ಫೆ.11ಕ್ಕೆ ‘ಜೇಮ್ಸ್‌’ ಟೀಸರ್‌ ಬಿಡುಗಡೆ


Team Udayavani, Feb 6, 2022, 12:29 PM IST

ಫೆ.11ಕ್ಕೆ ‘ಜೇಮ್ಸ್‌’ ಟೀಸರ್‌ ಬಿಡುಗಡೆ

ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ ಬಹು ನಿರೀಕ್ಷಿತ “ಜೇಮ್ಸ್’ ಸಿನಿಮಾದ ಟೀಸರ್‌ ಬಿಡುಗಡೆ ದಿನಾಂಕ ನಿಗಧಿಯಾಗಿದೆ. ಇದೇ ಫೆ. 11ಕ್ಕೆ “ಜೇಮ್ಸ್‌’ ಸಿನಿಮಾದ ಮೊದಲ ಟೀಸರ್‌ ಬಿಡುಗಡೆಯಾಗಲಿದ್ದು, ಪುನೀತ್‌ ರಾಜಕುಮಾರ್‌ ಪತ್ನಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌ “ಜೇಮ್ಸ್’ ಸಿನಿಮಾದ ಟೀಸರ್‌ ಬಿಡುಗಡೆ ದಿನಾಂಕವನ್ನು ಟ್ವಿಟ್ಟರ್‌ನಲ್ಲಿ ಅನೌನ್ಸ್‌ ಮಾಡಿದ್ದಾರೆ.

ಕಾರಿನ ಮೇಲೆ “ಜೆ’ ಎಂದು ಸಿಂಬಲ್‌ ಇರುವ ಫೋಟೋವನ್ನು ಶೇರ್‌ ಮಾಡಿಕೊಂಡಿರುವ ಅಶ್ವಿ‌ನಿ ಪುನೀತ್‌ ರಾಜಕುಮಾರ್‌, “ಫೆಬ್ರವರಿ 11 ರಂದು ಬೆಳಿಗ್ಗೆ 11.11 ಕ್ಕೆ “ಜೇಮ್ಸ್ ಅಧಿಕೃತ ಟೀಸರ್‌ ಬಿಡುಗಡೆಯಾಗಲಿದೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ “ಜೇಮ್ಸ್’ ಸಿನಿಮಾದಲ್ಲಿ ಪುನೀತ್‌ ರಾಜಕುಮಾರ್‌ ಗನ್‌ ಹಿಡಿದು ಖಡಕ್‌ ಆರ್ಮಿ ಆಫೀಸರ್‌ ಆಗಿ ಮಿಂಚಿದ್ದ ಹೊಸ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಪೋಸ್ಟರ್‌ನಲ್ಲಿದ್ದ “ಸಲಾಂ ಸೋಲ್ಜರ್‌ ದೇಶಕ್ಕೆ ನೀನೇ ಪವರ್‌’ ಎಂಬ ಸಾಲುಗಳು ಅಭಿಮಾನಿಗಳ ಗಮನ ಸೆಳೆದಿದ್ದು, ಚಿತ್ರದ ಮೇಲೆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಇನ್ನು ಪುನೀತ್‌ ರಾಜಕುಮಾರ್‌ ಹುಟ್ಟುಹಬ್ಬದ ದಿನದಂದೇ “ಜೇಮ್ಸ್‌’ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದ್ದು, ಈಗ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ:ಲತಾ ಮಂಗೇಶ್ಕರ್: ಮಂದ ಸ್ವರ ಎಂದು ತಿರಸ್ಕರಿಸಿದವರೇ ಒಂದು ಹಾಡಿಗಾಗಿ ದುಂಬಾಲು ಬಿದ್ದಿದ್ದರು

ಅದರಂತೆ ಫೆ. 11ಕ್ಕೆ “ಜೇಮ್ಸ್‌’ ಟೀಸರ್‌ ಬಿಡುಗಡೆಯಾಗಲಿದ್ದು, ಅದಾದ ಬಳಿಕ ಚಿತ್ರದ ಲಿರಿಕಲ್‌ ವಿಡಿಯೋ ಸಾಂಗ್‌, ಆನಂತರ ಟ್ರೇಲರ್‌ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ಸದ್ಯ “ಜೇಮ್ಸ್‌’ ಟೀಸರ್‌ ಬಿಡುಗಡೆ ದಿನಾಂಕ ಅನೌನ್ಸ್‌ ಆಗುತ್ತಿದ್ದಂತೆ, ಅಭಿಮಾನಿಗಳ ಚಿತ್ತ ಫೆ. 11ರತ್ತ ನೆಟ್ಟಿದೆ.

