ಡಾಲಿ ಮುಂದಿನ ಚಿತ್ರ ‘ಜಮಾಲಿಗುಡ್ಡ’ ಬಿಡುಗಡೆಗೆ ದಿನಾಂಕ ಫಿಕ್ಸ್

Team Udayavani, Nov 14, 2022, 3:08 PM IST

once upon a time in jamaaligudda

ಧನಂಜಯ್‌ ನಟನೆಯ “ಹೆಡ್‌ಬುಷ್‌’ ಚಿತ್ರ ಅಕ್ಟೋಬರ್‌ನಲ್ಲಿ ತೆರೆಕಂಡಿತ್ತು. ಈಗ ವರ್ಷಾಂತ್ಯಕ್ಕೆ ಅವರ ಮತ್ತೂಂದು ಚಿತ್ರ ತೆರೆಕಾಣುತ್ತಿದೆ. ಅದು “ಜಮಾಲಿಗುಡ್ಡ’. ಹೀಗೊಂದು ಸಿನಿಮಾದಲ್ಲಿ ಧನಂಜಯ್‌ ನಟಿಸಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಚಿತ್ರತಂಡ ಡಿಸೆಂಬರ್‌ 30ಕ್ಕೆ ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ.

ಇದು ಈ ವರ್ಷ ಬಿಡುಗಡೆಯಾಗುತ್ತಿರುವ ಧನಂಜಯ್‌ ಅವರ 6ನೇ ಸಿನಿಮಾ. ಈಗಾಗಲೇ “ಟ್ವೆಂಟಿ ಒನ್‌ ಅವರ್’, “ಮಾನ್ಸೂನ್‌ ರಾಗ’, “ಹೆಡ್‌ಬುಷ್‌’, “ತೋತಾಪುರಿ’, “ಬೈರಾಗಿ’ ಚಿತ್ರಗಳು ಬಿಡುಗಡೆಯಾಗಿವೆ.

ಈ ಹಿಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಕುಶಾಲ್‌ ಗೌಡ “ಜಮಾಲಿಗುಡ್ಡ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ನಿಹಾರಿಕಾ ಮೂವೀಸ್‌ ಮೂಲಕ ಶ್ರೀಹರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಟೈಟಲ್‌ ಹೇಳುವಂತೆ, “ಜಮಾಲಿ ಗುಡ್ಡ’ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಒಂದಷ್ಟು ಘಟನೆಗಳು, ಪಾತ್ರಗಳ ಸುತ್ತ ಇಡೀ ಸಿನಿಮಾ ನಡೆಯುತ್ತದೆ. ಕೋವಿಡ್‌ ಮೊದಲನೇ ಲಾಕ್‌ಡೌನ್‌ನಲ್ಲಿ ನಿರ್ದೇಶಕ ಕುಶಾಲ್‌ ಗೌಡ ಮಾಡಿಕೊಂಡಿದ್ದ ಕಥೆ ಸುಮಾರು ಎರಡು ವರ್ಷಗಳ ಬಳಿಕ ಸಿನಿಮಾ ರೂಪ ಪಡೆದುಕೊಂಡಿದೆ.

“ಜಮಾಲಿ ಗುಡ್ಡ’ ಚಿತ್ರದ ಟೈಟಲ್‌ಗೆ “ಒನ್ಸ್‌ ಅಪಾನ್‌ ಎ ಟೈಮ್‌’ ಎಂಬ ಟ್ಯಾಗ್‌ ಲೈನ್‌ ಇದ್ದು, 1990ರ ದಶಕದ ಹಿನ್ನೆಲೆಯಲ್ಲಿ ಇಡೀ ಚಿತ್ರದ ಕಥೆ ನಡೆಯುತ್ತದೆ. “”ಜಮಾಲಿ ಗುಡ್ಡ’ ಚಿತ್ರದ ಕಥೆಯಲ್ಲಿ ಇರುವಂಥ ಕಾಲ್ಪನಿಕ ಊರಾದರೂ, ಇಲ್ಲಿ ಒಂದು ವಿಭಿನ್ನ ಸಂಸ್ಕೃತಿ, ವಿಭಿನ್ನ ವ್ಯಕ್ತಿತ್ವಗಳ ಅನಾವರಣವಾಗಲಿದೆ. ಇದರಲ್ಲಿ ಒಂದು ಜರ್ನಿ ಇದೆ. ಎಮೋಶನ್ಸ್‌ ಇದೆ. ಅದೆಲ್ಲವನ್ನೂ ದೃಶ್ಯದಲ್ಲಿ ಕಟ್ಟಿ ಕೊಡುತ್ತಿದ್ದೇವೆ. ಅದು ಹೇಗಿರಲಿದೆ ಅನ್ನೋದನ್ನ ತೆರೆಮೇಲೆ ನೋಡಬೇಕು’ ಎನ್ನುತ್ತದೆ ಚಿತ್ರತಂಡ.

