ಬಿಡುಗಡೆಯಾಯ್ತು ಧರಣಿ ಮಂಡಲ ಮಧ್ಯದೊಳಗೆ…
Team Udayavani, Dec 2, 2022, 11:13 AM IST
ಈಗಾಗಲೇ ತನ್ನ ಟೀಸರ್, ಹಾಡುಗಳು ಮತ್ತು ಟ್ರೇಲರ್ ಮೂಲಕ ಒಂದಷ್ಟು ಸೌಂಡ್ ಮಾಡುತ್ತಿರುವ “ಧರಣಿ ಮಂಡಲ ಮಧ್ಯದೊಳಗೆ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.
“ಗುಲ್ಟಾ’ ಖ್ಯಾತಿಯ ನಟ ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ “ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಕ್ಕೆ ಶ್ರೀಧರ್ ಶಿಕಾರಿಪುರ ನಿರ್ದೇಶನವಿದೆ.
“ಇದೊಂದು ಔಟ್ ಆ್ಯಂಡ್ ಔಟ್ ಸೈಕಾಲಜಿಕಲ್ ಕ್ರೈಂ-ಥ್ರಿಲ್ಲರ್ ಶೈಲಿಯ ಹೈಪರ್ ಲಿಂಕ್ ಸಿನಿಮಾ. ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಬಂದಿಲ್ಲ. ಕನ್ನಡದ ಆಡಿಯನ್ಸ್‌ಗೆ ಇದೊಂದು ವಿಭಿನ್ನ ಅನುಭವ ನೀಡುವ ಸಿನಿಮಾವಾಗಲಿದೆ. ಕಳೆದ ಒಂದು ತಿಂಗಳಿನಿಂದ ಸಿನಿಮಾದ ಪ್ರಚಾರ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಸಿನಿಮಾಕ್ಕೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಈಗಾಗಲೇ ಹಾಡುಗಳು, ಟ್ರೇಲರ್ ಕೂಡ ಹಿಟ್‌ಲಿಸ್ಟ್ ಸೇರಿದೆ. “ಅಭಿಜಿತ್ ಎಂಟರ್ ಪ್ರೈಸಸ್’ ಮೂಲಕ ಸಿನಿಮಾ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಕಾಣಲಿದೆ’ ಎಂಬುದು “ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದ ಬಿಡುಗಡೆಯ ಬಗ್ಗೆ ಚಿತ್ರತಂಡ ನೀಡಿರುವ ಮಾಹಿತಿ.
“ಬಾಕ್ಸಾಫೀಸ್ ಸಿನಿ ಕ್ರಿಯೇಷನ್ಸ್’ ಬ್ಯಾನರ್‌ನಡಿ ಓಂಕಾರ್ ನಿರ್ಮಿಸಿರುವ “ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನವಿದೆ. ಚಿತ್ರದ ಹಾಡುಗಳಿಗೆ ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ
ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್ ಜೋಷಿ ಸಂವಾ
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಹೊಸ ಸೇರ್ಪಡೆ
ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ಚೀನಾದ ಗೂಢಚಾರಿಕೆ ಬಲೂನ್ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್!