ಕಾರ್ಮೋಡ ಸರಿಸಿ ಬಂದವರು…

ಬಿಸಿಲ ಧಗೆಯಲ್ಲಿ ಕೂಲ್‌ ಸಿನಿಮಾ

Team Udayavani, May 1, 2019, 3:00 AM IST

Karmoda-Saridu

ಆ ಹುಡುಗನಿಗೊಂದು ಆಸೆ ಇತ್ತು. ಕುದುರೆಮುಖ ಬೆಟ್ಟದ ಮೇಲೇರಿ ಒಂದು ಸಿನಿಮಾ ಮಾಡಬೇಕು ಅನ್ನೋದು. ಅಂಥದ್ದೊಂದು ಆಸೆ ಹುಟ್ಟುಕೊಂಡಿದ್ದು ಚಿಕ್ಕವಯಸ್ಸಿನಲ್ಲಿ. ಆ ಆಸೆ ಈಗ ಈಡೇರಿದೆ. “ಕಾರ್ಮೋಡ ಸರಿದು’ ಎಂಬ ಚಿತ್ರ ಮಾಡುವ ಮೂಲಕ ತನ್ನೆಲ್ಲಾ ಕನಸು ನನಸು ಮಾಡಿಕೊಂಡವರು ಮಂಜು ರಾಜಣ್ಣ.

ಅವರಷ್ಟೇ ಅಲ್ಲ, ಅವರೊಂದಿಗೆ ಉದಯಕುಮಾರ್‌ ಕೂಡ ಅಂದುಕೊಂಡಿದ್ದನ್ನು ಮಾಡಿದ್ದೇವೆ ಎಂಬ ಖುಷಿಯಲ್ಲಿದ್ದಾರೆ. ಹೌದು, ಇದು ಹೊಸಬರ ಚಿತ್ರ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ತಿಂಗಳಲ್ಲಿ ಪ್ರೇಕ್ಷಕರ ಎದುರು ಬರಲಿದೆ.

ಉದಯಕುಮಾರ್‌ ಚಿತ್ರ ನಿರ್ದೇಶಕರು. ಮಂಜು ರಾಜಣ್ಣ ನಾಯಕ ನಟ. ಇವರಿಗೆ ಇದು ಮೊದಲ ಚಿತ್ರ. ಸಿನಿಮಾ ಮೇಲೆ ಅತೀವ ಪ್ರೀತಿ ಇಟ್ಟುಕೊಂಡು, ತಮ್ಮ ಕಥೆ ಹೀಗೆ ಬರಬೇಕು, ಚಿತ್ರ ಹೀಗೆಯೇ ಮೂಡಿಬರಬೇಕು. ಇಂತಲ್ಲೇ ಚಿತ್ರೀಕರಣ ಆಗಬೇಕು ಎಂಬ ಯೋಚನೆ, “ಕಾರ್ಮೋಡ ಸರಿದು’ ಮೂಲಕ ಪಕ್ಕಾ ಆಗಿದೆ.

ಇಲ್ಲಿ ಕೆಲಸ ಮಾಡಿರುವುದು ಹೊಸ ಪ್ರತಿಭೆಗಳು. ಮಳೆಗಾಲ ವೇಳೆಯಲ್ಲೇ ಚಿತ್ರೀಕರಣ ಮಾಡಿದ್ದಾರೆ. ಹಾಗಾಗಿ, ಇಲ್ಲಿ ಎಲ್ಲವೂ ಫ್ರೆಶ್‌ ಫೀಲ್‌ಕೊಡುತ್ತದೆ. ಹಾಗಾದರೆ ಚಿತ್ರದ ಕಥೆ ಏನು? ಅದಕ್ಕೆ ಉತ್ತರ ಕೊಡುವ ನಿರ್ದೇಶಕ ಉದಯ್‌ಕುಮಾರ್‌, “ಈಗ ಮನುಷ್ಯನ ಬದುಕು ಒಂದು ರೀತಿ ಯಾಂತ್ರಿಕ ಜೀವನವಾಗಿದೆ.

