

Team Udayavani, Oct 12, 2024, 3:46 PM IST
“ಮರ್ಯಾದೆ ಪ್ರಶ್ನೆ’- ತುಂಬಾ ದಿನಗಳಿಂದ ಈ ಸಿನಿಮಾದ ಹೆಸರು ಕೇಳಿಬರುತ್ತಲೇ ಇದೆ. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ನವೆಂಬರ್ 22ಕ್ಕೆ ತೆರೆಕಾಣುತ್ತಿದೆ. ಸಕ್ಕತ್ ಸ್ಟುಡಿಯೋದ ಸಂಸ್ಥಾಪಕ ಆರ್. ಜೆ ಪ್ರದೀಪ್ ಈ ಸಿನಿಮಾವನ್ನು ನಿರ್ಮಿಸಿದ್ದು, ನಾಗರಾಜ್ ಸೋಮಯಾಜಿ ನಿರ್ದೇಶನ ಚಿತ್ರಕ್ಕಿದೆ.
ಸಿನಿಮಾದ ಬಿಡುಗಡೆ ಹಿನ್ನೆಲೆಯಲ್ಲಿ ಮಾಧ್ಯಮ ಮುಂದೆ ಬಂದಿದ್ದ ಚಿತ್ರತಂಡ ತಮ್ಮ ಕನಸಿನ ಬಗ್ಗೆ ಮಾತನಾಡಿತು. ನಿರ್ಮಾಪಕ ಆರ್.ಜೆ.ಪ್ರದೀಪ್ ಮಾತನಾಡಿ, “ಸಕ್ಕತ್ ಸ್ಟುಡಿಯೋ ನಮ್ಮ ಕನಸು. ಒಂದೊಳ್ಳೆ ಮಾಡಬೇಕು ಅನ್ನೋದು ಇತ್ತು. ನಾನು ನಾಗರಾಜ್ ಕಥೆ ಬಗ್ಗೆ ಚರ್ಚೆ ಮಾಡಿದ್ದೇವೆ. ಇಬ್ಬರು ಸೇರಿ ಸಿನಿಮಾಗಾಗಿ ಕೈ ಜೋಡಿಸಿದೆವು. ಹೀಗೆ ಶುರುವಾದ ಜರ್ನಿ ನಾವು ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಒಂದೊಳ್ಳೆ ಸಿನಿಮಾ ಮಾಡಿಕೊಂಡು ಜನರಿಗೆ ತಲುಪಿಸಲು ಡೇಟ್ ಫಿಕ್ಸ್ ಮಾಡಿಕೊಂಡು ನಿಮ್ಮ ಮುಂದೆ ಬಂದಿದ್ದೇವೆ’ ಎಂದರು.
“ನಾನು ಪ್ರದೀಪ್ ಕ್ಲೋಸ್ ಫ್ರೆಂಡ್ಸ್. ಅದ್ಭುತ ತಾರಾಬಳಗ, ಪ್ರೇಕ್ಷಕರಿಗೆ ಇಷ್ಟವಾಗುವ ನೈಜತೆ ಇರುವ ಸಿನಿಮಾ ಮಾಡಿದ್ದೇವೆ. ತಾರಾಬಳಗದ ಜೊತೆಗೆ ನಮ್ಮ ಟೆಕ್ನಿಕಲ್ ಟೀಂ ಕೂಡ ಸ್ಟ್ರಾಂಗ್ ಆಗಿದೆ’ ಎನ್ನುವುದು ನಿರ್ದೇಶಕ ನಾಗರಾಜ್ ಸೋಮಯಾಜಿ ಮಾತು.
ಚಿತ್ರದ ಪೋಸ್ಟರ್ ಇದೊಂದು ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ಅನ್ನೋದನ್ನು ಹೇಳುತ್ತಿದೆ. ರಾಜ್ಯ ಮಾತ್ರವಲ್ಲ ಹೈದರಾಬಾದ್, ಚೆನ್ನೈ.. ಹೀಗೆ ಬೇರೆ ರಾಜ್ಯಗಳ ಜೊತೆಗೆ ವಿದೇಶದಲ್ಲಿಯೂ ಮರ್ಯಾದೆ ಪ್ರಶ್ನೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
“ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರು, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್ ಮುಖ್ಯ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಪ್ರದೀಪ್ ಅವರೇ ಕಥೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ. ಮರ್ಯಾದೆ ಪ್ರಶ್ನೆ ಚಿತ್ರವನ್ನು ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ.
Ad
You seem to have an Ad Blocker on.
To continue reading, please turn it off or whitelist Udayavani.