‘ಸಿಂಗಲ್ ಸುಂದರ’ನ ದರ್ಶನ ಯಾವಾಗ? ಜಗ್ಗೇಶ್ ‘ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಡೇಟ್ ಫಿಕ್ಸ್
Team Udayavani, Mar 17, 2023, 12:39 PM IST
ನವರಸ ನಾಯಕ ಜಗ್ಗೇಶ್ ನಟನೆಯ ಮುಂದಿನ ಬಹುನಿರೀಕ್ಷಿತ ‘ರಾಘವೇಂದ್ರ ಸ್ಟೋರ್ಸ್’ ಚಿತ್ರವು ಕೊನೆಗೂ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಜಗ್ಗೇಶ್ ಹುಟ್ಟುಹಬ್ಬದ ದಿನವಾದ ಇಂದು (ಮಾರ್ಚ್ 17) ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಮಾಡಿದೆ.
“ನಮ್ಮ ರಾಘವೇಂದ್ರ ಸ್ಟೋರ್ಸ್ನ ಖ್ಯಾತ ಬಾಣಸಿಗರಾದ ಜಗ್ಗೇಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನವಿರಾಗಿ ಸಿದ್ಧಪಡಿಸಿರುವ ನವರಸದೌತಣವನ್ನು ಏಪ್ರಿಲ್ 28, 2023ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಉಣಬಡಿಸಲಿದ್ದೇವೆ. ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ” ಎಂದು ಹೊಂಬಾಳೆ ಫಿಲಂಸ್ ಟ್ವೀಟ್ ಮಾಡಿದೆ.
ಅಡುಗೆ ಬಾಣಸಿಗರೊಬ್ಬರ ಕಥಾನಕವನ್ನು ಹೊಂದಿರುವ ರಾಘವೇಂದ್ರ ಸ್ಟೋರ್ಸ್ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಡಿ ವಿಜಯ್ ಕಿರಗಂದೂರು ಅವರು ನಿರ್ಮಾಣ ಮಾಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷದ ಆಗಸ್ಟ್ ನಲ್ಲೇ ಈ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ ಹಲವು ಕಾರಣದಿಂದ ಚಿತ್ರ ಬಿಡುಗಡೆ ಮುಂದೂಡಲಾಗಿತ್ತು. ಇದೀಗ ಕೊನೆಗೂ ರಾಘವೇಂದ್ರ ಸ್ಟೋರ್ಸ್ ನಲ್ಲಿ ನವರಸಗಳ ಪಾಕ ಸವಿಯಲು ಮುಹೂರ್ತ ಫಿಕ್ಸ್ ಆಗಿದೆ.
ಇದನ್ನೂ ಓದಿ:ವಿಡಿಯೋ: ದುಬೈ ಜುವೆಲ್ಲರಿ ಶಾಪ್ ನಲ್ಲಿ ಹಲ್ಲೆಗೊಳಗಾದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್
‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದಲ್ಲಿ ಜಗ್ಗೇಶ್ಗೆ ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಚಿಕ್ಕಮಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಸಿನಿಮಾದ ಚಿತ್ರೀಕರಣ ನಡೆದಿದೆ. ‘ರಾಘವೇಂದ್ರ ಸ್ಟೋರ್ಸ್’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ನಮ್ಮ ರಾಘವೇಂದ್ರ ಸ್ಟೋರ್ಸ್ನ ಖ್ಯಾತ ಬಾಣಸಿಗರಾದ @Jaggesh2 ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನವಿರಾಗಿ ಸಿದ್ಧಪಡಿಸಿರುವ ನವರಸದೌತಣವನ್ನು ಏಪ್ರಿಲ್ 28, 2023ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಉಣಬಡಿಸಲಿದ್ದೇವೆ.ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ. #RaghavendraStores April 28th Release. pic.twitter.com/cvRVZPbJGm
— Hombale Films (@hombalefilms) March 17, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?