
ಈ ಬಾರಿ ಬರ್ತ್‌ಡೇ ಆಚರಣೆ ಇಲ್ಲ: ಜಗ್ಗೇಶ್
Team Udayavani, Mar 10, 2022, 12:37 PM IST

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಪ್ರತಿ ವರ್ಷ ತಮ್ಮ ಜನ್ಮದಿನವನ್ನು ಕುಟುಂಬ ವರ್ಗ ಮತ್ತು ಅಭಿಮಾನಿಗಳ ಜತೆ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಅದರಂತೆ ನಟ ಜಗ್ಗೇಶ್ ಕೂಡ ಇಷ್ಟು ವರ್ಷ ಮಾರ್ಚ್ 17ರಂದು ತಮ್ಮ ಬರ್ತ್ ಡೇಯನ್ನು ಹೀಗೆ ಆಚರಿಸಿಕೊಂಡಿದ್ದಾರೆ.
ಆದರೆ, ಈ ಬಾರಿ ಜಗ್ಗೇಶ್ ತಮ್ಮ ಬರ್ತ್‌ಡೇ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನಟ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ದುಃಖದ ನೋವು ಇನ್ನೂ ಮಾಸದಿರುವುದರಿಂದ, ಜಗ್ಗೇಶ್ ಇಂಥದ್ದೊಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಕನ್ನಡ, ತೆಲುಗಿನಲ್ಲಿ ‘ಕಾಟನ್‌ಪೇಟೆ ಗೇಟ್’ ತೆರೆಗ ಸಿದ್ದ
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಗ್ಗೇಶ್, “ಈ ಬಾರಿ ನನ್ನ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆಚರಿಸುವ ಮನಸ್ಸು ಕೂಡ ಇಲ್ಲ. ಕಾರಣ, ಪ್ರತಿ ಮಾರ್ಚ್ 17ಕ್ಕೆ ತಪ್ಪದೇ ಪುನೀತ್ ಕರೆ ಮಾಡುತ್ತಿದ್ದ. ಅಣ್ಣಾ ಹ್ಯಾಪಿ ಬರ್ತ್‌ಡೇ ಎಂದು ಹೇಳುತ್ತಿದ್ದ ಕರೆ ಮತ್ತೆ ಎಂದೂ ಬರದಂತಾಯಿತು. ಪುನೀತ್ ಜೊತೆ ಕೊನೆಯ ಚಿತ್ರ’ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ನೊಂದಿಗೆ ಪುನೀತ್ ಜತೆ ಇರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

JDS ಎನ್ ಡಿಎ ಮೈತ್ರಿಕೂಟ ಸೇರ್ಪಡೆಯಿಂದ ಎರಡೂ ಪಕ್ಷಗಳಿಗೂ ಶಕ್ತಿ: ಜಿಟಿಡಿ

Indian Army ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ICC World Cup ವಿಜೇತರಿಗೆ ಬಹುದೊಡ್ಡ ಮೊತ್ತ ನೀಡಲಿದೆ ಐಸಿಸಿ; ಇಲ್ಲಿದೆ ಬಹುಮಾನದ ವಿವರ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಗ್ರಾಮವಿದು ಜಲ್ಲಿಗುಡ್ಡೆ!

B’luru; ವಿವಾಹವಾಗುವುದಾಗಿ ಮತಾಂತರಕ್ಕೆ ಕಿರುಕುಳ: ಕಾಶ್ಮೀರದ ಯುವಕನ ಬಂಧನ