
ತಮಿಳಿನತ್ತ ಮಧು ಗುರುಸ್ವಾಮಿ; ಮಫ್ತಿ ರೀಮೇಕ್ ನಲ್ಲಿ ನಟನೆ
Team Udayavani, Mar 30, 2023, 5:09 PM IST

ಖಳನಟ ಮಧು ಗುರುಸ್ವಾಮಿ ಕಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಹಿಟ್ ಸಿನಿಮಾ ಮಫ್ತಿ ಈಗ “ಪತ್ತುತಲಾ’ ಎಂಬ ಟೈಟಲ್‌ನಡಿ ತಮಿಳಿಗೆ ರೀಮೇಕ್ ಆಗಿದ್ದು, ಇಂದು ಚಿತ್ರ ತೆರೆಗೆ ಬಂದಿದೆ. “ಮಫ್ತಿ’ಯಲ್ಲಿ ಸಿಂಗ ಪಾತ್ರ ನಿರ್ವಹಿಸಿದ್ದ ಮಧು ಗುರುಸ್ವಾಮಿ ಅದೇ ಪಾತ್ರವನ್ನು ತಮಿಳಿನಲ್ಲೂ ನಿರ್ವಹಿಸಿದ್ದಾರೆ.
ಸಿಲಂಬರಸನ್ ನಾಯಕ ನಾಗಿ ಅಭಿನಯಿಸಿರುವ ಪತ್ತು ತಲಾ ಸಿನಿಮಾಗೆ ನಿರ್ದೇಶಕ ಒಬಿಲ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದು, ಸ್ಟುಡಿಯೋ ಗ್ರೀನ್ ಸಂಸ್ಥೆ ನಿರ್ಮಾಪಕ ಜ್ಞಾನವೆಲ ರಾಜ ಬಂಡವಾಳ ಹೂಡಿದ್ದಾರೆ. ಸಿಂಗ ಪಾತ್ರವನ್ನು ಜ್ಞಾನವೆಲ ಮೆಚ್ಚಿ ತಮಗೆ ಅವಕಾಶ ನೀಡಿರುವುದಕ್ಕೆ ಮಫ್ತಿ ಸಾರಥಿ ನರ್ತನ್ ಬಹುಮುಖ್ಯ ಕಾರಣ ಎನ್ನುತ್ತಾರೆ ಮಧು ಗುರುಸ್ವಾಮಿ.
ಅಭಿನಯ ತರಂಗ ಶಾಲೆಯಲ್ಲಿ ಎರಡು ವರ್ಷಗಳ ಕಾಲ ನಟನೆ ತರಬೇತಿ ಪಡೆದು ಡೆಡ್ಲಿ-2 ಸಿನಿಮಾ ಮೂಲಕ ನಟನಾಗಿ ಹಾಗೂ ಸಹಾಯಕ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗಿಳಿದ ಮಧು ಗುರು ಸ್ವಾಮಿ, ಚಿಂಗಾರಿ ಚಿತ್ರ ದಲ್ಲಿ ವಿನೀಶ್ ಮಲ್ಹೋತ್ರ ಪಾತ್ರದಲ್ಲಿ, ಯಶ್ ಅಭಿನಯದ ಜಾನು ಸಿನಿಮಾದಲ್ಲಿ ಸಂಗಮೇಶ್ ಎಂಬ ಪಾತ್ರದಲ್ಲಿ, ಶಿವಣ್ಣನ ಹೈವೋಲ್ಟೆಜ್ ಕಥೆ ಭಜರಂಗಿಯಲ್ಲಿ ಮಂತ್ರವಾದಿಯಾಗಿ, ಶರಣ್ ನಟನೆಯ ಜೈ ಮಾರುತಿ 800 ಚಿತ್ರದಲ್ಲಿ ಹಾಸ್ಯನಟನಾಗಿ ಹೀಗೆ ತರಹೇವಾರಿ ಪಾತ್ರದ ಮೂಲಕ ಕನ್ನಡದಲ್ಲಿ ಬಿಝಿಯಾಗಿದ್ದಾರೆ. ಇದಲ್ಲದೇ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ “ಸಲಾರ್ ನಲ್ಲೂ ಗುರುಸ್ವಾಮಿ ಪ್ರಮುಖ ಪಾತ್ರ ಮಾಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

Dandeli : ದ್ವಿ ಚಕ್ರ ವಾಹನ ಸ್ಕಿಡ್ ಆಗಿ ಓರ್ವ ಗಂಭೀರ

Adipurush: ʼಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್ ದೇವರಿಗೆ ಮೀಸಲು

Gruha Jyoti ಬಾಡಿಗೆದಾರರಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ: ಮಾಡಬೇಕಾದ ವಿಧಾನ ಇಲ್ಲಿದೆ

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು

Kalaburagi: ತಲ್ವಾರ್ ನಿಂದ ಕೊಚ್ಚಿ ಯುವಕನ ಕೊಲೆ