅಭಿರಾಮಚಂದ್ರ’ ಟ್ರೇಲರ್

ಸದ್ದು ಮಾಡುತ್ತಿದೆ ‘ಅಭಿರಾಮಚಂದ್ರ’ ಟ್ರೇಲರ್

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

trMangaluru”14 ಮಿನಿಟ್ಸ್‌ ಮಿರಾಕಲ್‌’ ಯೋಜನೆ: ವಂದೇ ಭಾರತ್‌ ರೈಲಿನ ಸ್ವಚ್ಛತೆ

Mangaluru”14 ಮಿನಿಟ್ಸ್‌ ಮಿರಾಕಲ್‌’ ಯೋಜನೆ: ವಂದೇ ಭಾರತ್‌ ರೈಲಿನ ಸ್ವಚ್ಛತೆ

Udupi ಜಿಲ್ಲಾಡಳಿತ-ಲಾರಿ, ಟೆಂಪೋ ಮಾಲಕರ ಸಂಧಾನ ಸಭೆ ವಿಫ‌ಲ

Udupi ಜಿಲ್ಲಾಡಳಿತ-ಲಾರಿ, ಟೆಂಪೋ ಮಾಲಕರ ಸಂಧಾನ ಸಭೆ ವಿಫ‌ಲ

Kundapura ಯಕ್ಷಗಾನ ಕಲಾರಂಗ ದೊಡ್ಡ ಆಸ್ತಿ:ಯಶ್‌ಪಾಲ್‌

Kundapura ಯಕ್ಷಗಾನ ಕಲಾರಂಗ ದೊಡ್ಡ ಆಸ್ತಿ:ಯಶ್‌ಪಾಲ್‌

Udupi ಪರೀಕ್ಷಾ ಸಮಯದಲ್ಲಿ ಬಂದ್‌ ಬೇಡ: ಕೋಟ ಶ್ರೀನಿವಾಸ ಪೂಜಾರಿ

Udupi ಪರೀಕ್ಷಾ ಸಮಯದಲ್ಲಿ ಬಂದ್‌ ಬೇಡ: ಕೋಟ ಶ್ರೀನಿವಾಸ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.