
ಕೊಡಗು ಜನರಿಗೆ ಸಾಥ್ ನೀಡೋಣ; ಪರಿಹಾರ ನಿಧಿಗೆ 10 ಲಕ್ಷ ಕೊಟ್ಟ ಶಿವಣ್ಣ
Team Udayavani, Aug 20, 2018, 3:40 PM IST

ಬೆಂಗಳೂರು: ಮಹಾಮಳೆಗೆ ಪ್ರಕೃತಿ ಸೌಂದರ್ಯದ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು, ರಾಜ್ಯಾದ್ಯಂತ ಕೊಡಗಿನ ಜನರಿಗೆ ಬಟ್ಟೆ, ಔಷಧ, ಆಹಾರ ಸೇರಿದಂತೆ ಧನಸಹಾಯದ ನೆರವು ನೀಡುತ್ತಿದೆ. ಏತನ್ಮಧ್ಯೆ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ್ದಾರೆ.
ಶಿವರಾಜ್ ಕುಮಾರ್ ಅವರು ಕೊಡಗಿನ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಾಗಿದ್ದು, ಸೋಮವಾರ ಸಂಜೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಿದರು.
ಕೊಡಗಿನ ಜನತೆಗೆ ವಸ್ತುಗಳು ಅಗತ್ಯಕ್ಕಿಂತ ಹೆಚ್ಚು ತಲುಪಿದೆ. ಆದರೆ ಇದೀಗ ಕೊಡಗಿನ ಜನತೆಗೆ ಸಮಸ್ಯೆ ತುಂಬಾ ಇದೆ. ಅದಕ್ಕಾಗಿ ಜನರಿಗಿಂತ ಹೆಚ್ಚಾಗಿ ಸರ್ಕಾರವೇ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೇ ನಾವು ಈ ಸಂದರ್ಭದಲ್ಲಿ ಕೊಡಗನ್ನು ಮರು ನಿರ್ಮಾಣ ಮಾಡುವುದು ಹೇಗೆ ಎಂಬ ಬಗ್ಗೆ ಆಲೋಚಿಸಬೇಕಾಗಿದೆ. ಸರ್ಕಾರ ನೆರವು ನೀಡುತ್ತೆ ಎಂದು ಕಾಯುತ್ತ ಕುಳಿತುಕೊಳ್ಳುವುದು ಬೇಡ. ನಾವೇ ಸರ್ಕಾರ ರೀತಿ ಕೆಲಸ ಮಾಡೋಣ ಎಂದು ನಟ ರವಿಚಂದ್ರನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