Sandalwood: ಅಂಡರ್‌ವರ್ಲ್ಡ್ ಅಂಗಳದಲ್ಲಿ‌ ಲವ್‌

Team Udayavani, Aug 30, 2023, 3:49 PM IST

Sandalwood: ಅಂಡರ್‌ವರ್ಲ್ಡ್ ಅಂಗಳದಲ್ಲಿ‌ ಲವ್‌

ಕನ್ನಡ ಚಿತ್ರರಂಗದಲ್ಲಿ ಸುಮಾರು ನಾಲ್ಕು ದಶಕಗಳಿಂದ ಬರಹಗಾರರಾಗಿ ಸಕ್ರಿಯವಾಗಿರುವ, ಹಿರಿಯ ಚಿತ್ರ ಬರಹಗಾರ ಅಜಯ್‌ ಕುಮಾರ್‌ ಅವರ ಪುತ್ರ ಅರ್ಜುನ್‌ ಈಗ ನಾಯಕ ನಟನಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ.

ಅರ್ಜುನ್‌ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾಕ್ಕೆ “ಗನ್ಸ್‌ ಆ್ಯಂಡ್‌ ರೋಸಸ್‌’ ಎಂದು ಟೈಟಲ್‌ ಇಡಲಾಗಿದ್ದು, ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ನೆರವೇರಿತು.

ಮುಹೂರ್ತದ ಬಳಿಕ ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತನಾಡಿದ ಅರ್ಜುನ್‌, “ಮೊದಲ ಬಾರಿಗೆ ಈ ಸಿನಿಮಾದ ಮೂಲಕ ನಟನಾಗಿ ಬೆಳ್ಳಿತೆರೆಗೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಅಂಡರ್‌ ವರ್ಲ್ಡ್ ಕಂ ಲವ್‌ ಕಥಾಹಂದರದ ಸಿನಿಮಾ. ಈ ಸಿನಿಮಾದಲ್ಲಿ ಎರಡು ಶೇಡ್‌ನ‌ ಪಾತ್ರವಿದೆ. ಕೆಲ ವರ್ಷಗಳಿಂದ ನಟನಾಗಲು ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದು, ಒಂದು ಒಳ್ಳೆಯ ಸಿನಿಮಾದ ಮೂಲಕ ಲಾಂಚ್‌ ಆಗುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಹೆಚ್‌. ಎಸ್‌ ಶ್ರೀನಿವಾಸ ಕುಮಾರ್‌ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. “ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌, ಕಾಮಿಡಿ, ಎಮೋಶನ್ಸ್‌ ಹೀಗೆ ಎಲ್ಲ ಥರದ ಮನರಂಜನಾತ್ಮಕ ಅಂಶಗಳೂ ಈ ಸಿನಿಮಾದಲ್ಲಿದೆ. ಈಗಾಗಲೇ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಶುರುವಾಗಲಿದೆ’ ಎಂದು ಸಿನಿಮಾದ ಬಗ್ಗೆ ಮಾಹಿತಿ ನೀಡಿದರು ನಿರ್ದೇಶಕರು.

“ದ್ರೋಣ ಕ್ರಿಯೇಷನ್ಸ್‌’ ಬ್ಯಾನರಿನಲ್ಲಿ ಹೆಚ್‌. ಆರ್‌. ನಟರಾಜ್‌ ನಿರ್ಮಿಸುತ್ತಿರುವ “ಗನ್ಸ್‌ ಆ್ಯಂಡ್‌ ರೋಸಸ್‌’ ಸಿನಿಮಾದಲ್ಲಿ ಯಶ್ವಿ‌ಕಾ ನಿಷ್ಕಲಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅವಿನಾಶ್‌, ಶೋಭರಾಜ್‌, ನೀನಾಸಂ ಅಶ್ವಥ್‌, ಸುಚೇಂದ್ರ ಪ್ರಸಾದ್‌, ಹರ್ಷಾರ್ಜುನ್‌ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರಕ್ಕೆ ಜನಾರ್ಧನ್‌ ಬಾಬು ಛಾಯಾ ಗ್ರಹಣ, ಸಂಜೀವ ರೆಡ್ಡಿ ಸಂಕಲನವಿದೆ. ಚಿತ್ರಕ್ಕೆ ಶರತ್‌ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಿನಿಮಾ ದಲ್ಲಿ ನಾಲ್ಕು ಹಾಡು ಗಳಿಗೆ ಶಶಿಕುಮಾರ್‌ ಸಂಗೀತ ಸಂಯೋಜಿಸುತ್ತಿದ್ದು ಮತ್ತು ನಾಲ್ಕು ಸಾಹಸ ದೃಶ್ಯಗಳಿಗೆ ಥ್ರಿಲ್ಲರ್‌ ಮಂಜು ಸಾಹಸ ಸಂಯೋಜಿಸುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಸುಮಾರು 50 ದಿನಗಳ ಕಾಲ ಸಿನಿಮಾದ ಚಿತ್ರೀಕರಣ ನಡೆಸಲಿದೆ. ಇದೇ ಡಿಸೆಂಬರ್‌ ವೇಳೆಗೆ “ಗನ್ಸ್‌ ಆ್ಯಂಡ್‌ ರೋಸಸ್‌’ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

