‘ಕಣ್ಣು ಹೊಡೆಯಾಕ ಹಾಡು’ 2 ಕೋಟಿ ವೀಕ್ಷಣೆ: ಶ್ರೇಯಾ ಘೋಷಾಲ್‌ ಫುಲ್ ಖುಷ್‌


Team Udayavani, Mar 22, 2021, 9:30 AM IST

‘ಕಣ್ಣು ಹೊಡೆಯಾಕ ಹಾಡು’ 2 ಕೋಟಿ ವೀಕ್ಷಣೆ: ಶ್ರೇಯಾ ಘೋಷಾಲ್‌ ಫುಲ್ ಖುಷ್‌

ಇತ್ತೀಚೆಗಷ್ಟೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರ ಬಾಕ್ಸಾಫೀಸ್‌ನಲ್ಲಿ 50 ಕೋಟಿ ಕ್ಲಬ್‌ ಸೇರಿ ಸುದ್ದಿಯಾಗಿತ್ತು. ಚಿತ್ರತಂಡ ಕೂಡ ಈ ಸಂಭ್ರಮವನ್ನು ಭರ್ಜರಿಯಾಗಿಯೇ ಆಚರಿಸಿತ್ತು. ಈಗ “ರಾಬರ್ಟ್‌’ ಶತಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ. ಇದರ ನಡುವೆಯೇ, “ರಾಬರ್ಟ್‌’ ಚಿತ್ರದ ಹಾಡು ಮತ್ತೂಂದು ದಾಖಲೆ ಬರೆದಿದೆ.

ಹೌದು, “ರಾಬರ್ಟ್‌’ ಚಿತ್ರದಲ್ಲಿ ಬರುವ “ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ… ನೀನಾ ಹೇಳಲೇ ಮಗನ, ನಿನ್ನ ನೋಡಿ ಸುಮ್ನೆ ಹೆಂಗಿರ್ಲಿ…’ ಎಂಬ ಉತ್ತರ ಕನ್ನಡ ಸೊಗಡಿನ ಹಾಡನ್ನು ನೀವೆಲ್ಲ ಕೇಳಿರುತ್ತೀರಿ. ಬಾಲಿವುಡ್‌ ಗಾಯಕಿ ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಮೂಡಿಬಂದ ಈ ಹಾಡಿಗೆ ಕೇಳುಗರು ಫಿದಾ ಆಗಿದ್ದರು. ಸೋಶಿಯಲ್‌ ಮೀಡಿಯಾದಲ್ಲೂ ಈ ಹಾಡಿಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದ್ದು, ಹಾಡು ದೊಡ್ಡಮಟ್ಟದಲ್ಲಿ ಹಿಟ್‌ ಆಗಿದೆ. ಇದೀಗ ಈ ಹಾಡಿನ ಲಿರಿಕಲ್‌ ವಿಡಿಯೋ ಯು-ಟ್ಯೂಬ್‌ನಲ್ಲಿ ಎರಡು ಕೋಟಿಗೂ ಅಧಿಕ ವೀವ್ಸ್‌ ಪಡೆದುಕೊಂಡಿದೆ.

ಇದನ್ನೂ ಓದಿ:‘ಮಹಾನಟಿ ನಾಪತ್ತೆ’  .. ನಟನ ತಮಾಷೆ ಟ್ವಿಟ್‍ಗೆ ಪೊಲೀಸರು ಏನಂದ್ರು ಗೊತ್ತಾ ?

ಕಳೆದ ಒಂದೂವರೆ ದಶಕದಿಂದ ಶ್ರೇಯಾ ಘೋಷಲ್‌ ಕನ್ನಡದಲ್ಲಿ ನೂರಾರು ಗೀತೆಗಳನ್ನು ಹಾಡಿದ್ದರೂ, ಉತ್ತರ ಕರ್ನಾಟಕ ಶೈಲಿಯ ಗೀತೆಗೆ ಧ್ವನಿಯಾಗಿದ್ದು ಇದೇ ಮೊದಲು ಎನ್ನಲಾಗಿದೆ. ಮೊದಲ ಬಾರಿಗೆ ಹಾಡಿರುವ ಈ ಶೈಲಿಯ ಹಾಡಿಗೆ ಇಷ್ಟೊಂದು ದೊಡ್ಡ ಪ್ರತಿಕ್ರಿಯೆ ಸಿಗುತ್ತಿರುವುದರಿಂದ, ಶ್ರೇಯಾ ಘೋಷಾಲ್‌ ಕೂಡ ಫುಲ್ ‌ ಖುಷಿ ಆಗಿದ್ದಾರೆ. ಯು-ಟ್ಯೂಬ್‌ನಲ್ಲಿ ಟ್ರೆಂಡಿಂಗ್‌ ಆಗಿರುವ ಈ ಹಾಡಿನ ಬಗ್ಗೆ, ಸೋಶಿಯಲ್‌ ಮೀಡಿಯಾದಲ್ಲಿ ಶ್ರೇಯಾ ಸಂತಸ ವ್ಯಕ್ತಪಡಿಸಿದ್ದಾರೆ

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಶ್ರೇಯಾ ಘೋಷಾಲ್‌, “ಕಣ್ಣು ಹೊಡಿಯಾಕ… ಹಾಡು 20 ಮಿಲಿಯನ್‌ ವೀವ್ಸ್‌ ಪಡೆದು ಕೊಂಡಿದೆ. ಮೊದಲ ಬಾರಿಗೆ ನಾನು ಉತ್ತರ ಕರ್ನಾಟಕದ ಶೈಲಿಯಲ್ಲಿ ಈ ಹಾಡು ಹೇಳಿದ್ದೇನೆ. ಎಂತಹ ಸುಂದರವಾದ ಭಾಷೆ ಇದು. ಈ ಹಾಡಿನಿಂದ ನಾನು ತುಂಬ ಖುಷಿಪಟ್ಟಿದ್ದೇನೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ, ಹಾಡು ಬರೆದ ಯೋಗರಾಜ್‌ ಭಟ್‌, ನಟ ದರ್ಶನ್‌, ನಟಿ ಆಶಾ ಭಟ್‌ ಅವರಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ.

