ಬರ್ತ್‌ಡೇ ಆಚರಿಸುತ್ತಿಲ್ಲ: ಗಣೇಶ್‌


Team Udayavani, Jun 29, 2022, 3:29 PM IST

ಬರ್ತ್‌ಡೇ ಆಚರಿಸುತ್ತಿಲ್ಲ: ಗಣೇಶ್‌

ಜುಲೈ 02 ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬ. ಕೋವಿಡ್‌ ಮುನ್ನ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಗಣೇಶ್‌, ಕೋವಿಡ್‌ ನಂತರ ಹುಟ್ಟುಹಬ್ಬ ಆಚರಣೆಯಿಂದ ದೂರವೇ ಉಳಿದಿದ್ದಾರೆ.

ಈ ಬಾರಿಯಾದರೂ ತಮ್ಮ ಜೊತೆ ಹುಟ್ಟುಹಬ್ಬ ಆಚರಿಸುತ್ತಾರೆಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಬಾರಿಯೂ ಗಣೇಶ್‌ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಕುರಿತು ಗಣೇಶ್‌ ಅಭಿಮಾನಿಗಳಿಗೊಂದು ಪತ್ರ ಬರೆದಿದ್ದಾರೆ.

ಆ ಪತ್ರ ಹೀಗಿದೆ; “ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕವೂ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲಿಯೂ ನನ್ನೊಂದಿಗೆ ಹೆಜ್ಜೆ ಹಾಕಿ ನನ್ನ ಯಶಸ್ಸು ನಿಮ್ಮದೇ ಯಶಸ್ಸು ಎಂಬ ರೀತಿಯಲ್ಲಿ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ. ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತಿ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡೆಗಿನ ನಿಮ್ಮ ನಿಷ್ಕಲ್ಮಶ ಪ್ರೀತಿಭರಿತ ಅಭಿಮಾನಕ್ಕೆ ನಾನು ಸದಾ ಋಣಿ. ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಾನು ನಿಮ್ಮನ್ನೆಲ್ಲಾ ವೈಯಕ್ತಿಕವಾಗಿ ಭೇಟಿಯಾಗಿ ನಿಮ್ಮೆಲ್ಲರ ಪ್ರೀತಿಯನ್ನು ಆಸ್ವಾಧಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಮಯ ಈ ಸಂಭ್ರಮಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದಾಗಿ ನಾನು ನನ್ನ ಹುಟ್ಟಿದ ದಿನದಂದು ಅಂದರೆ ಜುಲೈ 02ರಂದು ಮನೆಯಲ್ಲಿರಲು ಸಾಧ್ಯವಾಗು ತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ. ನೀವೆಲ್ಲರೂ ಅಭಿಮಾನದಿಂದ ನನಗಾಗಿ ತರುವ ಹಾರ-ತುರಾಯಿ, ಕೇಕ್‌ ಇತ್ಯಾದಿಗಳ ಬದಲಿಗೆ ಅದೇ ಹಣದಲ್ಲಿ ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನಮಗೆ ತಲುಪಿಸಿಬಿಡಿ’.

ಸದ್ಯ ಗಣೇಶ್‌ ನಾಯಕರಾಗಿರುವ “ಗಾಳಿಪಟ-2′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರವನ್ನು ಯೋಗರಾಜ್‌ ಭಟ್‌ ನಿರ್ದೇಶಿಸಿದ್ದು, ರಮೇಶ್‌ ರೆಡ್ಡಿ ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

20–FIBA—U-18

ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ಗೆ ಸಕಲ ಸಿದ್ಧತೆ

ರಾಜು ಶ್ರೀವಾಸ್ತವ್‌ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತ ಹೇಳಿದ್ದೇನು ?

ರಾಜು ಶ್ರೀವಾಸ್ತವ್‌ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತ ಹೇಳಿದ್ದೇನು?

