Hide And Seek; ಕಿಡ್ನ್ಯಾಪೊಂದರ ಸುತ್ತ ಹೈಡ್‌ ಅಂಡ್‌ ಸೀಕ್‌; ಟ್ರೇಲರ್‌ ಬಂತು

Team Udayavani, Feb 29, 2024, 5:37 PM IST

hide and seek kannada movie

ಅನೂಪ್‌ ರೇವಣ್ಣ ನಾಯಕರಾಗಿರುವ “ಹೈಡ್‌ ಅಂಡ್‌ ಸೀಕ್‌’ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಮಾ.15ರಂದು ತೆರೆಕಾಣಲಿದ್ದು, ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

ಸಚಿವ ರಾಮಲಿಂಗರೆಡ್ಡಿ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿ ಶುಭಕೋರಿದರು. ಈ ವೇಳೆ ಅನೇಕ ಗಣ್ಯರು ಸಾಥ್‌ ನೀಡಿದರು. ಪುನೀತ್‌ ನಾಗರಾಜು ಈ ಸಿನಿಮಾದ ನಿರ್ದೇಶಕರು. ಜೊತೆಗೆ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪುನೀತ್‌ ನಾಗರಾಜು ಮಾತನಾಡಿ, “ಹೈಡ್‌ ಆ್ಯಂಡ್‌ ಸೀಕ್‌ ಒಂದು ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ನ ಚಿತ್ರವಾಗಿದೆ. 25 ದಿನಗಳಲ್ಲಿ ಮಾಗಡಿ, ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತಲೂ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಚಿತ್ರದಲ್ಲಿ ರಿವರ್ಸ್‌ ಸ್ಕ್ರೀನ್‌ ಪ್ಲೇ ಮಾದರಿಯನ್ನು ಪ್ರಯೋಗ ಮಾಡಿದ್ದೇವೆ. ಕನ್ನಡದಲ್ಲಿ ಈ ಮಾದರಿ ಮೊದಲು ಎನ್ನಬಹುದು. ಚಿತ್ರದಲ್ಲಿ ಒಂದು ಕಿಡ್ನಾಪ್‌ ನಡೆಯುತ್ತದೆ. ಅದು ಯಾಕೆ, ಹೇಗೆ, ಯಾರಿಂದ ಎಂಬುದೇ ಚಿತ್ರದ ಕಥೆಯಾಗಿದೆ’ ಎಂದು ಮಾಹಿತಿ ನೀಡಿದರು.

ಅನೂಪ್‌ ರೇವಣ್ಣ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ನಾನು ಈ ಮೊದಲು ಮಾಡಿದ ಪಾತ್ರಕ್ಕೂ ಈಗ ಹೈಡ್‌ ಆ್ಯಂಡ್‌ ಸೀಕ್‌ನಲ್ಲಿ ಮಾಡಿದ ಪಾತ್ರಕ್ಕೂ ತುಂಬಾ ಭಿನ್ನತೆ ಇದೆ. ಹೊಸತನದ, ಒಂದು ರಾ ಕ್ಯಾರೆಕ್ಟರ್‌ ಇದು. ಒಂದು ಥರಾ ಹೀರೋ, ವಿಲನ್‌ ಎರಡೂ ಶೇಡ್‌ ಬರುತ್ತದೆ. ಎಲ್ಲೂ ಕೂಡಾ ಹೀರೋಯಿಸಂ ತೋರಿಸದೇ, ಫೈಟ್ಸ್‌ ಇಲ್ಲದೇ ಸೈಲೆಂಟ್‌ ಆಗಿ ಇರುವ ಪಾತ್ರ. ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುವ ಪಾತ್ರ ನನ್ನದು. ಚಿತ್ರೀಕರಣದ ದಿನಗಳು ಅದ್ಭುತವಾಗಿದ್ದವು’ ಎನ್ನುವುದು ಅನೂಪ್‌ ಮಾತು.

