ಗಣೇಶ್‌ ಹೊಸ ಚಿತ್ರ ಆರೆಂಜ್‌

Team Udayavani, Feb 12, 2017, 11:02 AM IST

9.jpg

ನಾಳೆ ಒಂದು ಸರ್‌ಪ್ರೈಸ್‌ ಕೊಡ್ತೀನಿ. ಏನದು ಎಂದು ಊಹೆ ಮಾಡಿ ನೋಡೋಣ …’
ಹಾಗಂತ ಶುಕ್ರವಾರ ಒಂದು ಮೆಸೇಜ್‌ ಹಾಕಿಕೊಂಡಿದ್ದರು ನಿರ್ದೇಶಕ ಪ್ರಶಾಂತ್‌ ರಾಜ್‌. ಜೊತೆಗೊಂದು ಫೋಟೋ ಇತ್ತು. ಫೋಟೋ ನೋಡಿದರೆ, ಅವರು ಏರ್‌ಪೋರ್ಟ್‌ನಲ್ಲಿ ನಿಂತಿರುವುದು ಸ್ಪಷ್ಟವಾಗುತಿತ್ತು. ಆದರೆ, ಅವರು ಎಲ್ಲಿಗೆ ಹೊರಟಿದ್ದಾರೆ, ಯಾವ ಸರಪ್ರೈಸ್‌ ಕೊಡುತ್ತಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆ ಗುಟ್ಟು ಶನಿವಾರ ಬೆಳಿಗ್ಗೆ ಹೊರಬಿದ್ದಿದೆ.ಅದೇನೆಂದರೆ, ಪ್ರಶಾಂತ್‌ ರಾಜ್‌ ಸದ್ಯದಲ್ಲೇ ಗಣೇಶ್‌ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದ ಟೈಟಲ್‌ “ಆರೆಂಜ್‌’. ಹೌದು, “ಜೂಮ್‌’ಯಶಸ್ಸಿನ ನಂತರವೇ ಗಣೇಶ್‌ ಅಭಿನಯದಲ್ಲಿ ಇನ್ನೊಂದು ಚಿತ್ರವನ್ನು ನಿರ್ದೇಶಿಸುವುದಾಗಿ ಪ್ರಶಾಂತ್‌ ಹೇಳಿದ್ದರು. ಆದರೆ,ಗಣೇಶ್‌ ಬೇರೆ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಹಳೆಯ ಎಲ್ಲಾ ಕೆಲಸಗಳು ಮುಗಿದಿವೆ. “ಚಮಕ್‌’ ಮುಂದಿನ ತಿಂಗಳು ಶುರುವಾಗಲಿದೆ.

“ಚಮಕ್‌’ ನಂತರ ಪ್ರಶಾಂತ್‌ ರಾಜ್‌ಗೆ  ಡೇಟ್ಸ್‌ ಕೊಟ್ಟಿದ್ದಾರೆ ಗಣೇಶ್‌. ಚಿತ್ರ ಶುರುವಾಗುವುದೇನಿದ್ದರೂ ಅವರ ಹುಟ್ಟುಹಬ್ಬಕ್ಕೇ. ಆದರೆ, ಶನಿವಾರ ಚಿತ್ರದ ಟೈಟಲ್‌ ಲಾಂಚ್‌ ಆಗಿದೆ. ಇಷ್ಟು ಬೇಗ ಆಗುವುದಕ್ಕೂ ಒಂದು ಕಾರಣವೇನಿದೆ. ಅದೇನೆಂದರೆ, ಶನಿವಾರ ಗಣೇಶ್‌ ಮತ್ತು ಶಿಲ್ಪಾ ಗಣೇಶ್‌ ಅವರ ಮದುವೆ ವಾರ್ಷಿಕೋತ್ಸವ. ಈ ಸಂಭ್ರಮದಲ್ಲಿ ಚಿತ್ರದ ಹೆಸರನ್ನು ಬಿಡುಗಡೆ ಮಾಡಲಾಗಿದೆ.

“ಆರೆಂಜ್‌’ ಚಿತ್ರವೂ”ಜೂಮ್‌’ಗಿಂಥ ಕಲರ್‌ ಫ‌ುಲ್‌ ಆಗಿರುವುದಷ್ಟೇ ಅಲ್ಲ, ಮನರಂಜನೆಯೂ ಹೆಚ್ಚಿರುತ್ತದಂತೆ. “ತೆಲುಗಿನಲ್ಲೂ ಇಂಥದ್ದೇ ಒಂದು ಹೆಸರಿನ ಚಿತ್ರ ಬಂದಿದೆ. ಆದರೆ, ರಾಮ್‌ ಚರಣ್‌ ತೇಜ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಅಪ್ಪಟ ಕನ್ನಡ ಚಿತ್ರ. ಸಖತ್‌ ಟ್ರೆಂಡಿಯಾಗಿರುತ್ತದೆ. ಶ್ರೀಮಂತ್ರ ಆಸೆಗಳು ಏನೇನಿರುತ್ತದೆ ಎಂದು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇನೆ. ಚಿತ್ರದಲ್ಲಿ ಬಹುತೇಕ “ಜೂಮ್‌’ ತಂಡವೇ ಇರುತ್ತದೆ. ನಾಯಕಿಯ ಹುಡುಕಾಟ ಸದ್ಯಕ್ಕೆ ನಡೆಯುತ್ತಿದೆ’ ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ ಪ್ರಶಾಂತ್‌ ರಾಜ್‌.

ಅಂದಹಾಗೆ, ಚಿತ್ರದ ಟೈಟಲ್‌ ಬಿಡುಗಡೆಯಾಗಿದ್ದು ಶಿರಡಿಯ ಸಾಯಿಬಾಬ ದೇವಸ್ಥಾನದಲ್ಲಿ. ಇಲ್ಲಿ ಇದುವರೆಗೂ ಯಾವುದೇ ಕನ್ನಡದ ಚಿತ್ರದ ಟೈಟಲ್‌ ಬಿಡುಗಡೆಯಾಗಿರಲಿಲ್ಲವಂತೆ. ಈ ಸಂದರ್ಭದಲ್ಲಿ ಗಣೇಶ್‌, ಶಿಲ್ಪ ಗಣೇಶ್‌,ಪ್ರಶಾಂತ್‌ ರಾಜ್‌, ನಿರ್ಮಾಪಕ ನವೀನ್‌ ಜೊತೆಗೆ “ಮುಗುಳು ನಗೆ’ ನಿರ್ಮಾಪಕ ಸಯ್ಯದ್‌ ಸಲಾಂ ಸೇರಿದಂತೆ ಹಲವರು ಜೊತೆಗಿದ್ದಾರೆ.

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renuka swamy Case: ದರ್ಶನ್‌, ಪವಿತ್ರಾ ಗೌಡ ಮತ್ತೆ ಪೊಲೀಸ್‌ ಕಸ್ಟಡಿಗೆ

Renuka swamy Case: ದರ್ಶನ್‌, ಪವಿತ್ರಾ ಗೌಡ ಮತ್ತೆ ಪೊಲೀಸ್‌ ಕಸ್ಟಡಿಗೆ

chef chidambara movie review

Chef Chidambara Review; ಕಿಲಾಡಿ ಜೋಡಿಯ ಥ್ರಿಲ್ಲಿಂಗ್‌ ಸ್ಟೋರಿ

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Kannada Cinema; ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.