
‘ಡಾಲರ್ಸ್ ಪೇಟೆ’ ಚಿತ್ರದಲ್ಲಿ ಬ್ಯಾಂಕ್ ಕಥಾನಕ
Team Udayavani, May 25, 2023, 4:31 PM IST

ಡಾಲರ್ಸ್ ಪೇಟೆ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಮೋಹನ್ ಎನ್ ಮುನಿನಾರಾಯಣಪ್ಪ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದೆ. ದರೋಡೆ ಹಿಂದಿನ ರೋಚಕ ಕಥೆಯನ್ನು ಬಿಚ್ಚಿಡುವ ಟೀಸರ್‌ನಲ್ಲಿ ಬುಲೆಟ್ ಗಳ ಆರ್ಭಟ, ಹೊಡೆದಾಟ-ಬಡಿದಾಟ, ಹಣ, ವಿಲನ್ ಅಬ್ಬರ ಎಲ್ಲವನ್ನು ಟೀಸರ್ ನಲ್ಲಿ ನೀಡಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಮೋಹನ್, “ಡಾಲರ್ಸ್ ಪೇಟೆ ಸತ್ಯ ಘಟನೆಯಾಧಾರಿತ ಚಿತ್ರ. ತಮಿಳುನಾಡಿನ ಬ್ಯಾಂಕ್ ಒಂದರಲ್ಲಿ ಬ್ಯಾಂಕ್ ಮ್ಯಾನೇಜರ್‌ನಿಂದ 13 ಕೋಟಿ ಹಣ 100 ಜನಕ್ಕೆ ಮಿಸ್ ಆಗಿ ಡೆಪೋಸಿಟ್ ಆಗುತ್ತದೆ. ಅದು ಹೇಗೆ ಏನು ಅನ್ನೋದರ ಸುತ್ತ ಸಿನಿಮಾ ಸಾಗುತ್ತದೆ. ಇಡೀ ಸಿನಿಮಾವನ್ನು ಒಂದು ಪಾತ್ರದ ಮೇಲೆ ಡೆವಲಪ್ ಮಾಡಿಲ್ಲ. ಇದೊಂದು ಹೈಪರ್ ಲಿಂಕ್ ಹಾಗೂ ಡಾರ್ಕ್ ಕಾಮಿಡಿ ಥ್ರಿಲ್ಲರ್. ನಾಲ್ಕು ಐದು ಪಾತ್ರಗಳು ಒಂದು ಜಾಗದಲ್ಲಿ ಹೇಗೆ ಕ್ರಾಸ್ ಓವರ್ ಆಗುತ್ತೆ ಅನ್ನೋದು ಚಿತ್ರದ ಹೈಲೆಟ್. 50ರಷ್ಟು ಸಿನಿಮಾ ಬ್ಯಾಂಕ್ ನಡೆಯಲಿದೆ’ ಎಂದರು.
ಚಿತ್ರದಲ್ಲಿ ನಟಿಸಿರುವ ಸೌಮ್ಯ ಮಾತನಾಡಿ, “ನಾನು ಪೂಜಾ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾದ ಭಾಗವಾಗಿರುವುದು ನನಗೆ ಖುಷಿಕೊಟ್ಟಿದೆ. ನಿರ್ಮಾಪಕಿ ಪೂಜಾ ಬೆನ್ನೆಲುಬಾಗಿ ನಿಂತು ಯಾವುದೇ ಕುಂದುಕೊರೆತೆ ಬಾರದೆ ನೋಡಿಕೊಂಡಿದ್ದಾರೆ. ನಿರ್ದೇಶಕರು ನನಗೆ ಕಥೆ ಹೇಳಿದಾಗ ತಕ್ಷಣ ಸಿನಿಮಾ ಮಾಡಲು ಒಪ್ಪಿಕೊಂಡೆ. ಥ್ರಿಲ್ಲರ್ ಜಾನರ್ ಆದರೂ ಪಾತ್ರಗಳು ಅಳುತ್ತಿದ್ದರೂ ಪ್ರೇಕ್ಷಕರು ನಗುವಂತೆ ಮಾಡುವ ಸನ್ನಿವೇಶ ಚಿತ್ರದಲ್ಲಿದೆ’ ಎಂದರು.
ನಟ ವೆಂಕಟ್ ರಾಜು ಮಾತನಾಡಿ, “ಡಾನ್ ಪಾತ್ರದಲ್ಲಿ ನಟಿಸಿದ್ದು, ನನ್ನ ಸ್ನೇಹಿತನಿಂದ ಈ ಪಾತ್ರ ಸಿಕ್ಕಿದೆ. ಮೂರು ತಿಂಗಳು ಪಾತ್ರಕ್ಕೆ ತಯಾರಿ ಮಾಡಿಕೊಂಡೆ. ಸೆಟ್ ನಲ್ಲಿ ಇಡೀ ಕುಟುಂಬದ ರೀತಿ ಎಲ್ಲರೂ ಟ್ರೀಟ್ ಮಾಡುತ್ತಿದ್ದರು’ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು.
ಈ ಸಿನಿಮಾದಲ್ಲಿ ಲೂಸಿಯಾ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ, ಮೆಟ್ರೋ ಸಾಗಾ ಖ್ಯಾತಿಯ ಆಕರ್ಷ್ ಕಮಲ, ವೆಂಕಟ್, ರಾಜ್, ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ದಿಯಾ ಪೃಥ್ವಿ ಅಂಬರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ. ಉಳಿದಂತೆ ದತ್ತು ಬಣಕರ್, ಕೌಶಿಲ್, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಒಳಗೊಂಡ ಕಲಾಬಳಗ ಚಿತ್ರದಲ್ಲಿದೆ.
ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನವಿದೆ. ಪೂಜಾ ಟಿ.ವೈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
ಹೊಸ ಸೇರ್ಪಡೆ

Guarantee Scheme ಟೀಕಿಸಿ ಸ್ಟೇಟಸ್; ಶಿಕ್ಷಕ- ಶಿಕ್ಷಕಿಗೆ ನೋಟಿಸ್

WTC title ; ಆಸ್ಟ್ರೇಲಿಯ ರಣತಂತ್ರ: ಭಾರತಕ್ಕೆ ಬೃಹತ್ ಗುರಿ ನೀಡಿ ಶಾಕ್

Mumbai; 1 ಕೋಟಿ ರೂ.ಮೌಲ್ಯದ ಮಾದಕ ವಸ್ತು ಸಹಿತ ವಿದೇಶಿ ವ್ಯಕ್ತಿ ಸೆರೆ

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

ಬೊರಿವಲಿಯ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿ: ಮಂಥನ್-2023 ಸಂಭ್ರಮ