
ಕರ್ಷಣಂಗೆ ಹೇಮಂತ ಸಂಗೀತ
Team Udayavani, Aug 29, 2018, 11:45 AM IST

“ಪ್ರೀತ್ಸೇ ಪ್ರೀತ್ಸೇ’ ಖ್ಯಾತಿಯ ಗಾಯಕ ಹೇಮಂತ್ ಕುಮಾರ್ ಇದೀಗ ಸಂಗೀತ ನಿರ್ದೇಶಕರಾಗಿದ್ದಾರೆ. ಧನಂಜಯ್ ಆತ್ರೆ ನಿರ್ಮಾಣದ ಮತ್ತು ಅಭಿನಯದ “ಕರ್ಷಣಂ’ ಎಂಬ ಚಿತ್ರಕ್ಕೆ ಹೇಮಂತ್ ನಾಲ್ಕು ಹಾಡುಗಳನ್ನು ಸಂಯೋಜಿಸುವ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ.
ತಾವು ಸಂಗೀತ ನಿರ್ದೇಶಕರಾಗಿದ್ದು ಬಹಳ ಆಕಸ್ಮಿಕ ಎಂದು ಹೇಳಿಕೊಳ್ಳುತ್ತಾರೆ ಹೇಮಂತ್. “ನಾನು ಗಾಯಕನಾಗಿ ಬಹಳ ಸಂತೋಷವಾಗಿದ್ದೆ. ಹಾಡುತ್ತಾ ಬಿಝಿಯಾಗಿದ್ದೆ. ಅದೊಂದು ದಿನ ಅಶ್ವಿನಿ ರಾಮಪ್ರಸಾದ್ ಫೋನ್ ಮಾಡಿ ಕರೆದರು. ಹೋಗಿ ಭೇಟಿ ಮಾಡಿದೆ.
ಆ ಸಂದರ್ಭದಲ್ಲಿ ಅವರು “ಕರ್ಷಣಂ’ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಕುರಿತು ಹೇಳಿದರು. ಸರಿ ಅಂತ ಹೇಳಿ, ಐದು ಟ್ಯೂನ್ ಹಾಕಿದೆ. ಅವರಿಗೆ ಇಷ್ಟವಾಯಿತು. ನಿಜಕ್ಕೂ ಹಾಡುಗಳು ಚೆನ್ನಾಗಿ ಬಂದಿವೆ. ಹಾಡುಗಳು ಹಿಟ್ ಆಗುತ್ತದೆ ಎಂತ ಸಿಕ್ಸ್ತ್ ಸೆನ್ಸ್ ಹೇಳುತ್ತಿದೆ’ ಎನ್ನುತ್ತಾರೆ ಹೇಮಂತ್ ಕುಮಾರ್.
ಕಾಕತಾಳೀಯವೆಂದರೆ, “ಪ್ರೀತ್ಸೇ’ ಚಿತ್ರದ “ಪ್ರೀತ್ಸೇ ಪ್ರೀತ್ಸೇ’ ಹಾಡಿಸುವ ಮೂಲಕ ಹೇಮಂತ್ ಅವರಿಗೆ ಗಾಯಕರಾಗಿ ಭಡ್ತಿ ಕೊಟ್ಟಿದ್ದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಈಗ ಹೇಮಂತ್ ಮೊದಲ ಬಾರಿಗೆ ಸಂಗೀತ ಸಂಯೋಜಿಸಿರುವ “ಕರ್ಷಣಂ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದೂ ಅವರೇ.
ಟಾಪ್ ನ್ಯೂಸ್