ಇನ್ನು ಶ್ರೇಯಾ ಘೋಷಾಲ್‌ ಟ್ವೀಟ್‌ಗೆ ಪ್ರತಿಯಾಗಿ ರೀ-ಟ್ವೀಟ್‌ ಮಾಡಿರುವ ನಿರ್ದೇಶಕ ಯೋಗರಾಜ್‌ ಭಟ್‌ ಕೂಡ “ಅಸಾಧಾರಣ ಕಂಠದ ಒಡತಿ, ಸರಳ ಸುಂದರಿ, ನಾಡಿನ ಅತ್ಯಂತ ನೆಚ್ಚಿನ ಗಾಯಕಿ ಶ್ರೇಯಾ ಘೋಷಾಲ್‌ ಅವರಿಗೆ ಈ ಹಾಡು ಹಾಡಿದ್ದಕ್ಕೆ ನಮನ ಮತ್ತು ಧನ್ಯವಾದ’ ಎಂದಿದ್ದಾರೆ. ಇನ್ನು ಶ್ರೇಯಾ ಘೋಷಾಲ್ ಅವರಿಗೆ ಧನ್ಯವಾದ ಹೇಳಿರುವ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, “ನಿಮ್ಮ ಅದ್ಭುತ ಧ್ವನಿಯಿಂದ ಇಂತಹ ಮ್ಯಾಜಿಕ್‌ಗಳು ಸೃಷ್ಟಿಯಾಗುತ್ತವೆ’ ಎಂದಿದ್ದಾರೆ. “ರಾಬರ್ಟ್‌’ ನಾಯಕ ನಟಿ ಆಶಾ ಭಟ್‌ ಕೂಡ “ನಿಮ್ಮ ಧ್ವನಿ ಮತ್ತೂಮ್ಮೆ ಮ್ಯಾಜಿಕ್‌ ಮಾಡಿದೆ’ ಎಂದಿದ್ದಾರೆ. ಶ್ರೇಯಾ ಖುಷಿಯಿಂದ ಮಾಡಿದ ಟ್ವೀಟ್‌ಗೆ ಚಿತ್ರತಂಡ ಕೂಡ ಅಭಿನಂದನೆ ತಿಳಿಸಿದೆ.

ಒಟ್ಟಾರೆ ಶ್ರೇಯಾ ಉತ್ತರ ಕರ್ನಾಟಕ ಶೈಲಿಯ ಹಾಡು ಸೂಪರ್‌ ಹಿಟ್‌ ಆಗಿದ್ದು, ಮುಂದಿನ ದಿನಗಳಲ್ಲಿ ಶ್ರೇಯಾ ಧ್ವನಿಯಲ್ಲಿ ಇನ್ನಷ್ಟು ಇಂಥದ್ದೇ ಹಾಡುಗಳು ಮೂಡಿಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಕೇಳುಗರು.

ಟಾಪ್ ನ್ಯೂಸ್

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಟ ಭಯಂಕರನಿಗೆ ಸಿಎಂ ಬೊಮ್ಮಾಯಿ ಸಾಥ್‌

ನಟ ಭಯಂಕರನಿಗೆ ಸಿಎಂ ಬೊಮ್ಮಾಯಿ ಸಾಥ್‌

amazon prime video

ಪುನೀತ್‍ ರಾಜ್‍ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಅಮೆಜಾನ್‍ ಪ್ರೈಮ್‍

totapuri

ಜ.24ರಂದು ಜಗ್ಗೇಶ್ ನಟನೆಯ ತೋತಾಪುರಿ ಆಡಿಯೋ ಟೀಸರ್‌ ಬಿಡುಗಡೆ

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಪಪ್ಪೆಟ್ಸ್‌ ಮತ್ತು ದಿ ಕ್ರಿಟಿಕ್‌ ಕಿರುಚಿತ್ರ ಪ್ರಯೋಗ

ಪಪ್ಪೆಟ್ಸ್‌ ಮತ್ತು ದಿ ಕ್ರಿಟಿಕ್‌ ಕಿರುಚಿತ್ರ ಪ್ರಯೋಗ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ಎರತಯುಇಒಇಕಜಹಗ್

ಐತಿಹಾಸಿಕ ನೆಲೆಗಳ ಸಂರಕ್ಷ ಣೆ ಅಗತ್ಯ: ಎಡಿಸಿ ಬಾಲಕೃಷ್ಣ

eಟತಯುಯರಹ

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

ದ್ತಯುಇ9ಇಯತಗ್ಸದಷ

ಮೆಕ್ಕೆಜೋಳ ಇ-ಟೆಂಡರ್‌ಗೆ ಭರಪೂರ ಸ್ಪಂದನೆ

1-asasd

ಸುಲೇಮಾನ್ ಸ್ಟೋನ್ ಹೆಸರಿನಲ್ಲಿ ವಂಚನೆ :ಬಾಗಲಕೋಟೆಯಲ್ಲಿ 5 ಲಕ್ಷ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.