Udayavni Special

ಮುಂದಿನ ವರ್ಷ “ಶಿವಣ್ಣ’ ನಿರ್ದೇಶನ

ಒನ್‌ಲೈನ್‌, ಟೈಟಲ್‌ ರೆಡಿ

Team Udayavani, Feb 20, 2020, 7:01 AM IST

shivanna

ನಮ್‌ ತಂದೆ ಶರ್ಟ್‌ ಪ್ಯಾಂಟ್‌ ಹಾಕಿದ್ರು ಅಂತ ನಾನು ಅದನ್ನೇ ಹಾಕ್ಕೋಬೇಕೆಂದಿಲ್ಲ. ಅವರು ರಾಜ್‌ಕುಮಾರ್‌. ರಾಜ್‌ ಕುಮಾರ್‌ ಒಬ್ರೆ ಆಗಿರಲಿ ಅನ್ನೋದು ಆಸೆ….

ಶಿವರಾಜಕುಮಾರ್‌ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 34 ವರ್ಷಗಳಾಗಿವೆ. ಒಬ್ಬ ನಟ ಚಿತ್ರರಂಗದಲ್ಲಿ 34 ವರ್ಷ ಸಾಗಿಬರೋದೆಂದರೆ ಅದು ಸುಲಭದ ಮಾತಲ್ಲ. ಸೋಲು-ಗೆಲುವು, ನೋವು, ನಲಿವು ಎಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತಾ ಬಂದ ಶಿವರಾಜಕುಮಾರ್‌ ಈಗ 125ನೇ ಸಿನಿಮಾದ ಹೊಸ್ತಿಲಿನಲ್ಲಿ ನಿಂತಿದ್ದಾರೆ. ಇತ್ತೀಚೆಗಷ್ಟೇ ಅವರ 123ನೇ ಸಿನಿಮಾದ ಮುಹೂರ್ತ ನಡೆದಿದೆ. 124ನೇ ಚಿತ್ರದ ಪ್ಲ್ರಾನ್‌ ನಡೆಯುತ್ತಿದೆ. ಈ ಹಿಂದೆ ಸೆಟ್ಟೇರಿದ “ಎಸ್‌ಆರ್‌ಕೆ’ 124 ಸಿನಿಮಾ ಆಗುವ ಸಾಧ್ಯತೆ ಇದೆ. ಇನ್ನು, 125ನೇ ಸಿನಿಮಾ. “ಭೈರತಿ ರಣಗಲ್‌’. ಇದನ್ನು ತಮ್ಮದೇ ಬ್ಯಾನರ್‌ನಲ್ಲಿ ಮಾಡಲು ಶಿವಣ್ಣ ತಯಾರಾಗಿದ್ದಾರೆ.

ಈ ಮೂಲಕ ನಿರ್ಮಾಣಕ್ಕೂ ಇಳಿಯುತ್ತಿದ್ದಾರೆ. ಇದರ ಜೊತೆಗೆ ಶಿವಣ್ಣ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದು ನಿರ್ದೇಶನ. ಹೌದು, ಇಷ್ಟು ವರ್ಷದ ನಟನಾ ಅನುಭವದೊಂದಿಗೆ ಈಗ ಶಿವಣ್ಣ ನಿರ್ದೇಶನದತ್ತ ಆಸಕ್ತಿ ತೋರಿದ್ದಾರೆ. ಈಗಾಗಲೇ ಒನ್‌ಲೈನ್‌ ಕಥೆ ರೆಡಿಯಾಗಿದ್ದು, ಟೈಟಲ್‌ ಕೂಡಾ ಸದ್ಯದಲ್ಲೇ ರಿಜಿಸ್ಟರ್‌ ಆಗಲಿದೆ. ಮುಂದಿನ ವರ್ಷ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡುವ ಶಿವಣ್ಣ, “ಮುಂದಿನ ವರ್ಷ ನಾನು ನಿರ್ದೇಶನ ಮಾಡುವ ಸಾಧ್ಯತೆ ಇದೆ. ಈಗಾಗಲೇ ಒನ್‌ಲೈನ್‌, ಟೈಟಲ್‌ ಎಲ್ಲವೂ ಹೊಳೆದಿದೆ. ನೋಡೋಣ’ ಎಂದಷ್ಟೇ ಹೇಳುತ್ತಾರೆ. ಹಾಗಾದರೆ ಶಿವಣ್ಣ ಸಿನಿಮಾದಲ್ಲಿ ಯಾರಿರುತ್ತಾರೆ, ಪುನೀತ್‌ ಏನಾದರೂ ನಟಿಸುತ್ತಾರಾ ಎಂದರೆ, “ಎಲ್ಲವೂ ಮುಂದೆ ಗೊತ್ತಾಗಲಿದೆ’ ಎಂದು ನಗೆ ಬೀರುತ್ತಾರೆ.

