

Team Udayavani, Jun 16, 2024, 10:41 AM IST
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇತರೆ ಆರೋಪಿಗಳ ಜೊತೆ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನು 5 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ 13 ಮಂದಿ ಆರೋಪಿಗಳನ್ನು ಕಸ್ಟಡಿಗೆ ಒಪ್ಪಿಸಲಾಗಿದೆ.
ದರ್ಶನ್ ಅವರ ಬಂಧನ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದು, ದರ್ಶನ್ ಕುಟುಂಬಕ್ಕೆ ಮಾನಸಿಕವಾಗಿ ಆಘಾತವನ್ನು ನೀಡಿದೆ. ಪತ್ನಿ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದಾರೆ. ಇತ್ತ ದರ್ಶನ್ ಅವರು ಹೆಚ್ಚಾಗಿ ಪ್ರೀತಿಸುವ ಪುತ್ರ ವಿನೀಶ್ ಕುಗ್ಗಿಹೋಗಿದ್ದಾರೆ.
ಪ್ರತಿ ವರ್ಷ ಫಾದರ್ಸ್ ಡೇಗೆ ತಂದೆ ಜೊತೆಗಿನ ಸುಂದರ ಫೋಟೋಗಳನ್ನು ವಿಶ್ ಮಾಡುತ್ತಿದ್ದ ವಿನೀಶ್ ಈ ಬಾರಿ ಬಹಳ ದುಃಖದಿಂದ ಫಾದರ್ಸ್ ಡೇಗೆ ಫೋಟೋಗಳನ್ನು ಹಾಕಿಕೊಂಡಿದ್ದಾರೆ.
“ಹ್ಯಾಪಿ ಫಾದರ್ಸ್ ಡೇ ಅಪ್ಪಾ.. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಐ ಲವ್ ಯೂ, ನೀವು ಯಾವಾಗಲೂ ನನ್ನ ಹೀರೋ..” ಎಂದು ತಂದೆ – ತಾಯಿ ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದರ್ಶನ್ ಬಂಧನವಾದ ಬಳಿಕ ಅನೇಕರು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕೆಲ ಕೀಳುಮಟ್ಟದ ಕಮೆಂಟ್ ಮಾಡಿದ್ದರು. ಇದರಿಂದ ಮನನೊಂದಿದ್ದ ವಿನೀಶ್ “ನನ್ನ ಅಪ್ಪನ ಬಗ್ಗೆ ಕೆಟ್ಟ ಹಾಗೂ ಆಶ್ಲೀಲ ಭಾಷೆಯಲ್ಲಿ ಕಮೆಂಟ್ ಮಾಡಿ ನಿಂದಿಸುತ್ತಿರುವ ನಿಮ್ಮಗೆಲ್ಲರಿಗೆ ಧನ್ಯವಾದ. ನಾನು 15 ವರ್ಷದ ಬಾಲಕನಾಗಿರಬಹುದು ಆದರೆ ನನಗೂ ಭಾವನೆಗಳಿವೆ ಎನ್ನುವುದನ್ನು ನೀವೆಲ್ಲ ಪರಿಗಣಿಸಲೇ ಇಲ್ಲ. ಇಂಥ ಕಷ್ಟದ ಸಮಯದಲ್ಲಿ ನನ್ನ ತಂದೆ -ತಾಯಿಗೆ ನಿಮ್ಮೆಲ್ಲರ ಬೆಂಬಲದ ಅಗತ್ಯವಿದೆ. ನೀವು ನನಗೆ ನಿಂದಿಸಿ ಕಮೆಂಟ್ ಮಾಡುವುದರಿಂದ ಯಾವುದೇ ಬದಲಾವಣೆ ಆಗಲು ಸಾಧ್ಯವಿಲ್ಲ” ಎಂದು ದುಃಖದಲ್ಲಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಂಚಿಕೊಂಡಿದ್ದರು.
Vinish insta story for #fathersday #DGod #DBoss #Darshan #AjitIsSoolemaga pic.twitter.com/N75aL5F903
— . (@DBoss87631) June 15, 2024
Ad
ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್
Viral Vayyari: ಜೂನಿಯರ್‌ನಲ್ಲಿ ಕಿರೀಟಿ – ಶ್ರೀಲೀಲಾ ಸ್ಟೆಪ್
Son of Muthanna Movie: ಪ್ರಣಂ ದೇವರಾಜ್ ನಟನೆಯ ಸನ್ ಆಫ್ ಮುತ್ತಣ್ಣ ತೆರೆಗೆ ಸಿದ್ದ
Sandalwood: ಟ್ರೇಲರ್ ನಲ್ಲಿ ಹೊಸಬರ ಓ ಮೈ ಇಂಡಿಯಾ
Toxic Movie: ಯಶ್ ʼಟಾಕ್ಸಿಕ್ʼ ಅಖಾಡಕ್ಕೆ ಈ ಖ್ಯಾತ ಸಂಗೀತ ಸಂಯೋಜಕ ಎಂಟ್ರಿ?
High Court: ಗಾರ್ಡನ್ ಅಲ್ಲ, ಫ್ಲೆಕ್ಸ್ ಸಿಟಿ: ಹೈಕೋರ್ಟ್ ಚಾಟಿ
Arrested: ಜನರಿಗೆ ಧಮ್ಕಿ: ನಕಲಿ ಪೊಲೀಸ್ ಅಧಿಕಾರಿ ಸೆರೆ
ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ
ಮೈದುಂಬಿದೆ ಬೆಳ್ಕಲ್ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ
ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ FIR ದಾಖಲು
You seem to have an Ad Blocker on.
To continue reading, please turn it off or whitelist Udayavani.