ಬೆಂಗಳೂರಿನಲ್ಲಿ ‘ಜಾಲಿವುಡ್ ಸ್ಟುಡಿಯೋ’
Team Udayavani, Aug 26, 2023, 3:10 PM IST
ಬೆಂಗಳೂರಿನಲ್ಲಿ ಜಾಲಿವುಡ್ ಆರಂಭವಾಗಿದೆ. ಇತ್ತೀಚೆಗೆ ಈ ಸ್ಟುಡಿಯೋ ಉದ್ಘಾಟನೆಯನ್ನು ನಟ ಶಿವರಾಜ್ಕುಮಾರ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಿದರು.
ವೇಲ್ಸ್ ಗ್ರೂಪ್ನ ಸಂಸ್ಥಾಪಕರಾದ ಐಶರಿ ಕೆ ಗಣೇಶ್ ಅವರ ಸಾರಥ್ಯದಲ್ಲಿ “ಜಾಲಿವುಡ್’ ಆರಂಭವಾಗಿದ್ದು, ಈ ಹಿಂದಿನ ಇನ್ನೋವೇಟಿವ್ ಫಿಲಂ ಸಿಟಿಗೆ ಹೊಸ ರೂಪ ಸಿಕ್ಕಿದೆ. ಆ.27ರಿಂದ ಈ ಜಾಲಿವುಡ್ ಅಧಿಕೃತವಾಗಿ ಪ್ರಾರಂಭವಾಗಲಿದೆ.
ಉದ್ಘಾಟನೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, “ಜಾಲಿವುಡ್ ಚೆನ್ನಾಗಿದೆ. ಒಳ್ಳೆಯ ದಾಗಲಿ. ಇಡೀ ಬೆಂಗ ಳೂರಿನವರು ಹಾಗೂ ಬೇರೆ ಊರಿನವರು ಬಂದು ಇದನ್ನು ವೀಕ್ಷಿಸಲಿ’ ಎಂದರು.
ನಟ ಶಿವರಾಜ್ಕುಮಾರ್ ಮಾತನಾಡಿ, “ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ ಒಂದು ಕಡೆ ಸೇರುವ ಸ್ಥಳ ಜಾಲಿವುಡ್ ಆಗಲಿ. ಈ ಹಿಂದೆ ಇಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಇಲ್ಲಿಗೆ ಬಂದಾಗ ಹಳೆಯ ದಿನಗಳು ನೆನಪಾದವು’ ಎನ್ನುತ್ತಾ ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