ಸಂಬಂಧಗಳಿಗೆ ಬೆಲೆ ಇಲ್ಲ, ಭಾವನೆಗಳಿಗಂತೂ ಅರ್ಥವೇ ಇಲ್ಲವಾಗಿದೆ. ಎಲ್ಲವನ್ನೂ ಬದಿಗೊತ್ತಿ ಸ್ವಾರ್ಥ ಮನೋಭಾವದಲ್ಲೇ, ಬದುಕು ಸವೆಸುವಂತಾಗಿದೆ. ಇಂತಹ ಸೂಕ್ಷ್ಮ ಅಂಶಗಳು ಚಿತ್ರದ ಜೀವಾಳ. ಇಲ್ಲಿ ಮನುಷ್ಯನ ಭಾವನೆಗಳು ಕಾಣೆಯಾದಾಗ, ಕರುಣೆ, ಪ್ರೀತಿಗಳೇ ಇಲ್ಲವಾದಾಗ, ಏನೆಲ್ಲಾ ನಡೆದು ಹೋಗುತ್ತದೆ ಎಂಬುದು ಚಿತ್ರದ ಹೈಲೈಟ್‌.

ಇಲ್ಲಿ ಯುವ ಮನಸ್ಸುಗಳ ಜೊತೆಗೆ ಹಿರಿಯ ಜೀವಗಳಿಗೂ ದಕ್ಕುವ ಅಂಶಗಳಿವೆ. ಎಲ್ಲಾ ವರ್ಗಕ್ಕೂ ಇದು ಹಿಡಿಸುವ ಚಿತ್ರವಾಗಲಿದೆ ಎಮಬುದು ನಿರ್ದೇಶಕರ ಮಾತು. ಇನ್ನು, ಮಂಜು ರಾಜಣ್ಣ ಅವರಿಲ್ಲಿ ತುಂಬಾ ಆಸೆ ಪಟ್ಟು, ಕಷ್ಟಪಟ್ಟು, ಇಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ. ಮೊದಲ ಚಿತ್ರವಾದ್ದರಿಂದ ಎಲ್ಲವನ್ನೂ ಕರಗತ ಮಾಡಿಕೊಂಡೇ ಕೆಲಸ ಮಾಡಿದ್ದಾರೆ.

ಆದರೂ, ಮೊದಲ ಚಿತ್ರವಾದ್ದರಿಂದ ರಿಸ್ಕ್ ಸಹಜವಾಗಿಯೇ ಇತ್ತಂತೆ. ಚಿತ್ರದಲ್ಲಿ ತರಹೇವಾರಿ ಪಾತ್ರಗಳಿವೆ. ಯಾವ ಪಾತ್ರಗಳಿಗೆ ಕಾರ್ಮೋಡ ಆವರಿಸಿಕೊಳ್ಳುತ್ತದೆ. ಅದು ಸರಿದಾಗ, ಯಾವ ಪಾತ್ರಗಳ ಮೊಗದಲ್ಲಿ ಮಂದಹಾಸ ಮೂಡುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ಅವರು, ಇಲ್ಲಿ ತಿರುವುಗಳಿಗೆ ಹೆಚ್ಚು ಮಹತ್ವ ಕಲ್ಪಿಸಲಾಗಿದೆ.

ಸಾಕಷ್ಟು ಘಟನೆಗಳು ನಡೆಯುತ್ತಲೇ ಕುತೂಹಲ ಕಾಯ್ದುಕೊಂಡು ಹೋಗುತ್ತದೆ’ ಎಂದು ವಿವರ ಕೊಡುತ್ತಾರೆ. ಇಡೀ ಸಿನಿಮಾ “ಕುದುರೆಮುಖ, ಕಳಸ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಮಳೆಗಾಲದಲ್ಲೇ ಚಿತ್ರೀಕರಿಸಿದ್ದರಿಂದ ರಿಸ್ಕ್ ಸಾಮಾನ್ಯವಾಗಿತ್ತು. ಸಮಸ್ಯೆಗಳ ನಡುವೆಯೇ ಚಿತ್ರೀಕರಣ ಯಶಸ್ವಿಯಾಗಿದೆ. ಬಹುತೇಕ ಜನರಿಗೆ “ಕಾರ್ಮೋಡ ಸರಿದು’ ಆಪ್ತವೆನಿಸದೇ ಇರದು ಎಂಬುದು ಅವರ ಮಾತು.