ಧನ್ಯಾ ರಾಮ್‌ಕುಮಾರ್‌ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಥ್ರಿಲ್ಲರ್‌ ಜಾನರ್‌ನಲ್ಲಿ ಕಾಣಿಸಿಕೊಂಡಿರುವ ಧನ್ಯಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಧನ್ಯಾ ರಾಮ್‌ಕುಮಾರ್‌, “ಸಸ್ಪೆನ್ಸ್‌ , ಥ್ರಿಲ್ಲರ್‌ ನನಗೆ ಇಷ್ಟವಾದ ಜಾನರ್‌. ಮೊದಲು ಕಥೆ ಕೇಳಿದಾಗ ಬಹಳ ಇಷ್ಟವಾಯ್ತು. ನನ್ನ ಎರಡನೇ ಚಿತ್ರ ಈ ಜಾನರ್‌ ಆಗಿರಬೇಕು ಎಂದು ಆಯ್ಕೆ ಮಾಡಿಕೊಂಡೆ. ಚಿತ್ರೀಕರಣಕ್ಕೂ ಮುಂಚೆ ಚಿತ್ರತಂಡದವರು ವರ್ಕ್‌ ಶಾಪ್‌ ಮಾಡುವ ಮೂಲಕ ಒಂದು ಬಾಂಡಿಂಗ್‌ ಬೆಳೆಸಿಕೊಂಡೆವು. ಚಿತ್ರದಲ್ಲಿ ನನ್ನದು ಅಪ್ಪನ ಮುದ್ದಿನ ಮಗಳ ಪಾತ್ರ. ದೊಡ್ಡ ಉದ್ಯಮಿಯ ಮಗಳಾಗಿ ಕಾಣಿಸಿಕೊಂಡಿದ್ದೇನೆ. ಕೊನೆಯವರೆಗೂ ಕುತೂಹಲ ಮೂಡಿಸುವ ಚಿತ್ರ ಇದಾಗಿದೆ’ ಎಂದರು.

ಚಿತ್ರಕ್ಕೆ ರೆಜೋ ಪಿ ಜಾನ್‌ ಛಾಯಾಗ್ರಹಣ, ಸ್ಯಾಂಡಿ ಅಡ್ಡಂಕಿ ಸಂಗೀತ, ಮಧು ತುಂಬೇಕೆರೆ ಸಂಕಲನ ಚಿತ್ರಕ್ಕಿದೆ. ಅನೂಪ್‌ ರೇವಣ್ಣ, ಧನ್ಯಾ ರಾಮ್‌ ಕುಮಾರ್‌, ಮೈತ್ರೀ ಜಗ್ಗಿ, ರಕ್ಷಾ ಉಮೇಶ್‌, ಅರವಿಂದ್‌, ಸೂರಜ್‌ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

ಟಾಪ್ ನ್ಯೂಸ್

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

marigold

Marigold; ನಿರ್ಮಾಪಕರ ಮೊಗದಲ್ಲಿ ಮಾರಿಗೋಲ್ಡ್‌ ನಗು

Sapthami Gowda

Sapthami Gowda: ‘ಕಾಂತಾರ-1’ ಚಿತ್ರದಲ್ಲಿ ನಟಿಸುತ್ತಾರಾ ಸಪ್ತಮಿ ; ನಟಿ ಹೇಳಿದ್ದೇನು?

Film Producer: ಸ್ಯಾಂಡಲ್‌ ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

Film Producer: ಸ್ಯಾಂಡಲ್‌ ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

eltu mutta kannada movie

Eltu Mutta Movie; ಸಾವಿನ ಮನೆಯಲ್ಲಿ ಡೋಲು ಬಡಿಯುವವರ ಕಥೆ

karimani malika kannada movie

Kannada Cinema; ‘ಕರಿಮಣಿ ಮಾಲೀಕ’ನ ನಂಬಿ ಬಂದವರು

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.