
‘ಇಲ್ಲಿ ನನ್ನನ್ನು ತುಳಿಯುತ್ತಿದ್ದಾರೆ…’: ಸಿನಿಮಾದಿಂದ ದೂರವಾಗಲು JK ನಿರ್ಧಾರ
Team Udayavani, Jun 3, 2023, 11:01 AM IST

ಸಿನಿಮಾಕ್ಕಿಂತ ಕಿರುತೆರೆಯಲ್ಲಿ ಹೆಚ್ಚು ಖ್ಯಾತಿ ಗಳಿಸಿರುವ ಜೆಕೆ ನಾಯಕರಾಗಿ ನಟಿಸಿರುವ “ಐರಾವನ್’ ಚಿತ್ರ ಜೂ.16ರಂದು ತೆರೆಕಾಣುತ್ತಿದೆ. ಈ ಸಂದರ್ಭದಲ್ಲೇ ಜೆಕೆ ಚಿತ್ರರಂಗದಿಂದ ದೂರವಾಗುವ ಮಾತುಗಳನ್ನಾಡಿದ್ದಾರೆ.
ಅದಕ್ಕೆ ಕಾರಣ ಅವರ “ಕೆಲವು ಆತ್ಮೀಯರು’ ಅವರನ್ನು ತುಳಿಯುತ್ತಿರುವುದು. ಇದು ಜೆಕೆಗೆ ಬೇಸರ ತಂದಿದೆ. ಅದೇ ಕಾರಣದಿಂದ ಇಷ್ಟು ವರ್ಷದ ಜಿದ್ದಾಜಿದ್ದಿ ಸಾಕು ಎಂದು ನಿರ್ಧರಿಸಿರುವ ಜೆಕೆ ಸದ್ಯ ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಿ, ಮುಂದೆ ಬೇರೆ ಕ್ಷೇತ್ರದತ್ತ ವಾಲುವ ಯೋಚನೆ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಜೆಕೆ, “ಐರಾವನ್ ಸಿನಿಮಾ ತಂಡ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿದರೂ ನನ್ನ “ಕೆಲವು ಆತ್ಮೀಯರು’ ಅದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಇದೊಂದೇ ಅಲ್ಲ, ಈ ತರಹ ತುಂಬಾ ಸಿನಿಮಾಗಳನ್ನು, ಅವಕಾಶಗಳನ್ನು ತಪ್ಪಿಸಿ ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ನಾನು ಕನ್ನಡದ ಮೇಲಿನ ಪ್ರೀತಿಗಾಗಿ ಹಿಂದಿಯಲ್ಲಿನ ಹಲವು ಅವಕಾಶಗಳನ್ನು ಬಿಟ್ಟು ಬಂದಿದ್ದೇನೆ. ಆದರೆ, ಇಲ್ಲಿ ನನಗೆ ಹೀಗಾಗುತ್ತಿದೆ. ನನ್ನನ್ನು ತುಂಬಾ ಜನ ಕೆಳಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರ ಜೊತೆ ರಿವೆಂಜ್ ಸಾಧಿಸುವುದು ನನಗೆ ಗೊತ್ತಿಲ್ಲ, ನನ್ನ ಮನೆಯಲ್ಲಿ ಅದನ್ನು ಹೇಳಿಕೊಟ್ಟಿಲ್ಲ. ನಾನು ಕಾರ್ಪೋರೇಟ್ ಲೈಫ್ನಿಂದ ಬಂದವನು. ನನಗೆ ಖುಷಿಯಾಗಿರ ಬೇಕು, ಸುಮ್ಮನೆ ಇಲ್ಲಿ ಒದ್ದಾಡುವುದರಲ್ಲಿ ಅರ್ಥವಿಲ್ಲ. ಅಂತಿಮವಾಗಿ ಬೇಕಾಗಿರುವುದು ಹಣ. ಮೊದಲೆಲ್ಲಾ ಹೆಸರು ಬೇಕು ಎಂಬ ಆಸೆ ಇತ್ತು. ಈಗ ಖುಷಿಯಿಂದ ಲೈಫ್ ನಡೆಸಲು ಹಣವೊಂದಿದ್ದರೆ ಸಾಕು. ಅದನ್ನು ಗಳಿಸಲು ನನಗೆ ಬೇರೆ ಕ್ಷೇತ್ರಗಳಿವೆ’ ಎನ್ನುವ ಜೆಕೆ ಮುಂದಿನ ದಿನಗಳಲ್ಲಿ ಒಳ್ಳೆಯ ನಿರ್ಮಾಪಕರ ಬಂದರೆ ಸಿನಿಮಾ ಮಾಡುವ ಬಗ್ಗೆ ಆಲೋಚಿಸುತ್ತೇನೆ ಎನ್ನುತ್ತಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಡಬ್ಬಿಂಗ್ ಮುಗಿಸಿದ ‘ಜಲಂಧರ’

Quick 5 with Nidhi Subbaiah; ಸಿನಿಮಾ ಬಿಟ್ಟು ಎಲ್ಲೂ ಹೊರಗೆ ಹೋಗಿರಲಿಲ್ಲ..

Tollywood: ದೇವರಕೊಂಡ – ಸಮಂತಾ ಅಭಿನಯದ ‘ಖುಷಿʼ ಸಿನಿಮಾದ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್

Kannada Cinema; ‘ಯಾವೋ ಇವೆಲ್ಲಾ’- ಇದು ಹೊಸಬರ ಕನಸು

Aditi Prabhudeva; ಬಾಲ್ಯದ ಕನಸು ಸಿನಿಮಾದಲ್ಲಿ ನನಸು:’ಅಲೆಕ್ಸ’ದಲ್ಲಿ ಅದಿತಿ ಖಡಕ್‌ಪೊಲೀಸ್