ಚಿತ್ರದಲ್ಲಿ ಅದ್ವಿತಿ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಸತೀಶ್‌ ಬಾಬು ಸಂಗೀತವಿದ್ದು, ಮೂರು ಹಾಡುಗಳಿವೆ. “ಬಾಹುಬಲಿ’ ಚಿತ್ರಕ್ಕೆ ಹಾಡಿದ್ದ ಗಾಯಕರು ಇಲ್ಲೂ ಹಾಡಿದ್ದಾರೆ ಎಂಬುದು ವಿಶೇಷ. ಈಗಾಗಲೇ ಚಿತ್ರದ ಟ್ರೇಲರ್‌ ಮತ್ತು ಹಾಡಿಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಗಂಟೆಗಳಲ್ಲೇ ಲಕ್ಷ ಹಿಟ್ಸ್‌ ಸಿಕ್ಕಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

ಟಾಪ್ ನ್ಯೂಸ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

akash

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

14-

ಕಾರ ಹುಣ್ಣಿಮೆ; ಮಣ್ಣಿನ ಎತ್ತುಗಳ ಪೂಜೆಯ ಸಂಭ್ರಮ; ಕನ್ನಡದ ಮೊದಲ ಮಣ್ಣಿನ ಹಬ್ಬ ಕಾರಹುಣ್ಣಿಮೆ

ಅಮೆರಿಕದ ಕಾಲೇಜಿನಲ್ಲಿ ಪದವಿ ಪಡೆದರೆ Green Card! ವಿದೇಶಿ ವಿದ್ಯಾರ್ಥಿಗಳಿಗೆ ಟ್ರಂಪ್ ಭರವಸೆ

ಅಮೆರಿಕದ ಕಾಲೇಜಿನಲ್ಲಿ ಪದವಿ ಪಡೆದರೆ Green Card! ವಿದೇಶಿ ವಿದ್ಯಾರ್ಥಿಗಳಿಗೆ ಟ್ರಂಪ್ ಭರವಸೆ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Dhananjaya as Nadaprabhu Kempegowda

Dhananjaya; ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ಡಾಲಿ

Pat Cummins becomes the 2nd Australian to pick a hat-trick in the T20 World Cup history

T20 World Cup; ಹ್ಯಾಟ್ರಿಕ್ ವಿಕೆಟ್ ಕಿತ್ತ ಕಮಿನ್ಸ್; 17 ವರ್ಷದ ಬಳಿಕ ಆಸೀಸ್ ಬೌಲರ್ ಸಾಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Sambhavami Yuge Yuge movie

Sambhavami Yuge Yuge: ಹಳ್ಳಿಯ ಸುತ್ತ ಸಂಭವಾಮಿ…

Dhananjaya as Nadaprabhu Kempegowda

Dhananjaya; ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ಡಾಲಿ

Movies; ಇಲ್ಲಿವರೆಗೆ ಒಂದ್‌ ಲೆಕ್ಕ ಇನ್ಮುಂದೆ ಬೇರೆ ಲೆಕ್ಕ: ಸ್ಟಾರ್‌ ಸಿನಿಮಾಗಳು ಮುಂದಕ್ಕೆ

Movies; ಇಲ್ಲಿವರೆಗೆ ಒಂದ್‌ ಲೆಕ್ಕ ಇನ್ಮುಂದೆ ಬೇರೆ ಲೆಕ್ಕ: ಸ್ಟಾರ್‌ ಸಿನಿಮಾಗಳು ಮುಂದಕ್ಕೆ

23

Actor Darshan: ಕಾನ್‌ಸ್ಟೇಬಲ್‌ ಮೇಲೆಯೂ ನಟ ದರ್ಶನ್‌ ಗ್ಯಾಂಗ್‌ ಹಲ್ಲೆ 

MUST WATCH

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

ಹೊಸ ಸೇರ್ಪಡೆ

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

15

Doddanagudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ನಾಗ ತನುತರ್ಪಣ ಮಂಡಲ ಸೇವೆ ಸಂಪನ್ನ

akash

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

Udayavani Campaign: ಬಸ್‌ ಬೇಕೇ, ಬೇಕು- ಆ ಊರಿನ ಬಸ್‌ ಕೊರೊನಾಗೆ ಬಲಿಯಾಗಿದೆ!

Udayavani Campaign: ಬಸ್‌ ಬೇಕೇ, ಬೇಕು- ಆ ಊರಿನ ಬಸ್‌ ಕೊರೊನಾಗೆ ಬಲಿಯಾಗಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.