19-rape

ಅತ್ಯಾಚಾರ ವಿರೋಧಿಸಿದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ: 25 ಅಡಿ ಎತ್ತರದಿಂದ ತಳ್ಳಿದ ದುರುಳರು

tdy-3

ಯಾವ ದೂರೂ ಬಂದಿಲ್ಲ: ಜಾಕ್ವೆಲಿನ್‌ ಪರ ವಕೀಲ

ಯುವಕನನ್ನು ಕೊಂದು ಮೃತದೇಹವನ್ನು ಫ್ಲ್ಯಾಟ್‌ನಲ್ಲಿ ಬಚ್ಚಿಟ್ಟ ಪ್ರಕರಣ: ಇಬ್ಬರ ಬಂಧನ

ಯುವಕನನ್ನು ಕೊಂದು ಮೃತದೇಹವನ್ನು ಫ್ಲ್ಯಾಟ್‌ನಲ್ಲಿ ಬಚ್ಚಿಟ್ಟ ಪ್ರಕರಣ: ಇಬ್ಬರ ಬಂಧನ

M B Patil

ಯಡಿಯೂರಪ್ಪ ಅವರನ್ನು ಸಿಎಂ ಎಂದು ಘೋಷಿಸಲಿ: ಎಂ.ಬಿ ಪಾಟೀಲ್ ಸವಾಲು

web exclusive thumbnail businessman

ಕೋಲಾರದ ಬೀದಿಯಿಂದ ‘ಕೊಸ್ಕಿ’ಯವರೆಗೆ….; ಯಶಸ್ವಿ ಉದ್ಯಮಿಯೊಬ್ಬರ ಯಶೋಗಾಥೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾಡಲ್ಲಿ ಪಂಪ ಗುಣಗಾನ! ಸೆಪ್ಟೆಂಬರ್‌ 9ಕ್ಕೆ ಬಿಡುಗಡೆ ಸಾಧ್ಯತೆ

ಹಾಡಲ್ಲಿ ಪಂಪ ಗುಣಗಾನ! ಸೆಪ್ಟೆಂಬರ್‌ 9ಕ್ಕೆ ಬಿಡುಗಡೆಗೆ ಸಿದ್ಧತೆ

ಡಾಕ್ಟರ್‌ ಕಣ್ಣಲ್ಲಿ ಆ್ಯಕ್ಟರ್‌ ಕನಸು; ಲವ್‌ 360 ನಾಯಕ ಪ್ರವೀಣ್‌ ಮಾತು

ಡಾಕ್ಟರ್‌ ಕಣ್ಣಲ್ಲಿ ಆ್ಯಕ್ಟರ್‌ ಕನಸು; ಲವ್‌ 360 ನಾಯಕ ಪ್ರವೀಣ್‌ ಮಾತು

1-asdada

ಸಚಿನ್ ಧನಪಾಲ್ ನಟನೆಯ ‘ಚಾಂಪಿಯನ್’ ಚಿತ್ರದ ಟೀಸರ್ ಬಿಡುಗಡೆ

ಸೈಮಾ ಅವಾಡ್ಸ್‌ ಗೆ ಕನ್ನಡದ ಮೂರು ಚಿತ್ರಗಳು ನಾಮಿನೇಟ್‌: ಪ್ರಮುಖ ನಾಮಿನೇಟ್‌ ಪಟ್ಟಿ ಇಲ್ಲಿದೆ

ಸೈಮಾ ಅವಾರ್ಡ್ಸ್ ಗೆ ಕನ್ನಡದ 3 ಚಿತ್ರಗಳು ನಾಮಿನೇಟ್‌: ಪ್ರಮುಖ ನಾಮಿನೇಟ್‌ ಪಟ್ಟಿ ಇಲ್ಲಿದೆ

tdy-10

ಆಲ್ಫಾದಲ್ಲಿ ಚಿರಂತ ಕನಸು

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

20–FIBA—U-18

ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ಗೆ ಸಕಲ ಸಿದ್ಧತೆ

ರಾಜು ಶ್ರೀವಾಸ್ತವ್‌ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತ ಹೇಳಿದ್ದೇನು ?

ರಾಜು ಶ್ರೀವಾಸ್ತವ್‌ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತ ಹೇಳಿದ್ದೇನು?

19-rape

ಅತ್ಯಾಚಾರ ವಿರೋಧಿಸಿದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ: 25 ಅಡಿ ಎತ್ತರದಿಂದ ತಳ್ಳಿದ ದುರುಳರು

ದೇಶದಲ್ಲಿ ಮಠಗಳಿಂದ ಶೈಕ್ಷಣಿಕ ಕ್ರಾಂತಿ; ನಿರಂಜನಾನಂದಪುರಿ ಶ್ರೀ

ದೇಶದಲ್ಲಿ ಮಠಗಳಿಂದ ಶೈಕ್ಷಣಿಕ ಕ್ರಾಂತಿ; ನಿರಂಜನಾನಂದಪುರಿ ಶ್ರೀ

tdy-3

ಯಾವ ದೂರೂ ಬಂದಿಲ್ಲ: ಜಾಕ್ವೆಲಿನ್‌ ಪರ ವಕೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.