
ʼಕೈವʼ ಚಿತ್ರೀಕರಣ ಪೂರ್ಣ
Team Udayavani, Jan 30, 2023, 3:00 PM IST

ನಟ ಧನ್ವೀರ್ “ಕೈವ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ವಿಭಿನ್ನ ಟೈಟಲ್ ಹಾಗೂ ಫಸ್ಟ್ ಲುಕ್‌ನಿಂದಲೇ ಸಾಕಷ್ಟು ಸುದ್ದಿ ಮಾಡಿದೆ “ಕೈವ’ ಚಿತ್ರ ಈಗ ಚಿತ್ರೀಕರಣ ಪೂರ್ಣಗೊಳಿಸಿದೆ.
ಜಯತೀರ್ಥ ಈ ಚಿತ್ರದ ನಿರ್ದೇಶಕರು. ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿರುವ ಜಯತೀರ್ಥ ಈಗ “ಕೈವ’ದಲ್ಲೂ ಹೊಸ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.
ಮೊದಲ ಬಾರಿಗೆ ಧನ್ವೀರ್ ಜೋಡಿಯಾಗಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದಾರೆ.
“ಕೈವ’ ಚಿತ್ರಕ್ಕೆ 1983 ಅನ್ನೋ ಟ್ಯಾಗ್‌ಲೈನ್ ಕೂಡಾ ಇದೆ. ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇದೆ ಎನ್ನಲಾಗಿದೆ.
“ಕೈವ’ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ತಿಗಳರ ಪೇಟೆಯ ಸುತ್ತಮುತ್ತ ಮಾಡಲಾಗಿದೆ. ಈಗಾಗಲೇ ನಿರ್ದೇಶಕರು ಹೇಳಿರುವಂತೆ “ಕೈವ’ ಚಿತ್ರದ ಕಥೆಗೂ ಕರಗ ಉತ್ಸವಕ್ಕೂ ನಂಟಿದೆ. ಹಾಗಾಗಿ, ಬೆಂಗಳೂರಿನಲ್ಲಿಯೇ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ.
ಟಾಪ್ ನ್ಯೂಸ್
