ಫೆ.25ಕ್ಕೆ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ರಿಲೀಸ್
Team Udayavani, Feb 5, 2022, 11:10 AM IST
ಎಲ್ಲವೂ ಅಂದುಕೊಂಡಂತಯೆ ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರ ಜನವರಿ 21ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್ ಮೂರನೇ ಅಲೆ ಹಾಗೂ ಚಿತ್ರಮಂದಿರಗಳಲ್ಲಿ ಶೇ 50 ಪ್ರವೇಶಾತಿ ಇದ್ದ ಕಾರಣ ಸಿನಿಮಾದ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿತ್ತು.
ಈಗ “ಏಕ್ ಲವ್ ಯಾ’ ಚಿತ್ರತಂಡ ಅಧಿಕೃತವಾಗಿ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಚಿತ್ರ ಇದೇ ಫೆ.25ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಪ್ರೇಮ್ ನಿರ್ದೇಶನದ ಸಿನಿಮಾವೊಂದು ದೊಡ್ಡ ಗ್ಯಾಪ್ನ ನಂತರ ಬಿಡುಗಡೆಯಾದಂತಾಗುತ್ತದೆ. ಇನ್ನು, ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಫೆ.11ರಂದು ಸಂಜೆ 5 ಗಂಟೆಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಇನ್ನು, ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಕನ್ನಡ ಚಿತ್ರರಂಗದ ಕೆಲವೇ ಕೆಲವು ನಿರ್ದೇಶಕರಲ್ಲಿ ಪ್ರೇಮ್ ಮೊದಲ ಸಾಲಿನಲ್ಲಿ ಸಿಗುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಅವರ ಸಿನಿಮಾಗಳಲ್ಲಿ ಹಿಟ್ ಆಗಿರುವ ಹಾಡುಗಳೇ ಇವೆ. ಈಗ ಪ್ರೇಮ್ ಮತ್ತೂಮ್ಮೆ ತಮ್ಮ ಸಂಗೀತ ಪ್ರೇಮ ಮೆರೆದಿದ್ದಾರೆ. ಅದು “ಏಕ್ ಲವ್ ಯಾ’ ಚಿತ್ರ¨ ಮೂಲಕ ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರದ ಬಿಡುಗಡೆಯಾಗಿರುವ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಹಿಟ್ಲಿಸ್ಟ್ ಸೇರಿವೆ. ಆರಂಭದಲ್ಲಿ ಬಿಟ್ಟ ಹುಡುಗಿ ಯರ ಬ್ರೇಕಪ್ ಸಾಂಗ್ ಆಗಿ ಹೊರಬಂದ “ಎಣ್ಣೆಗೂ ಹೆಣ್ಣಿಗೂ…’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ಈಗ ಹುಡುಗರ ಬ್ರೇಕಪ್ ಸಾಂಗ್ ರಿಲೀಸ್ ಆದ “ಒಂದು ಊರಲಿ..ಕೊನೆ ಬೀದಿಲಿ, ಇದ್ಲು ಒಬ್ಬಳು ಮುದ್ದು ದೇವತೆ…’ ಎಂದು ಆರಂಭವಾಗುವ ಹಾಡು ಸಿನಿಪ್ರೇಮಿಗಳ ಮನಗೆದ್ದಿದೆ. ಇದರ ಜೊತೆಗೆ “ಡೇಟ್ ಮಾಡೋಣ ಇಲ್ಲ, ಮೀಟ್ ಮಾಡೋಣ’ ಹಾಡು ಕೂಡಾ ಹಿಟ್ ಆಗಿದ್ದು, ಸಿನಿಮಾದ ಕ್ರೇಜ್ ಹೆಚ್ಚಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಸ್ಟಿನ್ ಲ್ಯಾಂಗರ್
ಪ್ರೇಮ್ ನಿರ್ದೇ ಶನದ ಈ ಚಿತ್ರದಲ್ಲಿ ರಾಣಾ ನಾಯಕರಾಗಿ ನಟಿಸಿದ್ದಾರೆ. ರಚಿತಾ ರಾಮ್, ರೀಷಾ ಸೇರಿದಂತೆ ಅನೇ ಕರು ನಟಿಸಿದ್ದಾರೆ. ರಕ್ಷಿತಾ ಫಿಲಂ ಫ್ಯಾಕ್ಟರಿಯಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