ಜೇಮ್ಸ್‌’ ಚಿತ್ರಕ್ಕೆ ಚೇತನ್‌ ಕುಮಾರ್‌ ಆ್ಯಕ್ಷನ್‌-ಕಟ್‌ ಹೇಳಿದ್ದು, ಪ್ರಿಯಾ ಆನಂದ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ತೆಲುಗು ನಟ ಶ್ರೀಕಾಂತ್‌, ಆದಿತ್ಯ ಮೆನನ್‌, ಅನು ಪ್ರಭಾಕರ್‌, ಮುಖೇಶ್‌ ರಿಷಿ ಮೊದಲಾದ ಕಲಾವಿದರ ಬೃಹತ್‌ ತಾರಾಗಣ ಚಿತ್ರದಲ್ಲಿದ್ದಾರೆ.

ಟಾಪ್ ನ್ಯೂಸ್

19-death

ಬೈಕ್‌ ಅಪಘಾತ: ಗಂಭೀರ ಗಾಯಗೊಂಡಿದ್ದ ರೈತ ಸಾವು

18AK47

ಐಟಿಬಿಪಿ ಕ್ಯಾಂಪ್‌ನಲ್ಲಿ 2ಎಕೆ-47 ರೈಫಲ್‌ ಕಳವು: ಯೋಧರು ಮಲಗಿದ್ದಾಗ ನಡೆದ ಘಟನೆ

16laalu-prasad

ಬಿಹಾರ ಆಡಳಿತದಲ್ಲಿ ಲಾಲು ಹಸ್ತಕ್ಷೇಪ ಶುರು

1-gdgdfg

ಮೊಟ್ಟೆ ಎಸೆತ ಖಂಡಿಸಿ ಬಾದಾಮಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ

15

ಗಾಂಧೀವಾದಿ ಮೀರಾತಾಯಿ ಕೊಪ್ಪೀಕರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

cm-bommai

ಮೊಟ್ಟೆ ಪ್ರಕರಣ: ಸಿದ್ದರಾಮಯ್ಯ ಜತೆ ಮಾತಾಡಿದ ಸಿಎಂ ಬೊಮ್ಮಾಯಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾರಿ ಬಿದ್ದರೂ ಯಾಕೀ ನಗು…;ಕಂಬ್ಳಿ ಹುಳದಿಂದ ಹಾಡು ಬಂತು!

ಜಾರಿ ಬಿದ್ದರೂ ಯಾಕೀ ನಗು…;ಕಂಬ್ಳಿ ಹುಳದಿಂದ ಹಾಡು ಬಂತು!

ಕಡಲೂರ ‌ಕಣ್ಮಣಿಗಳು! ಟೀಸರ್‌ ಮತ್ತು ಹಾಡು ಬಿಡುಗಡೆ

ಕಡಲೂರ ‌ಕಣ್ಮಣಿಗಳು! ಟೀಸರ್‌ ಮತ್ತು ಹಾಡು ಬಿಡುಗಡೆ

ಆ.26ಕ್ಕೆ ಸಿನಿಮಾ ರಿಲೀಸ್‌; ಮಾಯಾ ನಗರಿಯಲ್ಲಿ ಡೊಳ್ಳು ಸದ್ದು

ಆ.26ಕ್ಕೆ ಸಿನಿಮಾ ರಿಲೀಸ್‌; ಮಾಯಾ ನಗರಿಯಲ್ಲಿ ಡೊಳ್ಳು ಸದ್ದು

ಜಗ್ಗೇಶ್‌ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್‌ ಖುಷಿ

ಜಗ್ಗೇಶ್‌ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್‌ ಖುಷಿ

ರಗಡ್‌ ಲುಕ್‌ ನಲ್ಲಿ ಕನ್ನಡತಿ ಹೀರೋ ; ಕಿರಣ್‌ ರಾಜ್‌ ಸ್ಕ್ರೀನ್‌ ಶೇರ್‌

ರಗಡ್‌ ಲುಕ್‌ ನಲ್ಲಿ ಕನ್ನಡತಿ ಹೀರೋ ; ಕಿರಣ್‌ ರಾಜ್‌ ಸ್ಕ್ರೀನ್‌ ಶೇರ್‌

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

19-death

ಬೈಕ್‌ ಅಪಘಾತ: ಗಂಭೀರ ಗಾಯಗೊಂಡಿದ್ದ ರೈತ ಸಾವು

18AK47

ಐಟಿಬಿಪಿ ಕ್ಯಾಂಪ್‌ನಲ್ಲಿ 2ಎಕೆ-47 ರೈಫಲ್‌ ಕಳವು: ಯೋಧರು ಮಲಗಿದ್ದಾಗ ನಡೆದ ಘಟನೆ

16laalu-prasad

ಬಿಹಾರ ಆಡಳಿತದಲ್ಲಿ ಲಾಲು ಹಸ್ತಕ್ಷೇಪ ಶುರು

1-gdgdfg

ಮೊಟ್ಟೆ ಎಸೆತ ಖಂಡಿಸಿ ಬಾದಾಮಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ

15

ಗಾಂಧೀವಾದಿ ಮೀರಾತಾಯಿ ಕೊಪ್ಪೀಕರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.