ಕಾಂತಾರದ ‘ವರಾಹ ರೂಪಂ’ವಿರುದ್ಧದ ನಿಷೇಧ ತೆಗೆದುಹಾಕಿದ ಕೋರ್ಟ್
ತೈಕ್ಕುಡಂ ಬ್ರಿಡ್ಜ್ ತಂಡಕ್ಕೆ ದೊಡ್ಡ ಹಿನ್ನೆಡೆ
Team Udayavani, Nov 25, 2022, 5:21 PM IST
ಕೋಝಿಕೋಡ್ : ತೈಕ್ಕುಡಂ ಬ್ರಿಡ್ಜ್ ತಂಡಕ್ಕೆ ದೊಡ್ಡ ಹಿನ್ನೆಡೆ ಎಂಬಂತೆ ಕೋಝಿಕೋಡ್ ಜಿಲ್ಲಾ ನ್ಯಾಯಾಲಯವು ಕಾಂತಾರದ ‘ವರಾಹ ರೂಪಂ’ ಹಾಡಿನ ವಿರುದ್ಧದ ನಿಷೇಧವನ್ನು ತೆಗೆದುಹಾಕಿದೆ.
ಕೇರಳ ಮೂಲದ ಮ್ಯೂಸಿಕ್ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಕಾಂತಾರ ತಂಡದ ವಿರುದ್ಧ ಟ್ಯೂನ್ ಕದ್ದ ಆರೋಪ ಮಾಡಿತ್ತು. ಕಾಂತಾರ ಚಿತ್ರದ ವರಾಹ ರೂಪಂ ಹಾಡು ತಮ್ಮ ನವರಸಂನ ನಕಲು ಎಂದು ಹೇಳಿ ಕೋರ್ಟ್ ಮೊರೆ ಹೋಗಿತ್ತು.ಈ ಹಿಂದೆ ಥೈಕುಡಂ ಪರವಾಗಿ ನ್ಯಾಯಾಲಯ ತೀರ್ಪು ನೀಡಿತ್ತು ಮತ್ತು ಹಾಡಿಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತು. ಆದರೆ, ಶುಕ್ರವಾರ ನ್ಯಾಯಾಲಯವು ನ್ಯಾಯವ್ಯಾಪ್ತಿಯ ಕೊರತೆಯನ್ನು ಉಲ್ಲೇಖಿಸಿ ಮನವಿಯನ್ನು ವಜಾಗೊಳಿಸಿದೆ.
ಈಗಾಗಲೇ ಟ್ಯೂನ್ ಬದಲಾವಣೆ
ಭಾರಿ ಯಶಸ್ಸಿನ ಪ್ರ ನಂತರ ಕಾಂತಾರ ನವೆಂಬರ್ 24 ರಂದು OTT ಗೆ ಪಾದಾರ್ಪಣೆ ಮಾಡಿದೆ. ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿದೆ. ಆದರೆ ಜನಪ್ರಿಯ ಗೀತೆ ‘ವರಾಹ ರೂಪಂ’ ದೊಡ್ಡ ಬದಲಾವಣೆಗೆ ಒಳಗಾಗಿದೆ.
ಕಾಂತಾರದ ಸಿನಿಮಾ ಅನುಭವವನ್ನು ಹೆಚ್ಚಿಸಲು ಅತ್ಯಗತ್ಯವಾಗಿದ್ದ ಹಾಡನ್ನು ಪ್ರೈಮ್‌ನಲ್ಲಿ ವಿಭಿನ್ನ ಟ್ಯೂನ್‌ನೊಂದಿಗೆ ಬದಲಾಯಿಸಲಾಗಿದೆ. ಹಿನ್ನೆಲೆ ಸಂಗೀತ ಮತ್ತು ಗಾಯನವನ್ನು ಬದಲಾಯಿಸಲಾಗಿದೆ ಆದರೆ ಸಾಹಿತ್ಯವು ಅದೇ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀವು ಈಗ ನೋಡಿರುವುದು ʼಕಾಂತಾರ-2” ಮುಂದೆ ಬರುವುದು ʼಕಾಂತಾರ -1” : ರಿಷಬ್ ಶೆಟ್ಟಿ
ಖಾಕಿ ತೊಟ್ಟು ಖಡಕ್ ಆಫೀಸರ್ ಆದ ಡಾಲಿ: ‘ಹೊಯ್ಸಳ’ ಚಿತ್ರದ ಟೀಸರ್ ಔಟ್
‘ಡಾಲರ್ಸ್ ಪೇಟೆ’ಯಲ್ಲಿ ಕೆಜಿಎಫ್ ಗರುಡ ರಾಮ್ ಸಹೋದರ ವೆಂಕಟ್ ರಾಜ್ ಡಾನ್
ಪ್ರಭುದೇವ ಅಭಿನಯದ “wolf” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವರಾಜಕುಮಾರ್
ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR