
ಬಾಕ್ಸ್ ಆಫೀಸ್ ʼಕಬ್ಜʼ ಮಾಡಿದ್ರಾ ಉಪ್ಪಿ? : ಮೊದಲ ದಿನ ಸಿನಿಮಾ ಗಳಿಸಿದ್ದೆಷ್ಟು?
Team Udayavani, Mar 18, 2023, 10:56 AM IST

ಬೆಂಗಳೂರು: ಅಂಡರ್ ವರ್ಲ್ಡ್ ಗ್ಯಾಂಗ್ ಸ್ಟರ್ ಕಥಾಹಂದರವನ್ನು ಹೊಂದಿರುವ ʼಕಬ್ಜʼ ಸಿನಿಮಾ ಶುಕ್ರವಾರ ( ಮಾ. 17 ರಂದು) ಅದ್ಧೂರಿ ರಿಲೀಸ್ ಆಗಿದೆ. ನಿರೀಕ್ಷೆಯಂತೆ ಮೊದಲ ದಿನ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ.
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೂವರು ದಿಗ್ಗಜ ಕಲಾವಿದರನ್ನು ಒಂದೇ ಸ್ಕ್ರೀನ್ ನಲ್ಲಿ ತೋರಿಸಲು ಹೊರಟ ನಿರ್ದೇಶಕ ಆರ್. ಚಂದ್ರು ಅವರ ʼಕಬ್ಜʼ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ ಗಳಿಸಿದ್ದೆಷ್ಟು? ಎನ್ನುವುದರ ಬಗ್ಗೆ ಅಪ್ಡೇಟ್ ಹೊರ ಬಿದ್ದಿದೆ.
ಉಪ್ಪಿ ಫೈಟ್ ,ಅದ್ಧೂರಿ ಮೇಕಿಂಗ್, ಕಿಚ್ಚನ ಸ್ಟೋರಿ ಟೇಲಿಂಗ್, ಶಿವಣ್ಣನ ಎಂಟ್ರಿ, ಶ್ರೇಯಾ ಶರಣ್ ಅಭಿನಯದಿಂದ ಸಿನಿಮಾ ಗಮನ ಸೆಳೆಯುತ್ತದೆ.
ಇದನ್ನೂ ಓದಿ: ಕಬ್ಜ ಚಿತ್ರ ವಿಮರ್ಶೆ; ಮಾಸ್ ಮನತಣಿಸುವ ಅರ್ಕೇಶ್ವರ ವೈಭವ
ಚಂದ್ರು ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಬಾರಿ ಚಂದ್ರು ದೊಡ್ಡದಾಗಿ ಕನಸು ಕಂಡಿರೋದು ತೆರೆಮೇಲೆ ಎದ್ದು ಕಾಣುತ್ತದೆ. ಒಂದೆರಡು ನಿಮಿಷ ಬಂದು ಹೋಗುವ ಶಾಟ್ಸ್‌ಗಳನ್ನೂ ಅದ್ಧೂರಿಯಾಗಿ ಸಿಂಗರಿಸಿದ್ದಾರೆ. ಆ ಮಟ್ಟಿಗೆ “ಕಬ್ಜ’ ಒಂದು ಮೇಕಿಂಗ್ ಸಿನಿಮಾ. ಮಾಸ್ ಸಿನಿಮಾಗಳನ್ನು ಕಟ್ಟಿಕೊಡುವಾಗ ಅದಕ್ಕೊಂದು ಬ್ಯಾಕ್‌ಗ್ರೌಂಡ್ ಬೇಕಾಗುತ್ತದೆ. ಅದನ್ನು ಚಂದ್ರು ಇಲ್ಲಿ ತುಂಬಾ ಸೊಗಸಾಗಿ ಹಾಗೂ ಮಾಸ್ ಪ್ರಿಯರು ಮೆಚ್ಚುವಂತೆ ಕಟ್ಟಿಕೊಟ್ಟಿದ್ದಾರೆ.
ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿ, ಹೈಪ್ ಕ್ರಿಯೇಟ್ ಮಾಡಿದ ಸಿನಿಮಾ ಮೊದಲ ದಿನ 11.10 ಕೋಟಿ ರೂ. ಗಳಿಸಿದೆ ಎಂದು “ಸ್ಯಾಕ್ನಿಲ್ಕ್” (Sacnilk) ವರದಿ ಮಾಡಿದೆ.
ಮೊದಲ ದಿನ ಚಿತ್ರ 26 ಕೋಟಿ ರೂ. ಕಲೆಕ್ಷನ್ ಮಾಡಿದೆ ಪೋಸ್ಟರ್ ವೊಂದು ವೈರಲ್ ಆಗಿದೆ. ಆದರೆ ಇದು ಅಧಿಕೃತವಲ್ಲ ಎಂದು ಕೆಲ ವರದಿಗಳು ತಿಳಿಸಿದೆ.
ಇತ್ತೀಚೆಗೆ ತೆರೆಕಂಡ ಸಿನಿಮಾಗಳಿಗೆ ಹೋಲಿಸಿದರೆ ʼಕಬ್ಜʼಕ್ಕೆ ಪಾಸಿಟಿವ್ ಓಪನಿಂಗ್ ಸಿಕ್ಕಿದೆ ಎನ್ನಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

10 ಕೋಟಿ ಮೌಲ್ಯದ ಕಾರು ಖರೀದಿಸಿದ ಶಾರುಖ್: ಡ್ರೈವ್ ಮಾಡಿಕೊಂಡು ಹೋಗುವ ವಿಡಿಯೋ ವೈರಲ್

ಪ್ರಿಯಾಂಕಾ ಬಾಲಿವುಡ್ ತೊರೆಯಲು ಕರಣ್ ಜೋಹರ್ ಕಾರಣ! ಕಂಗನಾ V/S ಪ್ರಿಯಾಂಕಾ ಚೋಪ್ರಾ

ಆ ದಿನಗಳು.. ಹೃದಯಾಘಾತವಾದ ಕರಾಳ ದಿನಗಳ ಬಗ್ಗೆ ಮೌನ ಮುರಿದ ನಟ ಸುನಿಲ್ ಗ್ರೋವರ್
MUST WATCH
ಹೊಸ ಸೇರ್ಪಡೆ

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