ಇಂದಿನಿಂದ ವಿಕ್ರಮನ ಸಾಹಸ ಪ್ರದರ್ಶನ: ಚಾಲೆಂಜಿಂಗ್‌ ಸ್ಟಾರ್‌ ದರ್ಶನ


Team Udayavani, Feb 5, 2021, 8:17 AM IST

ಇಂದಿನಿಂದ ವಿಕ್ರಮನ ಸಾಹಸ ಪ್ರದರ್ಶನ: ಚಾಲೆಂಜಿಂಗ್‌ ಸ್ಟಾರ್‌ ದರ್ಶನ

ಕಾತುರಕ್ಕೆ ತೆರೆಬೀಳುವ ದಿನ ಬಂದೇ ಬಿಟ್ಟಿದೆ. ಅದು “ಇನ್ಸ್‌ಪೆಕ್ಟರ್‌ ವಿಕ್ರಂ’ ತೆರೆಕಾಣುವ ಮೂಲಕ. ಹೌದು, ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ ಇಂದು ತೆರೆಕಾಣುತ್ತಿದೆ. ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲಿ ಇದು ಕೂಡಾ ಸೇರಿದೆ. ಇಷ್ಟು ದಿನ ನೀವು ನೋಡಿರದ ಪ್ರಜ್ವಲ್‌ ದೇವರಾಜ್‌ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಒಂದು ಕಡೆ ಪೊಲೀಸ್‌ ಆಫೀಸರ್‌ ಆದರೆ, ಇನ್ನೊಂದು ಕಡೆ ಲವರ್‌ಬಾಯ್‌. ಹೀಗೆ ಭಿನ್ನ ಗೆಟಪ್‌ನಲ್ಲಿ ಪ್ರಜ್ವಲ್‌ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ದೊಡ್ಡ ಗ್ಯಾಪ್‌ ಬಳಿಕ ದರ್ಶನ್‌ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇನ್ನು ಈಗಾಗಲೇ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಟ್ರೇಲರ್‌ ನೋಡಿದವರಿಗೆ ಇದೊಂದು ಪಕ್ಕಾ ಮಾಸ್‌ ಎಂಟರ್‌ಟೈನರ್‌ ಎಂಬುದು ಗೊತ್ತಾಗುತ್ತದೆ. ಟ್ರೇಲರ್‌ನ ಆರಂಭದಲ್ಲೇ

“ಖಾಕಿ ಹಾಕ್ಕೊಂಡು ಖಡಕ್‌ ಆಗಿ ಎಂಟ್ರಿ ಕೊಡೋಕೆ, ನೀನೇನು ಡೈನಾಮಿಕ್‌ ಹೀರೋ ದೇವರಾಜೇನೋ…’, “ಅಲ್ಲಾ, ಅವರ ಮಗ ಪ್ರಜ್ವಲ್‌ ದೇವರಾಜ್‌ ಅಂದ್ಕೋ… ಅಲ್ಲಾ, ಅಪ್ಪ ಹೊಡೆದ್ರೆ ಲಾಕಪ್‌ ಡೆತ್‌, ಮಗ ಹೊಡೆದ್ರೆ ಸ್ಪಾಟ್‌ ಡೆತ್..’ ಎಂಬ ಮಾಸ್‌ ಡೈಲಾಗ್‌ ನೊಂದಿಗೆ ಆರಂಭವಾಗುವ ಈ ಟ್ರೇಲರ್‌ನಲ್ಲಿ ಫ‌ನ್ನಿ ಲವ್‌ಸ್ಟೋರಿಯೊಂದರ ಸೂಚನೆ ಕೂಡಾ ಇದೆ.

