
ಟೀಸರ್‌ನಲ್ಲಿ ಬಂದಳು ಜ್ಯೂಲಿಯೆಟ್
Team Udayavani, Jan 25, 2023, 10:39 AM IST

ಸಾಮಾನ್ಯವಾಗಿ ಯಾವುದೇ ಒಂದು ಸಕ್ಸಸ್ ಆದ ನಂತರ, ಆ ಸಿನಿಮಾದ ಮತ್ತೂಂದು ಭಾಗ (ಪಾ ರ್ಟ್-2) ಬಿಡುಗಡೆಯಾಗುವುದನ್ನು ನೀವು ಕೇಳಿರುತ್ತೀರಿ. ಆದರೆ, ಇಲ್ಲೊಂದು ಚಿತ್ರ ತಂಡ ಮೊದಲ ಭಾಗ ಬಿಡುಗಡೆಗೂ ಮೊದಲೇ ಎರಡನೇ ಭಾಗ (ಪಾರ್ಟ್-2)ವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ.
ಅಂದಹಾಗೆ, ಮೊದಲ ಭಾಗಕ್ಕೂ ಮೊದಲೇ ಎರಡನೇ ಭಾಗವನ್ನು ಬಿಡುಗಡೆ ಮಾಡುತ್ತಿರುವ ಆ ಸಿನಿಮಾದ ಹೆಸರು “ಜ್ಯೂಲಿಯೆಟ್-2′ ಹೌದು, ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ “ಜ್ಯೂಲಿಯೆಟ್-2′ ಸಿನಿಮಾ “ಜ್ಯೂಲಿಯೆಟ್-1′ ಸಿನಿಮಾಕ್ಕೂ ಮೊದಲೇ ತೆರೆ ಕಾಣುತ್ತಿದೆ.
ಈಗಾಗಲೇ ಸದ್ದಿಲ್ಲದೆ “ಜ್ಯೂಲಿಯೆಟ್-2′ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಸಿನಿಮಾವನ್ನು ತೆರೆಗೆ ತರಲು ತಯಾರಾಗಿದೆ. ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ಜ್ಯೂಲಿಯೆಟ್-2′ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಹೊಸಬರ ತಂಡಕ್ಕೆ ಶುಭ ಹಾರೈಸಿದರು.
ಇನ್ನು ಸಿನಿಮಾದ ಟೈಟಲ್ಲೇ ಹೇಳುವಂತೆ, “ಜ್ಯೂಲಿಯೆಟ್-2′ ಅಪ್ಪಟ ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ. ಹಿಂದೆ “ಪ್ರೇಮಂ ಪೂಜ್ಯಂ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಬೃಂದಾ ಆಚಾರ್ಯ “ಜ್ಯೂಲಿಯೆಟ್-2′ ಸಿನಿಮಾದಲ್ಲಿ ನಾಯಕಿಯಾಗಿ “ಜ್ಯೂಲಿಯೆಟ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅನೂಪ್ ಸಾಗರ್, ರವಿ ಕಲಾಬ್ರಹ್ಮ, ಶ್ರೀಕಾಂತ್, ರಾಯ್ ಬಡಿಗೇರ್, ಖುಷ್ ಆಚಾರ್ಯ, ರಾಧೇಶ್ ಶಣೈ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಪಿ.ಎಲ್ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ಲಿಖೀತ್ ಆರ್. ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರಕ್ಕೆ ವಿರಾಟ್ ಬಿ. ಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ಜ್ಯೂಲಿಯೆಟ್-2′ ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಸಂಬಂಧ ಕಥಾಹಂದರವಿರುವ ಸಿನಿಮಾ. ನಗರವಾಸಿಯಾದ ಮಗಳು, ತನ್ನ ತಂದೆಯ ಕೊನೆಯ ಆಸೆ ಈಡೇರಿಸಲು ಹುಟ್ಟೂರಿಗೆ ಹೋಗಿ ನೆಲೆಸುತ್ತಾಳೆ. ಅಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗುತ್ತದೆ? ಹೆಣ್ಣು ಶಾಂತ ರೂಪಿಯಾದರೆ ಹೇಗಿರುತ್ತಾಳೆ ಹಾಗೆಯೇ ಉಗ್ರವಾದಾಗ ಹೇಗಿರುತ್ತಾಳೆ ಎಂಬುದನ್ನು ತೆರೆಮೇಲೆ ತೋರಿಸಲಾಗಿದೆ’ ಎನ್ನುವುದು ಚಿತ್ರತಂಡದ ಮಾತು.
ಕನ್ನಡದ ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣ ವಾಗಿರುವ “ಜ್ಯೂಲಿಯೆಟ್-2′ ಸಿನಿಮಾವನ್ನು ಇದೇ ಫೆಬ್ರವರಿ ಅಂತ್ಯಕ್ಕೆ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