ಇನ್ನು ತಮ್ಮ 34 ವರ್ಷದ ಚಿತ್ರರಂಗದ ಜರ್ನಿಯ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ. “ಒಮ್ಮೆ ಹಿಂದಿರುಗಿ ನೋಡಿದಾಗ ಇಷ್ಟೆಲ್ಲಾ ಸಿನಿಮಾಗಳನ್ನು ನಾನೇ ಮಾಡಿದೆನಾ ಅನಿಸುತ್ತದೆ. 34 ವರ್ಷ ಚಿತ್ರರಂಗದಲ್ಲಿ ಇರಲು ನಾನು ಅರ್ಹನಾ ಎಂಬ ಆಲೋಚನೆಯೂ ಬರುತ್ತಿದೆ. ಅಷ್ಟರ ಮಟ್ಟಿಗೆ ನಾನು ಏನು ಮಾಡಿದ್ದೇನೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಹಾಗಂತ ಇಷ್ಟು ವರ್ಷ ಇದ್ದೀನಿ ಅದಕ್ಕೆ ಕಾರಣ ನಾನೇ ಎಂದರೆ ತಪ್ಪಾಗುತ್ತದೆ. ಅಪ್ಪ-ಅಮ್ಮನ ಆಶೀರ್ವಾದ, ಅಭಿಮಾನಿಗಳ, ಚಿತ್ರರಂಗದವರ ಸಹಕಾರದಿಂದ ಸಾಧ್ಯವಾಗಿದೆ. ಒಂದೊಂದು ಸಿನಿಮಾದ ಸ್ಟಿಲ್‌ಗ‌ಳನ್ನು ನೋಡಿದಾಗಲೂ ಮೊನ್ನೆ ಮೊನ್ನೆ ಈ ಚಿತ್ರದಲ್ಲಿ ನಟಿಸಿದಂತಿದೆಯಲ್ಲ ಎಂಬ ಭಾವ ಬರುತ್ತದೆ’ ಎನ್ನುತ್ತಾರೆ.

ನಾನು ಸಾಧು ಅಲ್ಲ, ನನಗೂ ಆಸೆ ಇದೆ: ಶಿವರಾಜಕುಮಾರ್‌ ನೇರವಾಗಿ ಮಾತನಾಡುವವರು. ಅದು ಏನೇ ಇರಲಿ, ಹೇಳಿಬಿಡುತ್ತಾರೆ. ಈ ಬಾರಿಯೂ ಅವರ ನೇರ ಮಾತುಗಳು ಮುಂದುವರಿದಿದೆ. “ನನಗೆ 58 ವರ್ಷ ಆಗಿದೆ ಎಂದ ಮಾತ್ರಕ್ಕೆ ನಾನು ಜೀನ್ಸ್‌, ಟೈಟ್‌ ಜೀನ್ಸ್‌ ಹಾಕಬಾರದೆಂಬ ರೂಲ್ಸ್‌ ಇದೆಯಾ. ನಾನು ಮನುಷ್ಯ, ಸಾಧುವಲ್ಲ. ನನಗೂ ಆಸೆ ಇದೆ, ಚೆನ್ನಾಗಿ ಕಾಣಬೇಕು, ಜನ ನನ್ನನ್ನು ನೋಡಬೇಕು ಎಂದು. ನಮ್‌ ತಂದೆ ಶರ್ಟ್‌ ಪ್ಯಾಂಟ್‌ ಹಾಕಿದ್ರು ಅಂತ ನಾನು ಅದನ್ನೇ ಹಾಕ್ಕೋ ಬೇಕೆಂದಿಲ್ಲ. ಅವರು ರಾಜ್‌ಕುಮಾರ್‌. ರಾಜ್‌ ಕುಮಾರ್‌ ಒಬ್ರೆ ಆಗಿರಲಿ ಅನ್ನೋದು ಆಸೆ. ಅವರನ್ನು ಫಾಲೋ ಮಾಡೋಣ. ಅವರ ಸ್ಟೈಲ್‌ನಲ್ಲ. ರಾಜ್‌ಕುಮಾರ್‌ ಯಾವತ್ತಿಗೂ ಒಂದೇ ಫಿಗರ್‌. ಇದು ಅವರ ಮಗನ ಫಿಗರ್‌’ ಎಂದು ನಗುತ್ತಾರೆ.