ಪ್ರಜ್ವಲ್‌ ಕೂಡಾ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಕಥೆ ಹೇಳಿದಾಗಲೇ ಈ ಸಿನಿಮಾ ಹೇಗೆ ಮೂಡಿಬರಬಹು ದೆಂಬ ಕಲ್ಪನೆ ಇತ್ತು. ಆದರೆ, ಸಿನಿಮಾ ಮಾತ್ರ ನನ್ನ ಕಲ್ಪನೆಗಿಂತಲೂ ಚೆನ್ನಾಗಿ ಮೂಡಿಬಂದಿದೆ. ಹೊಸ ವರ್ಷದಲ್ಲಿ ಪ್ರೇಕ್ಷಕರಿಗೆ ಇದೊಂದು ಫ್ಯಾಮಿಲಿ ಎಂಟರ್‌ ಟೈನರ್‌ ಸಿನಿಮಾವಾಗಿ ರಂಜಿಸಲಿದೆ’ ಎನ್ನುವುದು ಪ್ರಜ್ವಲ್‌ ದೇವರಾಜ್‌ ಮಾತು.

ಈ ಚಿತ್ರವನ್ನು ವಿಖ್ಯಾತ್‌ ನಿರ್ಮಿಸಿದ್ದಾರೆ. ಹೊಸ ವರ್ಷದ ಮೊದಲ ಸ್ಟಾರ್‌ ಸಿನಿಮಾವಾಗಿ “ಇನ್ಸ್‌ಪೆಕ್ಟರ್‌ ವಿಕ್ರಂ’ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ ಎಂಬುದು ನಿರ್ಮಾಪಕ ವಿಖ್ಯಾತ್‌ ಮಾತು.  ಇನ್ನು, ಈ ಚಿತ್ರ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದಲ್ಲಿ ಭಾವನಾ ನಾಯಕಿ. ಅವರ ಪಾತ್ರಕ್ಕೊಂದು ಟ್ವಿಸ್ಟ್‌ ಇದ್ದು, ಅದು ತೆರೆಮೇಲೆಯೇ ನೋಡಬೇಕು ಎಂಬುದು ಚಿತ್ರತಂಡದ ಮಾತು.

ನರಸಿಂಹ ಈ ಚಿತ್ರದ ನಿರ್ದೇಶಕರು. ಅವರು ಈ ಕಥೆ ಬರೆಯುವಾಗಲೇ ಪ್ರಜ್ವಲ್‌ ಅವರನ್ನು ಮನಸ್ಸಲಿಟ್ಟುಕೊಂಡಿದ್ದರಂತೆ. ಅದರಂತೆ ಪ್ರಜ್ವಲ್‌ ಕೂಡಾ ಕಥೆ ಕೇಳಿ ಖುಷಿಪಟ್ಟಿದ್ದಾರೆ. “ಇದು ಥ್ರಿಲ್ಲರ್‌ ಸಿನಿಮಾ ಅಲ್ಲ. ಇಡೀ ಸಿನಿಮಾದಲ್ಲಿ ತುಂಬಾ ಮಜಾವಾದ ಅಂಶಗಳಿವೆ. ಹಾಗಾಗಿ, ಸಿನಿಮಾದ ಕಥೆ ಬಿಟ್ಟುಕೊಡು ವಂತಿಲ್ಲ. ನಗಿಸಿ, ರಂಜಿಸಿ, ಖುಷಿ ಪಡಿಸಿ ಈ ಚಿತ್ರ ಪ್ರೇಕ್ಷಕರನ್ನು ಆಚೆ ಕಳುಹಿಸುತ್ತದೆ’ ಎಂಬ ವಿಶ್ವಾಸ ನಿರ್ದೇಶಕರಿಗಿದೆ.

ಟಾಪ್ ನ್ಯೂಸ್

kiccha sudeep reels

ರ..ರ..ರಕ್ಮಮ್ಮ ಸಖತ್‌ ಲುಕ್ಕಮ್ಮ… ಸುದೀಪ್ ರೀಲ್ಸ್ ವೈರಲ್

ಇಂದಿನ ರಾಶಿಫಲ: ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ

ಇಂದಿನ ರಾಶಿಫಲ: ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ

ಕಚ್ಚೇತೀವು ದ್ವೀಪ ಯಾರಿಗೆ? ಭಾರತ- ಶ್ರೀಲಂಕಾ ನಡುವೆ ಮುಗಿಯದ ವಿವಾದ

ಕಚ್ಚೇತೀವು ದ್ವೀಪ ಯಾರಿಗೆ? ಭಾರತ- ಶ್ರೀಲಂಕಾ ನಡುವೆ ಮುಗಿಯದ ವಿವಾದ

ಸೂರ್ಯನ ಬಳಿಗೆ ಭೂಮಿ ಹೋದರೆ ಏನಾಗುತ್ತೆ?

