ʼಎಲ್ರ ಕಾಲೆಳೆಯತ್ತೆ ಕಾಲ’: ಮೊದಲ ಹಾಡು ರಿಲೀಸ್ ಗೆ ರೆಡಿ
Team Udayavani, Aug 3, 2022, 1:06 PM IST
ರ್ಯಾಪರ್ ಚಂದನ್ ಶೆಟ್ಟಿ “ಎಲ್ರ ಕಾಲೆಳೆಯತ್ತೆ ಕಾಲ’ ಎಂಬ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿರುವ ಸುದ್ದಿ ನೀವು ಕೇಳಿರಬಹುದು. ಈಗ ಆ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಮೊದಲ ಹಂತವಾಗಿ ಚಿತ್ರದ ಹಾಡೊಂದು ಆ.05ರಂದು ಬಿಡುಗಡೆಯಾಗಲಿದೆ. ಚಿತ್ರದ “ಗೋಲ್ಡ್ ಫ್ಯಾಕ್ಟರಿ’ ಎಂಬ ಹಾಡು ಬಿಡುಗಡೆಯಾಗಲಿದೆ.
“ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಬಳಿಕ ನಿರ್ದೇಶಕ ಸುಜಯ್ ಶಾಸ್ತ್ರಿ ನಿರ್ದೇಶಿಸುತ್ತಿರುವ ಸಿನಿಮಾವಿದು. ಚಿತ್ರದ ಬಗ್ಗೆ ಮಾತನಾಡುವ ಅವರು, “ಸಿನಿಮಾದ ಶೂಟಿಂಗ್ ಮುಗಿದಿದೆ. ಮುಂದಿನ ತಿಂಗಳು ಬಿಡುಗಡೆಮಾಡುವ ಯೋಚನೆ ಇದೆ. ಈಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ’ ಎನ್ನುತ್ತಾರೆ.
ಚಿತ್ರದಲ್ಲಿ ರಂಗಭೂಮಿಯ ದೊಡ್ಡ ತಂಡ ಒಟ್ಟಾಗಿರೋದು ಸಂತಸದ ವಿಚಾರವಾಗಿದ್ದು, ನಿರ್ಮಾಪಕರಿಗೂ ಅದು ಖುಷಿ ತಂದಿದೆ ಎನ್ನುವುದು ಅವರ ಮಾತು. ಚಿತ್ರದಲ್ಲಿ ಚಂದನ್ 80-90 ದಶಕದ ಓರ್ವ ಪ್ರಾಧ್ಯಾಪಕನ ಪಾತ್ರ ಮಾಡುತ್ತಿದ್ದಾರೆ.
“ಗೋಕುಲ್ ಎಂಟರ್ಟೈನರ್’ನ ನಿರ್ಮಾಪಕ ಗೋವಿಂದರಾಜು ಈ ಚಿತ್ರನಿರ್ಮಾಣ ಮಾಡುತ್ತಿದ್ದಾರೆ. “ಈ ಚಿತ್ರಸಂಪೂರ್ಣ ಫ್ಯಾಮಿಲಿ ಚಿತ್ರವಾಗಿದ್ದುಆರಾಮವಾಗಿ ಇಡೀ ಕುಟುಂಬ ಕೂತು ನೋಡಬಹುದು’ ಎನ್ನುವ ವಿಶ್ವಾಸ ನಿರ್ಮಾಪಕರದು. ಚಿತ್ರದಲ್ಲಿ ನಟಿ ತಾರಾ, ಅರ್ಚನಾ ಕೊಟ್ಟಿಗೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!