ಆರ್‌ಡಿಎಕ್ಸ್‌ ಮುಹೂರ್ತ: ಇನ್ನು ಶಿವರಾಜ್‌ಕುಮಾರ್‌ ಅವರ ಹೊಸ ಚಿತ್ರ “ಆರ್‌ಡಿಎಕ್ಸ್‌’ಗೆ ಬುಧವಾರ ಚಾಲನೆ ಸಿಕ್ಕಿದೆ. ತಮಿಳನ ಸತ್ಯಜ್ಯೋತಿ ಫಿಲಂಸ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರವಿ ಅರಸು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಪೊಲೀಸ್‌ ಆಫೀಸರ್‌ ಆಗಿ ನಟಿಸಲಿದ್ದಾರೆ. ಚಿತ್ರಕ್ಕೆ ಪ್ರಿಯಾ ಆನಂದ್‌ ನಾಯಕಿ. ಎಲ್ಲಾ ಓಕೆ “ಆರ್‌ಡಿಎಕ್ಸ್‌’ ಎಂದರೇನು ಎಂದು ನೀವು ಕೇಳಬಹುದು. ಶಿವಣ್ಣ ಹೇಳುವಂತೆ ನಾಯಕನ ವ್ಯಕ್ತಿತ್ವ. ಅಷ್ಟೊಂದು ಸ್ಟ್ರಾಂಗ್‌. ನೀವು ಬೇಕಾದರೆ ರಾಬರ್ಟ್‌ ಡೇವಿಡ್‌ ಕ್ಸೇವಿಯರ್‌ ಎಂದುಕೊಳ್ಳಬಹುದು!

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ವೈರಸ್ ಕಾಟ: 14 ದಿನ ಹೋಮ್ ಕ್ವಾರಂಟೈನ್ ಬಗ್ಗೆ ಶ್ರದ್ಧಾ ಶ್ರೀನಾಥ್ ಹೇಳೋದೇನು.

ಕೋವಿಡ್ ವೈರಸ್ ಕಾಟ: 14 ದಿನ ಹೋಮ್ ಕ್ವಾರಂಟೈನ್ ಬಗ್ಗೆ ಶ್ರದ್ಧಾ ಶ್ರೀನಾಥ್ ಹೇಳೋದೇನು..?

ಕೋವಿಡ್ ಅಟ್ಟಹಾಸ; ಬಡವರಿಗೆ ಉಚಿತ ಆಹಾರ ಪದಾರ್ಥ ಹಂಚಿದ ಸಾಧುಕೋಕಿಲ

ಕೋವಿಡ್ ಅಟ್ಟಹಾಸ; ಬಡವರಿಗೆ ಉಚಿತ ಆಹಾರ ಪದಾರ್ಥ ಹಂಚಿದ ಸಾಧುಕೋಕಿಲ

ಕೋವಿಡ್ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ಗಾಯಕ ವಿಜಯ ಪ್ರಕಾಶ್ 10 ಲಕ್ಷ ರೂ. ದೇಣಿಗೆ

ಕೋವಿಡ್ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ಗಾಯಕ ವಿಜಯ ಪ್ರಕಾಶ್ 10 ಲಕ್ಷ ರೂ. ದೇಣಿಗೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ನಿಂದ “ರಾಮನಾಮ” ಜಪ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ನಿಂದ “ರಾಮನಾಮ” ಜಪ

ಅಮೆಜಾನ್ ಪ್ರೈಮ್ ನಲ್ಲಿ ವಿಶ್ವಾದ್ಯಂತ ತೆರೆ:ನಾಗತಿಹಳ್ಳಿ‌ ಸಿನಿಮಾಕ್ಕೆ ಮೆಚ್ಚುಗೆ

ಅಮೆಜಾನ್ ಪ್ರೈಮ್ ನಲ್ಲಿ ವಿಶ್ವಾದ್ಯಂತ ತೆರೆ:ನಾಗತಿಹಳ್ಳಿ‌ ಸಿನಿಮಾಕ್ಕೆ ಮೆಚ್ಚುಗೆ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