ನಟ ಡಾಲಿ ಧನಂಜಯ್‌, ಅದಿತಿ ಪ್ರಭುದೇವ, ಪ್ರಕಾಶ್‌ ಬೆಳವಾಡಿ, ಭಾವನಾ ರಾಮಣ್ಣ, ಪ್ರಾಣ್ಯಾ ಪಿ. ರಾವ್‌, ನಂದಗೋಪಾಲ್‌, ಯಶ್‌ ಶೆಟ್ಟಿ, ಸತ್ಯಣ್ಣ, ತ್ರಿವೇಣಿ ರಾವ್‌ ಮೊದಲಾದ ಕಲಾವಿದರು “ಜಮಾಲಿ ಗುಡ್ಡ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದು, ಯೋಗರಾಜ್‌ ಭಟ್‌, ಜಯಂತ ಕಾಯ್ಕಿಣಿ, ಕುಶಾಲ್‌ ಗೌಡ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸೋನು ನಿಗಮ್‌, ಶ್ರೇಯಾ ಘೋಷಾಲ್‌, ವಿಜಯ್‌ ಯೇಸುದಾಸ್‌ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

“ಜಮಾಲಿ ಗುಡ್ಡ’ದ ದೃಶ್ಯಗಳಿಗೆ ಮಾಸ್ತಿ ಮತ್ತು ಕುಶಾಲ್‌ ಗೌಡ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಕಾರ್ತಿಕ್‌ ಎಸ್‌. ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ.

ಟಾಪ್ ನ್ಯೂಸ್

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

kuchila

ಸ್ಥಳೀಯ ಕುಚ್ಚಲಕ್ಕಿ ಅಲಭ್ಯ: ಹೊಸ ತಳಿ ಅಕ್ಕಿ ವಿತರಣೆಗೆ ಚಿಂತನೆ

ಭಾರಿ ವಾಹನಗಳ ಕಡ್ಡಾಯ ಫಿಟ್ನೆಸ್ ಪರೀಕ್ಷೆ ಅವಧಿ ವಿಸ್ತರಣೆ

ಭಾರಿ ವಾಹನಗಳ ಕಡ್ಡಾಯ ಫಿಟ್ನೆಸ್ ಪರೀಕ್ಷೆ ಅವಧಿ ವಿಸ್ತರಣೆ

ಪಾಕಿಸ್ಥಾನ: ಹಿಂದೂಗಳ ಮತಾಂತರ ಖಂಡಿಸಿ ಪ್ರತಿಭಟನೆ

ಪಾಕಿಸ್ಥಾನ: ಹಿಂದೂಗಳ ಮತಾಂತರ ಖಂಡಿಸಿ ಪ್ರತಿಭಟನೆ

ನಾಸಾ ಯೋಜನೆಗೆ ಅಮಿತ್‌ ಕ್ಷತ್ರಿಯ ನೇಮಕ

ನಾಸಾ ಯೋಜನೆಗೆ ಅಮಿತ್‌ ಕ್ಷತ್ರಿಯ ನೇಮಕ

ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

v manohar directed movie darbar

‘ದರ್ಬಾರ್’: 23 ವರ್ಷದ ಬಳಿಕ ನಿರ್ದೇಶನಕ್ಕೆ ಬಂದ ವಿ.ಮನೋಹರ್

ಹೂವುಗಳ ಮಧ್ಯೆ ಖುಷಿಯೋ ಖುಷಿ; ದಿಯಾ ನಟಿ ಸ್ಟೈಲಿಶ್‌ ಫೋಟೋಶೂಟ್‌

ಹೂವುಗಳ ಮಧ್ಯೆ ಖುಷಿಯೋ ಖುಷಿ; ದಿಯಾ ನಟಿ ಸ್ಟೈಲಿಶ್‌ ಫೋಟೋಶೂಟ್‌

ಶಿವಣ್ಣ ದಿ ಘೋಸ್ಟ್‌ ರೈಡರ್‌; ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ..

ಶಿವಣ್ಣ ದಿ ಘೋಸ್ಟ್‌ ರೈಡರ್‌; ಹೊಸ ಗೆಟಪ್‌ ನಲ್ಲಿ ಪ್ರೇಕ್ಷಕರ ಮುಂದೆ..

priyanka kumar

ಶ್ರೇಯಸ್‌ ಗೆ ಜೋಡಿಯಾದ ಪ್ರಿಯಾಂಕಾ ಕುಮಾರ್

ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಪಡೆದ ‘ಇನ್’

ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಪಡೆದ ‘ಇನ್’

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