ಶಸ್ತ್ರಧಾರಿ ಸೈನಿಕರ ಜೊತೆ ‘ಅಪ್ಪು’ |’ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಎಂದ ‘ಜೇಮ್ಸ್’
Team Udayavani, Aug 15, 2021, 5:50 PM IST
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಸ್ವಾತಂತ್ರ್ಯೋತ್ಸವಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಅಪ್ಪು ನಟಿಸುತ್ತಿರುವ ಜೇಮ್ಸ್ ಚಿತ್ರದ ನ್ಯೂ ಲುಕ್ ಇಂದು ಬಿಡುಗಡೆಯಾಗಿದೆ.
ನಿರ್ದೇಶಕ ಚೇತನ್ ಕುಮಾರ್ ಅವರು ಪುನೀತ್ ರಾಜ್ಕುಮಾರ್ ‘ಜೇಮ್ಸ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಶೂಟಿಂಗ್ ಕೂಡ ಮುಕ್ತಾಯವಾಗಿದೆ. ಇದೀಗ ಚಿತ್ರತಂಡದಿಂದ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ಸಿಕ್ಕಿದ್ದು, ಸಿನಿಮಾ ಫೋಸ್ಟರ್ ರಿಲೀಸ್ ಆಗಿದೆ.
ಸದ್ಯ ಬಿಡುಗಡೆಯಾಗಿರುವ ಲುಕ್ ನಲ್ಲಿ ಶಸ್ತ್ರಧಾರಿ ಸೈನಿಕರ ಮಧ್ಯದಲ್ಲಿ ಪುನೀತ್ ರಾಜ್ಕುಮಾರ್ ನಿಂತಿದ್ದಾರೆ. ಸೈನಿಕರ ಜತೆ ಪುನೀತ್ ಕೂಡ ಕಪ್ಪನೆಯ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರೆ. ‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಎನ್ನುವ ಕ್ಯಾಪ್ಶನ್ಅನ್ನು ಪೋಸ್ಟರ್ಗೆ ನೀಡಲಾಗಿದೆ.
ಸಲಾಂ ಸೋಲ್ಜರ್
ದೇಶಕ್ಕೆ ನೀನೆ ಪವರ್
Here is the first official poster of #James
Stay Tuned!@PuneethRajkumar @PriyaAnand @BahaddurChethan @charanrajmr2701 #KishorePathikonda #James #BoloBoloJames #JamesTakesCharge pic.twitter.com/OPElHErnrb— PRK Audio Official (@PRKAudio) August 15, 2021
ಚೇತನ ಕುಮಾರ್ ಅವರು ‘ಬಹದ್ದೂರ್’, ‘ಭರ್ಜರಿ’, ‘ಭರಾಟೆ’ ಸಿನಿಮಾ ನಂತರ ‘ಜೇಮ್ಸ್’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷ ಜೇಮ್ಸ್ ಸಿನಿಮಾ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ.
ಇನ್ನು ಪುನೀತ್ ರಾಜಕುಮಾರ್ ಅವರು ಯುವರತ್ನ ನಂತರ ಜೇಮ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ದ್ವಿತ್ವ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಚಿತ್ರವನ್ನು ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರು ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಈ ಚಿತ್ರದ ಫೋಸ್ಟರ್ ಸಖತ್ ಹಿಟ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.