ಗಣೇಶ್ ಹೊಸ ಚಿತ್ರ ‘ಬಾನದಾರಿಯಲ್ಲಿ…’
Team Udayavani, Apr 4, 2022, 3:29 PM IST
ನಟ ಗಣೇಶ್ ಸದ್ದಿಲ್ಲದೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಾರಿ ಗಣೇಶ್ ಮತ್ತೂಮ್ಮೆ ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರ ಹೊಸ ಚಿತ್ರಕ್ಕೆ “ಬಾನದಾರಿಯಲ್ಲಿ…’ ಎಂದು ಟೈಟಲ್ ಇಡಲಾಗಿದೆ. ಜೊತೆಗೆ “ನೋಡು ಎಂಥ ಚೆಂದ’ ಎಂಬ ಟ್ಯಾಗ್ಲೈನ್ ಕೂಡಾ ಇದೆ.
ಈ ಚಿತ್ರವನ್ನು ಶ್ರೀವಾರಿ ಟಾಕೀಸ್ ನಿರ್ಮಿಸುತ್ತಿದೆ. ಚಿತ್ರತಂಡ ಯುಗಾದಿ ಹಬ್ಬದಂದು ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿದೆ.
ಇದನ್ನೂ ಓದಿ:ಸಿಪಿಐ(ಎಂ)ಅಭ್ಯರ್ಥಿ ಸೈರಾಗೆ ಬೆಂಬಲ ಸೂಚಿಸಿದ ನಟ ನಾಸಿರುದ್ದೀನ್ ಶಾ
ಈಗಾಗಲೇ ಪ್ರೀತಂ ಗುಬ್ಬಿ ಹಾಗೂ ಗಣೇಶ್ ಕಾಂಬಿನೇಶನ್ನಲ್ಲಿ “ಮಳೆಯಲಿ ಜೊತೆಯಲಿ’, “ದಿಲ್ ರಂಗೀಲಾ’ ಹಾಗೂ “99′ ಚಿತ್ರಗಳು ಬಂದಿವೆ. ಈಗ ನಾಲ್ಕನೇ ಬಾರಿ ಜೊತೆಯಾಗಿದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಪ್ರೀತ ಜಯರಾಂ ಛಾಯಾಗ್ರಹಣ, ದೀಪು ಎಸ್.ಕುಮಾರ್ ಸಂಕಲನವಿದೆ.
As promised,here’s the title of our film
*ಬಾನದಾರಿಯಲ್ಲಿ*
ನೋಡು ಎಂಥ ಚಂದ…
⭐️✨?☀️?⚡️ಯುಗಾದಿ ಹಬ್ಬದ ಶುಭಾಶಯಗಳು …
???
ಹರೆಯದ ಹೃದಯಗಳೇ ಹರಸಿ ❤️?❤️
#movietitle launch
@preethamgubbi pic.twitter.com/I8b5hAXKut— Ganesh (@Official_Ganesh) April 2, 2022