
ಖೋ ಖೋ ಸುತ್ತ ಗುರು ಶಿಷ್ಯರ ಆಟ
Team Udayavani, Sep 13, 2022, 3:27 PM IST

ಶರಣ್ ನಾಯಕರಾಗಿ ನಟಿಸಿರುವ “ಗುರು ಶಿಷ್ಯರು’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಈಗ ಟ್ರೇಲರ್ ಹಿಟ್‌ಲಿಸ್ಟ್ ಸೇರುವ ಮೂಲಕ ಚಿತ್ರತಂಡದ ಖುಷಿಗೆ ಕಾರಣವಾಗಿದೆ.
ಮುಖ್ಯವಾಗಿ ಈ ಚಿತ್ರ ನಮ್ಮ ದೇಸಿ ಕ್ರೀಡೆಯಾದ ಖೋ ಖೋ ಹಿನ್ನೆಲೆಯಲ್ಲಿ ಸಾಗುತ್ತದೆ. ಖೋಖೋ ಕಲಿಸುವ ಕೋಚ್ ಪಾತ್ರದಲ್ಲಿ ಶರಣ್ ಅಭಿನಯಿಸಿದ್ದು ಅವರ ಶಿಷ್ಯಗಣದಲ್ಲಿ ದೊಡ್ಡ ದಂಡೇ ಸೇರಿಸಲಾಗಿದೆ.ನಟರಾದ ಶರಣ್, ಪ್ರೇಮ್, ರವಿಶಂಕರ್ ಗೌಡ, ನವೀನ್ ಕೃಷ್ಣ, ಬುಲೆಟ್ ಪ್ರಕಾಶ್ ಹಾಗೂ ಶಾಸಕ ರಾಜು ಗೌಡ ಪುತ್ರರು “ಗುರು ಶಿಷ್ಯರು’ ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸೆಲೆಬ್ರಿಟಿ ಮಕ್ಕಳು ಇಷ್ಟು ಪ್ರಮಾಣದಲ್ಲಿ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ.
ಕ್ರೀಡಾತ್ಮಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದಾಗ ಹುಟ್ಟಿಕೊಂಡ ಕಥೆಯೇ ಖೋ ಖೋ. ಮಕ್ಕಳು ತರಬೇತಿ ಪಡೆದ ಹಿನ್ನೆಲೆಯಲ್ಲಿ ಯಾವುದೇ ಪ್ರೊಫೆಷನಲ್ ಪ್ಲೇಯರ್ ಗಳಿಗೆ ಕಡಿಮೆ ಇಲ್ಲದಂತೆ ಆಡಿದ್ದಾರೆ ಎಂಬುದು ಚಿತ್ರತಂಡದ ಮಾತು.
ಇದನ್ನೂ ಓದಿ:ಗಣಪತಿ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡಲು ನಿರಾಕರಣೆ: ಯುವಕರಿಗೆ ಕೈಕಾಲು ಕಟ್ಟಿ ಥಳಿತ
ಖೋ ಖೋ ಜೊತೆಗೆ ಶರಣ್ ಅವರ ಅಭಿಮಾನಿಗಳಿಗಾಗಿ ಕಾಮಿಡಿ ಕೂಡಾ ಇದೆ. ಜೊತೆಗೊಂದು ಲವ್‌ಸ್ಟೋರಿ ಇದ್ದು, ನಾಯಕಿ ನಿಶ್ವಿಕಾ ಇಲ್ಲಿ ಸೂಜಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರ ಸೆ.23ರಂದು ತೆರೆಕಾಣುತ್ತಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
