ರೋರಿಂಗ್ ಸ್ಟಾರ್ ʼಬಘೀರʼಕ್ಕಾಗಿ ಸೂಪರ್ ಕಾಪ್ ಆದ ಫಹಾದ್ ಫಾಸಿಲ್
Team Udayavani, Jan 25, 2023, 1:10 PM IST
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ʼಬಘೀರʼ ಸಿನಿಮಾ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಚಿತ್ರೀಕರಣದ ಸಾಹಸ ದೃಶ್ಯದ ಶೂಟ್ ವೇಳೆ ಕಾಲಿಗೆ ಏಟು ಮಾಡಿಕೊಂಡಿರುವ ಶ್ರೀಮುರಳಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ.
ಈ ನಡುವೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಬಘೀರʼ ಚಿತ್ರ ತಂಡದಿಂದ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ. ಈಗಾಗಲೇ ʼಲೂಸಿಯಾʼ ಪವನ್ ನಿರ್ದೇಶನದ ʼಧೂಮಂʼ ಚಿತ್ರದಲ್ಲಿ ನಟಿಸಿರುವ ಬಹುಭಾಷಾ ನಟ, ಮಾಲಿವುಡ್ ನ ಖ್ಯಾತ ನಟ ಫಹಾದ್ ಫಾಸಿಲ್ ಇದೀಗ ʼಬಘೀರʼನ ಅಖಾಡಕ್ಕೆ ಕಾಲಿಡಲಿದ್ದಾರೆ.
ಇದನ್ನೂ ಓದಿ: ʼಒಂದು ಸರಳ ಪ್ರೇಮಕಥೆʼಗೆ ಕಾಲಿವುಡ್ ಬ್ಯೂಟಿ ಸ್ವತಿಷ್ಠ ಕೃಷ್ಣನ್ ನಾಯಕಿ
ಹೌದು ಈ ಸುದ್ದಿ ಅಧಿಕೃತವಾಗಿದ್ದು, ʼಬಘೀರʼ ಸಿನಿಮಾದಲ್ಲಿ ಫಹಾದ್ ಸಿಬಿಐ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರಣದಿಂದ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ʼಲಕ್ಕಿʼ ಸಿನಿಮಾದ ಬಳಿಕ ಡಾ.ಸೂರಿ ಬಹು ಸಮಯದ ಬಳಿಕ ಮತ್ತೆ ಆ್ಯಕ್ಷನ್ ಹೇಳುತ್ತಿರುವ ಸಿನಿಮಾ ʼಬಘೀರʼ. ಸಿನಿಮಾದ ಕಥೆಯನ್ನು ಪ್ರಶಾಂತ್ ನೀಲ್ ಅವರು ಬರೆದಿದ್ದಾರೆ.
ಇತ್ತೀಚೆಗೆ ನಟ ಫಹಾದ್ ಫಾಸಿಲ್ ʼವಿಕ್ರಮ್ʼ ಸಿನಿಮಾದಲ್ಲಿನ ನಟನೆಯಿಂದ ಗಮನ ಸೆಳೆದಿದ್ದರು. ಹೊಂಬಾಳೆ ಬ್ಯಾನರ್ ʼಧೂಮಂʼ ಬಳಿಕ ಫಹಾದ್ ಮತ್ತೊಮ್ಮೆ ಅದೇ ಬ್ಯಾನರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್ ಜೋಷಿ ಸಂವಾ
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಹೊಸ ಸೇರ್ಪಡೆ
ಶಿವಸೇನೆ ಕೋಮುವಾದಿ ಪಕ್ಷ ಅಲ್ಲವೇ: ಡಾ.ಸುಧಾಕರ್ ಪ್ರಶ್ನೆ
ಕಾಂಗ್ರೆಸ್ನಲ್ಲೇ ಅಸಮಾಧಾನ ಭುಗಿಲು: ಸಚಿವ ಬಿ.ಸಿ.ಪಾಟೀಲ್
ಅಮೆರಿಕದ ಈಶಾನ್ಯ ಭಾಗಕ್ಕೆ ಶೀತ ಮಾರುತ ಪ್ರಕೋಪ: – 46 ಡಿಗ್ರಿ ಸೆಲ್ಸಿಯಸ್ಗೆ ಇಳಿದ ತಾಪಮಾನ
ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ
ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು