
“ಕೆಜಿಎಫ್-2′ ಬಿಡುಗಡೆಗೆ ಮುಹೂರ್ತ ಫಿಕ್ಸ್
ಅಕ್ಟೋಬರ್ 23ಕ್ಕೆ ತೆರೆಗೆ
Team Udayavani, Mar 14, 2020, 7:00 AM IST

ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಎಂದೇ ಹೇಳಲಾಗುತ್ತಿರುವ ಯಶ್ ಅಭಿನಯದ “ಕೆಜಿಎಫ್-2′ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ.”ಕೆಜಿಎಫ್-2′ ಚಿತ್ರ 2020ರ ಅಕ್ಟೋಬರ್ 23ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು “ಕೆಜಿಎಫ್-2′ ಚಿತ್ರದ ನಿರ್ಮಾಣ ಸಂಸ್ಥೆ “ಹೊಂಬಾಳೆ ಫಿಲಂಸ್’ ತಿಳಿಸಿದೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಚಿತ್ರತಂಡ, ಕೆಂಪು ಬಣ್ಣದ ಹಿನ್ನೆಲೆಯಲ್ಲಿ ಯಶ್ ಗನ್ ಹಿಡಿದು ಸಾಗುತ್ತಿರುವಂತೆ ತೋರಿಸಲಾಗಿರುವ ಆಕರ್ಷಕ ಪೋಸ್ಟರ್‌ನೊಂದಿಗೆ, ಚಿತ್ರದ ದಿನಾಂಕವನ್ನು ಘೋಷಣೆ ಮಾಡಿದೆ. ಅಕ್ಟೋಬರ್ 23ರಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿಯ ಜತೆಗೆ “ಮೇ ಐ ಕಮ್ ಇನ್…’ ಎಂದು ಪ್ರೇಕ್ಷಕರನ್ನು ಕೇಳುತ್ತಿರುವಂತೆ ಶೀರ್ಷಿಕೆ ನೀಡಲಾಗಿದೆ.
#KGFChapter2 Worldwide Grand Release On October 23rd, 2020.#KGFChapter2OnOct23 @TheNameIsYash @prashanth_neel @VKiragandur @duttsanjay @SrinidhiShetty7 @TandonRaveena @bhuvangowda84 @BasrurRavi @Karthik1423 @AAFilmsIndia @excelmovies @FarOutAkhtar @ritesh_sid @VaaraahiCC pic.twitter.com/kq060lfNZM
— Hombale Films (@hombalefilms) March 13, 2020
ಇನ್ನು “ಕೆಜಿಎಫ್-2′ ಚಿತ್ರ ಕಳೆದ ವರ್ಷ ಮಾರ್ಚ್ 13ರಂದು ಸೆಟ್ಟೇರಿತ್ತು. 2020ರ ಮಾರ್ಚ್ 13ರಂದು ಚಿತ್ರ ಸೆಟ್ಟೇರಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿಯೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ವಿಜಯ್ ಕಿರಗಂದೂರು ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಈ ವರ್ಷದ ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಈಗ ಅದೆಲ್ಲದಕ್ಕೂ ತೆರೆ ಬಿದ್ದಿದೆ.
ಟಾಪ್ ನ್ಯೂಸ್
