ಕ್ಯಾಮರಾದೊಂದಿಗೆ ಕಾಡಲ್ಲಿ ದರ್ಶನ್
Team Udayavani, Jan 27, 2020, 7:04 AM IST
ದರ್ಶನ್ ಸಿನಿಮಾ ಕೆಲಸದ ಬಿಡುವಿನ ವೇಳೆಯನ್ನು ತಮ್ಮ ಇಷ್ಟದ ಹವ್ಯಾಸಗಳಿಗೆ ಮೀಸಲಿಡುತ್ತಾರೆ. ಮೈಸೂರಿನ ಫಾರ್ಮ್ ಹೌಸ್ನಲ್ಲಿ ಕುದುರೆ ಸವಾರಿ, ತೋಟ ಸುತ್ತಾಟದ ಜೊತೆಗೆ ದರ್ಶನ್ ಇಷ್ಟವಾದ ಮತ್ತೂಂದು ಹವ್ಯಾಸವೆಂದರೆ ಫೋಟೋಗ್ರಫಿ.
ಕಾಡಿಗೆ ತೆರಳಿ, ಪ್ರಾಣಿ ಪಕ್ಷಿಗಳ ಫೋಟೋಗ್ರಫಿ ಮಾಡೋದು ದರ್ಶನ್ ನೆಚ್ಚಿನ ಹವ್ಯಾಸಗಳಲ್ಲೊಂದು. ಕಳೆದ ಬಾರಿ ದರ್ಶನ್ ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನ ಮಾಡಲಾಗಿತ್ತು. ಈಗ ದರ್ಶನ್ ಮತ್ತೆ ಕ್ಯಾಮರಾ ಹೆಗಲೇರಿಸಿಕೊಂಡು ಕಾಡಿಗೆ ತೆರಳಿದ್ದಾರೆ. ಈ ಬಾರಿ ಅವರ ಫೋಕಸ್ ಅಪರೂಪದ ಪಕ್ಷಿಗಳನ್ನು ಸೆರೆಹಿಡಿಯುವುದು ಎನ್ನಲಾಗಿದೆ.
ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು #HappyRepublicDay pic.twitter.com/N8PF2cLaBy
— Darshan Thoogudeepa (@dasadarshan) January 26, 2020
ಈ ಸೀಸನ್ನಲ್ಲಿ ಬೇರೆ ಬೇರೆ ಕಡೆಯಿಂದ ಪಕ್ಷಿಗಳು ಬರುವ ಜಾಗವೊಂದಕ್ಕೆ ದರ್ಶನ್ ಹೋಗಿದ್ದಾರೆನ್ನಲಾಗಿದ್ದು, ಈ ಮೂಲಕ ಅಪರೂಪದ ಫೋಟೋ ಸೆರೆಹಿಡಿಯಲಿದ್ದಾರೆ. ದರ್ಶನ್ ಫೋಟೋಗ್ರಫಿಗೆ ಸಿದ್ಧವಾಗಿರುವ ಫೋಟೋವೊಂದನ್ನು ಹಾಕಿ, ಅಭಿಮಾನಿಗಳಿಗೆ ಗಣರಾಜ್ಯೋತ್ಸವ ಶುಭ ಕೋರಿದ್ದಾರೆ ಕೂಡಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