ಟಾಪ್ ನ್ಯೂಸ್

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Kotee movie trailer

Kotee movie; ಇನ್ನೆರಡು ದಿನದಲ್ಲಿ ಧನಂಜಯ್‌ ನಟನೆಯ ‘ಕೋಟಿ’ ಟ್ರೇಲರ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Kolhapur: ಜೈಲಿನೊಳಗೆ ಮುಂಬೈ ಸರಣಿ ಬಾಂಬ್‌ ಸ್ಫೋಟದ ಆರೋಪಿ ಖಾನ್‌ ಹತ್ಯೆ

Kolhapur: ಜೈಲಿನೊಳಗೆ ಮುಂಬೈ ಸರಣಿ ಬಾಂಬ್‌ ಸ್ಫೋಟದ ಆರೋಪಿ ಖಾನ್‌ ಹತ್ಯೆ

8

Natasa Stankovic: ಹಾರ್ದಿಕ್‌ ಪಾಂಡ್ಯ ಜೊತೆಗಿನ ಮದುವೆ ಫೋಟೋಗಳನ್ನು ಮತ್ತೆ ಹಂಚಿಕೊಂಡ ನತಾಶ

ಟಿ20 ವಿಶ್ವಕಪ್ ನ ಪಂದ್ಯಗಳನ್ನು ನಾನು ನೋಡುವುದಿಲ್ಲ..: ರಿಯಾಗ್ ಪರಾಗ್

T20 World Cup 2024: ವಿಶ್ವಕಪ್ ನ ಪಂದ್ಯಗಳನ್ನು ನಾನು ನೋಡುವುದಿಲ್ಲ..: ರಿಯಾನ್ ಪರಾಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hejjaru kannada movie songs

Hejjaru: ಪ್ರೀತಿಯಲ್ಲಿ ಇವನ್ಯಾರೋ… ಹೆಜ್ಜಾರು ಹಾಡುಹಬ್ಬ

Kotee movie trailer

Kotee movie; ಇನ್ನೆರಡು ದಿನದಲ್ಲಿ ಧನಂಜಯ್‌ ನಟನೆಯ ‘ಕೋಟಿ’ ಟ್ರೇಲರ್

Rishab shetty supoorts for Love li trailer

Love li ಟ್ರೇಲರ್‌ಗೆ ರಿಷಭ್‌ ಸಾಥ್‌

ಬಾತ್ ಟಬ್ ನಲ್ಲಿ ಪ್ರಣೀತಾ; ಅಭಿಮಾನಿಗಳ ಮಿಶ್ರ ಪ್ರತಿಕ್ರಿಯೆ

Pranitha Subhash: ಬಾತ್ ಟಬ್ ನಲ್ಲಿ ಪ್ರಣೀತಾ; ಅಭಿಮಾನಿಗಳ ಮಿಶ್ರ ಪ್ರತಿಕ್ರಿಯೆ

Shivarajkumar is in non violence movie

‘ನಾನ್‌ ವೈಲೆನ್ಸ್‌’ಗೆ ಶಿವಣ್ಣ ಸಾಥ್‌

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

hejjaru kannada movie songs

Hejjaru: ಪ್ರೀತಿಯಲ್ಲಿ ಇವನ್ಯಾರೋ… ಹೆಜ್ಜಾರು ಹಾಡುಹಬ್ಬ

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Kotee movie trailer

Kotee movie; ಇನ್ನೆರಡು ದಿನದಲ್ಲಿ ಧನಂಜಯ್‌ ನಟನೆಯ ‘ಕೋಟಿ’ ಟ್ರೇಲರ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.