ಸ್ಟುಡಿಯೋ ಸೇರಿದ ‘ರಾಜಾಹುಲಿ’: ಪೋಸ್ಟ್ ಪ್ರೊಡಕ್ಷನ್ ನಲ್ಲಿ ಹೊನ್ನರಾಜ್ ಚಿತ್ರ


Team Udayavani, May 26, 2023, 5:51 PM IST

honnaraj’s mister and misses ramachari new kannada movie

“ಮಿಸ್ಟರ್‌ ಅಂಡ್‌ ಮಿಸಸ್‌ ರಾಜಾಹುಲಿ’ ಎಂಬ ಸಿನಿಮಾದ ಪೋಸ್ಟರ್‌ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಆ ಚಿತ್ರತಂಡ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಬಂದಿದೆ. ಹೊನ್ನರಾಜ್‌ ಈ ಸಿನಿಮಾದ ನಿರ್ದೇಶಕರು. ಜೊತಗೆ ನಾಯಕರಾಗಿಯೂ ನಟಿಸಿದ್ದಾರೆ.

ತಮ್ಮ ಸಿನಿಮಾ ಬಗ್ಗೆ ಮಾತನಾಡುವ ಹೊನ್ನರಾಜ್‌, “ಸಿನಿಮಾ ಮಾಡಬೇಕು ಎನ್ನುವುದು ನನ್ನ ಬಹಳ ವರ್ಷದ ಕನಸು. ಕುಟುಂಬದಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮಾಡಲಾಗಿದೆ. ಶೀರ್ಷಿಕೆಗೆ ನ್ಯಾಯ ಒದಗಿಸಿದ್ದು, ಒಳ್ಳೆಯ ಚಿತ್ರ ನೀಡಲಿದ್ದೇವೆ. ಯಾವುದೇ ತೊಂದರೆ ಇಲ್ಲದೆ ಚಿತ್ರೀಕರಣ ಪೂರ್ಣಗೊಂಡಿದೆ. ಫ್ಯಾಮಿಲಿ ಎಂಟರ್‌ ಟೈನ್ಮೆಂಟ್‌ ಚಿತ್ರ ಇದಾಗಿದ್ದು ಇದರಲ್ಲಿ ನಾಯಕ ಯಶ್‌ ಅಭಿಮಾನಿ. ಸ್ನೇಹಕ್ಕೆ ಹೆಚ್ಚು ಮಹತ್ವ ಕೊಡುವವನು, ಸಮಾಜ ಸೇವೆಯಲ್ಲಿರುವ ನಾಯಕ ಮದುವೆ ಆಗುತ್ತಾನೋ ಇಲ್ಲವೋ ಎನ್ನುವುದೇ ಚಿತ್ರದ ತಿರುಳು. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಈ ಚಿತ್ರಕ್ಕೆ ಮದ್ದೂರು, ಹುಳಿಯಾರು, ಚಿಕ್ಕ ನಾಯಕನಹಳ್ಳಿ, ಶ್ರೀರಂಗಪಟ್ಟಣ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಹಾಡೊಂದನ್ನು 12 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ನಾಯಕಿ ಶೃತಿ ಬಬಿತ ಮಾತನಾಡಿ, “ಎರಡು ವರ್ಷದ ನಂತರ ನಟಿಸಿದ್ದೇನೆ. ಮೊದಲು ನನ್ನ ಹೆಸರು ಶೃತಿರಾಜ್‌ ಅಂತಿತ್ತು. ಈಗ ಶೃತಿ ಬಬಿತಾ ಅಂತ ಇಟ್ಟುಕೊಂಡಿದ್ದೇನೆ. ಮಾಡರ್ನ್, ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಹಳ್ಳಿಯಲ್ಲಿ ನಾಯಕ ತನಗೆ ಬುದ್ಧಿ ಕಲಿಸುತ್ತಾರೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಚಿತ್ರದ ನಿರ್ಮಾಣದಲ್ಲಿ ಸಂಜಯ್‌ ಶ್ರೀನಿವಾಸ ಕೈಜೋಡಿಸಿದ್ದಾರೆ. ವಿನು ಮನಸು ಅವರ ಸಂಗೀತ, ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್‌ ನೃತ್ಯ ನಿರ್ದೇಶಕರಾಗಿ ಕೆಲಸ ನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ನಿರ್ಮಾಪಕ ಕೆ.ಮಂಜು, ಈಗ ಸಿನಿಮಾ ನೋಡಲು ಯಾರೂ ಬರುತ್ತಿಲ್ಲ. ನೀವು ನೋಡಿ ಖರ್ಚು ಮಾಡಿ, ಸಾಲ ತಗೊಂಡು ಮಾಡೋದು ಸರಿಯಲ್ಲ. ಅಲ್ಲದೇ ಈಗಾಗಲೇ ಸಾಕಷ್ಟು ಮಲ್ಪಿಪ್ಲೆಕ್ಸ್‌ ಮುಚ್ಚುತ್ತಿವೆ. ರೆಗ್ಯುಲರ್‌ ನಿರ್ಮಾಪಕರು ಯಾರೂ ಈಗ ಚಿತ್ರ ಮಾಡುತ್ತಿ ಇಲ್ಲ. ನಿಮಗೆ ಆಸೆ ಇದ್ದರೆ ಬೇರೆ ಕೆಲಸ ಮಾಡಿ’ ಎಂಬ ಕಿವಿಮಾತು ಹೇಳಿದರು. ಕಲಾವಿದರಾದ ಮೈಸೂರು ಮಂಜುಳ , ರೇಖಾದಾಸ್‌ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್

prabhakar

ಮಾಧ್ಯಮದವರ ಸಮಸ್ಯೆಗಳಿಗೆ ಸದಾ ಸ್ಪಂದನೆ: ಪ್ರಭಾಕರ್‌

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ

death

ಸುಬ್ರಹ್ಮಣ್ಯ: ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

MOBILE FRAUD MONEY

ಬ್ಯಾಂಕ್‌ ಖಾತೆ ವಿವರ ಪಡೆದು 1.21 ಲ.ರೂ. ವಂಚನೆ

power lines

kadaba: ಲೈನ್‌ಮನ್‌ ಸಾವು ಪ್ರಕರಣ: ಇಬ್ಬರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

Naveen shankar spoke about cini journey

ಹೀರೋ- ವಿಲನ್ ಅಂತೇನಿಲ್ಲ, ಪಾತ್ರಗಳಿಗೆ ನ್ಯಾಯ ಕೊಡುವುದೇ ನನ್ನಉದ್ದೇಶ… ನವೀನ್‌ ಶಂಕರ

ತೆರೆಗೆ ಬಂತು ನೈಜ ಘಟನೆಯ ಸುತ್ತ ‘ಪಿಂಕಿ ಎಲ್ಲಿ’?

ತೆರೆಗೆ ಬಂತು ನೈಜ ಘಟನೆಯ ಸುತ್ತ ‘ಪಿಂಕಿ ಎಲ್ಲಿ’?

Kannada film yada yada hi relased

ತೆರೆಗೆ ಬಂತು ಥ್ರಿಲ್ಲರ್‌ ‘ಯದಾ ಯದಾ ಹೀ’

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

prabhakar

ಮಾಧ್ಯಮದವರ ಸಮಸ್ಯೆಗಳಿಗೆ ಸದಾ ಸ್ಪಂದನೆ: ಪ್ರಭಾಕರ್‌

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ

death

ಸುಬ್ರಹ್ಮಣ್ಯ: ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು