
ಧನಂಜಯ್ 26ನೇ ಸಿನಿಮಾ ಅನೌನ್ಸ್
Team Udayavani, Sep 21, 2022, 5:01 PM IST

ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಬಿಝಿ ನಟ ಪೈಕಿ ಡಾಲಿ ಧನಂಜಯ್ ಕೂಡ ಒಬ್ಬರು. ಒಂದಾದ ಮೇಲೊಂದು ಸಿನಿಮಾಗಳ ರಿಲೀಸ್ ಮೂಲಕ ಬೆಳ್ಳಿತೆರೆಯಲ್ಲಿ ರಾರಾಜಿಸುತ್ತಿರುವ ಧನಂಜಯ್, ಇದೀಗ ಮತ್ತೂಂದು ಸಿನಿಮಾದ ಅನೌನ್ಸ್‌ಗೆ ರೆಡಿಯಾಗಿದ್ದಾರೆ.
ಹೌದು, “ಪುಷ್ಪ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಪರಿಚಿತರಾಗಿರುವ ಡಾಲಿ ಧನಂಜಯ್ ಈಗ ಬಹುಭಾಷಾ ನಟ ಎನಿಸಿಕೊಂಡಿದ್ದಾರೆ. ಕನ್ನಡದ ಬಹುಬೇಡಿಕೆಯ ನಟ ಇದೀಗ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳ ನೂತನ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಡಾಲಿ ಧನಂಜಯ್ ನಟಿಸಲಿರುವ 26ನೇ ಸಿನಿಮಾವಾಗಲಿದೆ ಎಂಬುದು ವಿಶೇಷ.
ಈ ಹಿಂದೆ ತೆಲುಗಿನಲ್ಲಿ “ಪೆಂಗ್ವಿನ್’ ಸಿನಿಮಾ ಮಾಡಿದ್ದ ಈಶ್ವರ್ ಕಾರ್ತಿಕ್ ಡಾಲಿ-ಸತ್ಯದೇವ್ ಬಣ್ಣ ಹಚ್ಚಲಿರುವ 26ನೇ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.
ಕ್ರೈಂ ಕಥೆಯನ್ನೊಳಗೊಂಡ ಈ ಸಿನಿಮಾವನ್ನು “ಓಲ್ಡ್ ಟೌನ್ ಪಿಕ್ಚರ್’ ಬ್ಯಾನರ್‌ನಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾದಲ್ಲಿ ಧನಂಜಯ್ ಜೊತೆಗೆ ತೆಲುಗು ನಟ ಸತ್ಯದೇವ್ ಕೂಡ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ವಿಶೇಷ ಅಂದರೆ ಇದು ಸತ್ಯದೇವ್ ನಟಿಸುತ್ತಿರುವ 26ನೇ ಸಿನಿಮಾವಾಗಿದೆ.
ಈ ಸಿನಿಮಾದ ಹಾಡುಗಳಿಗೆ “ಟಗರು’ ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನವಿದ್ದು, ಶೀಘ್ರದಲ್ಲೇ ಈ ಹೊಸ ಸಿನಿಮಾದ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಇತ್ತೀಚೆಗಷ್ಟೇ ಡಾಲಿ ನಟನೆಯ “ಮಾನ್ಸೂನ್ ರಾಗ’ ಸಿನಿಮಾ ರಿಲೀಸ್ ಆಗಿದ್ದು, ಸದ್ಯ ಧನಂಜಯ್ ಬತ್ತಳಿಕೆಯಲ್ಲಿ “ತೋತಾಪುರಿ’, “ಹೆಡ್ ಬುಷ್’, “ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಇದರ ಜೊತೆಗೆ ಧನಂಜಯ್ “ಹೊಯ್ಸಳ’ ಮತ್ತು ಪ್ಯಾನ್ ಇಂಡಿಯಾ “ಪುಷ್ಪ-2′ ಸಿನಿಮಾದಲ್ಲೂ ಅಭಿನಯಿಸುತ್ತಿದ್ದು, ಆ ಸಿನಿಮಾದ ಕೆಲಸಗಳು ಕೂಡ ಭರದಿಂದ ನಡೆಯುತ್ತಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
