ಡಿ.21ಕ್ಕೆ “ಕೆಜಿಎಫ್ 2′ ಫ‌ಸ್ಟ್‌ಲುಕ್‌

ಅಧೀರನಾಗಿ ಸಂಜಯ್‌ ದತ್‌

Team Udayavani, Dec 15, 2019, 7:03 AM IST

ಕಳೆದ ವರ್ಷ ಡಿಸೆಂಬರ್‌ 21 ರಂದು ಯಶ್‌ ಅಭಿನಯದ “ಕೆಜಿಎಫ್’ ಬಿಡುಗಡೆಯಾಗಿತ್ತು. ಈ ಡಿಸೆಂಬರ್‌ 21 ರಂದು “ಕೆಜಿಎಫ್-2′ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಲಿದೆ. ಹೌದು, ಸ್ವತಃ ಫ‌ಸ್ಟ್‌ಲುಕ್‌ ಬಿಡುಗಡೆ ಕುರಿತು ಹೊಂಬಾಳೆ ಫಿಲಂಸ್‌ ಘೋಷಣೆ ಮಾಡಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ “ಕೆಜಿಎಫ್- 2′ ಫ‌ಸ್ಟ್‌ ಲುಕ್‌ ರಿಲೀಸ್‌ ಆಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಇನ್ನು, “ಕೆಜಿಎಫ್- 2′ ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ನಟಿಸುತ್ತಿರುವುದು ಗೊತ್ತೇ ಇದೆ. ಅಧೀರ ಪಾತ್ರದ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವುದೂ ಗೊತ್ತು. ಸಂಜಯ್‌ದತ್‌ ಕೂಡ “ಕೆಜಿಎಫ್ -2′ ಕುರಿತು ಟ್ವೀಟ್‌ ಮಾಡಿದ್ದಾರೆ. “ಅಧೀರನ ಜರ್ನಿ ಶುರು. “ಕೆಜಿಎಫ್ 2′ ಚಿತ್ರದಲ್ಲಿ ನಾನು ಭಾಗಿಯಾಗಿರುವುದು ಸಂತಸ ತಂದಿದೆ. ಅದೊಂದು ಅದ್ಭುತ ಅನುಭವ’ ಎಂದು ಟ್ವೀಟ್‌ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಸಂಜಯ್‌ ದತ್‌ ನಿರ್ವಹಿಸುತ್ತಿರುವ ಅಧೀರನ ಪಾತ್ರ “ಕೆಜಿಎಫ್ -2′ ಚಿತ್ರದಲ್ಲಿ ಪ್ರಮುಖ ಭಾಗವಾಗಿದ್ದು, ಈಗಾಗಲೇ ಅವರ ಭಾಗದ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಯಶ್‌ ಹಾಗು ಸಂಜಯ್‌ದತ್‌ ಕಾಂಬಿನೇಷನ್‌ ಮೇಲೆ ಸಾಕಷ್ಟು ಕುತೂಹಲವೂ ಮೂಡಿದೆ. ಈ ಹಿಂದೆ ಸಂಜಯ್‌ ದತ್‌ ಅವರ ಫ‌ಸ್ಟ್‌ಲುಕ್‌ ಪೊಸ್ಟರ್‌ ನೋಡಿದ್ದ ಜನರಲ್ಲಿ ಚಿತ್ರ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದ್ದು ಸುಳ್ಳಲ್ಲ. ಅದೇನೆ ಇರಲಿ, ಇದೇ ಮೊದಲ ಬಾರಿಗೆ “ಕೆಜಿಎಫ್-2′ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿರುವ ಸಂಜಯ್‌ ದತ್‌ ಅವರೂ ಸಹ, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ಚಿತ್ರದಲ್ಲಿ ಇನ್ನೂ ಅನೇಕ ಕಲಾವಿದರು ಕಾಣಿಸಿಕೊಳ್ಳುತ್ತಿದ್ದು, ಬಾಲಿವುಡ್‌ನ‌ ನಟಿ ರವೀನಾ ಟಂಡನ್‌ ಕೂಡ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ಜೋರಾಗಿಯೇ ಚಿತ್ರೀಕರಣ ನಡೆಯುತ್ತಿದ್ದು, 2020ರ ಮಧ್ಯದಲ್ಲಿ ಚಿತ್ರವನ್ನು ರಿಲೀಸ್‌ ಮಾಡುವ ಯೋಚನೆ ನಿರ್ಮಾಪಕರದ್ದು. ಚಿತ್ರವನ್ನು ವಿಜಯ್‌ ಕಿರಗಂದೂರು ನಿರ್ಮಿಸುತ್ತಿದ್ದು, ಪ್ರಶಾಂತ್‌ ನೀಲ್‌ ನಿರ್ದೇಶಿಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