ಸೂರ್ಯನ ಬಳಿಗೆ ಭೂಮಿ ಹೋದರೆ ಏನಾಗುತ್ತೆ?

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

ಯೋಜನೆಗಳ ಮೇಲೆ ಮೋದಿ ಡ್ರೋನ್‌ ಕಣ್ಣು; ಯೋಜನೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲ

ಯೋಜನೆಗಳ ಮೇಲೆ ಮೋದಿ ಡ್ರೋನ್‌ ಕಣ್ಣು; ಯೋಜನೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲ

ಸಿದ್ದುಗೆ ಕಿಚ್ಚಿಟ್ಟ ಮೂಲ; “ಆರೆಸ್ಸೆಸ್‌ನವರು ಮೂಲ ಭಾರತದವರೇ?’ ಹೇಳಿಕೆಗೆ ಆಕ್ರೋಶ

ಸಿದ್ದುಗೆ ಕಿಚ್ಚಿಟ್ಟ ಮೂಲ; “ಆರೆಸ್ಸೆಸ್‌ನವರು ಮೂಲ ಭಾರತದವರೇ?’ ಹೇಳಿಕೆಗೆ ಆಕ್ರೋಶ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kiccha sudeep reels

ರ..ರ..ರಕ್ಮಮ್ಮ ಸಖತ್‌ ಲುಕ್ಕಮ್ಮ… ಸುದೀಪ್ ರೀಲ್ಸ್ ವೈರಲ್

vijay’s bheema movie shooting

‘ಭೀಮ’ ಚಿತ್ರೀಕರಣದಲ್ಲಿ ವಿಜಯ್ ಬಿಝಿ

ಮೂರು ಆಯಾಮಗಳ ಕಥಾಹಂದರ ‘ಧೀರನ್’

ಮೂರು ಆಯಾಮಗಳ ಕಥಾಹಂದರ ‘ಧೀರನ್’

wheelchair romeo

ವೀಲ್‌ಚೇರ್‌ನಲ್ಲಿ ಹೊಸ ಪ್ರೇಮ ಪುರಾಣ: ವಿಭಿನ್ನ ಕಾನ್ಸೆಪ್ಟ್ ನ ಸಿನಿಮಾವಿದು..

Akshith shashikumar spoke about seethayanam

ರಗಡ್‌ ಲವರ್‌ ಬಾಯ್: ಚೊಚ್ಚಲ ಚಿತ್ರದ ಬಿಡುಗಡೆ ಖುಷಿಯಲ್ಲಿ ಅಕ್ಷಿತ್

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

kiccha sudeep reels

ರ..ರ..ರಕ್ಮಮ್ಮ ಸಖತ್‌ ಲುಕ್ಕಮ್ಮ… ಸುದೀಪ್ ರೀಲ್ಸ್ ವೈರಲ್

ಇಂದಿನ ರಾಶಿಫಲ: ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ

ಇಂದಿನ ರಾಶಿಫಲ: ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ

ಕಚ್ಚೇತೀವು ದ್ವೀಪ ಯಾರಿಗೆ? ಭಾರತ- ಶ್ರೀಲಂಕಾ ನಡುವೆ ಮುಗಿಯದ ವಿವಾದ

ಕಚ್ಚೇತೀವು ದ್ವೀಪ ಯಾರಿಗೆ? ಭಾರತ- ಶ್ರೀಲಂಕಾ ನಡುವೆ ಮುಗಿಯದ ವಿವಾದ

ಸೂರ್ಯನ ಬಳಿಗೆ ಭೂಮಿ ಹೋದರೆ ಏನಾಗುತ್ತೆ?

ಸೂರ್ಯನ ಬಳಿಗೆ ಭೂಮಿ ಹೋದರೆ ಏನಾಗುತ್ತೆ?

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.