
ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ಕೊಟ್ಟ ಯಶ್ | ಕೆಜಿಎಫ್-2 ಬಿಡುಗಡೆ ದಿನಾಂಕ ಘೋಷಣೆ
Team Udayavani, Aug 22, 2021, 3:17 PM IST

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2022 ರ ಏಪ್ರಿಲ್ 14 ರಂದು ಈ ಚಿತ್ರ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.
ಇಂದು ( ಆ.22) ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ನೀಡಿರುವ ರಾಕಿ ಭಾಯ್, ಪ್ರಸ್ತುತ ದಿನಗಳಲ್ಲಿ ಕೆಲವೊಂದು ಅನಿಶ್ಚಿತತೆಯಿಂದ ವಿಳಂಭವಾಯಿತು. ಆಯಿತು ಖಂಡಿತವಾಗಿಯೂ 2022 ಏಪ್ರಿಲ್ 14 ರಂದು ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
The uncertainties of today will only delay our resolve, but the eventuality is as promised.We will be out in theaters on april 14th 2022. #KGF2onApr14@prashanth_neel @hombalefilms @VKiragandur @duttsanjay @TandonRaveena @SrinidhiShetty7
— Yash (@TheNameIsYash) August 22, 2021
ಇನ್ನು ಇತ್ತೀಚಿಗಷ್ಟೆ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ನೂರು ಕೋಟಿ ರೂ. ನೀಡಿದೆ ಎಂದು ವರದಿಗಳು ತಿಳಿಸಿವೆ. 100 ಕೋಟಿ ರೂ.ಗೆ ಸ್ಯಾಟಲೈಟ್ ಹಕ್ಕುಗಳು ಮಾರಾಟ ವಾಗಿದೆ ಎಂದು ತಿಳಿದು ಬಂದಿದೆ.
ಒಟಿಟಿ ಯಿಂದಲೂ ಈ ಚಿತ್ರಕ್ಕೆ ದೊಡ್ಡ ಮೊತ್ತದ ಆಫರ್ ಬಂದಿತ್ತು. 250 ಕೋಟಿ ರೂ. ನೀಡುವುದಾಗಿ ಹೇಳಿಕೊಂಡಿತ್ತು. ಆದರೆ, ಚಿತ್ರತಂಡ ಇದನ್ನು ತಿರಸ್ಕರಿಸಿತು.
ಪ್ರಶಾಂತ್ ನೀಲ್ ನಿರ್ದೇಶನ ಕೆಜಿಎಫ್ 2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ವಿಜಯ್ ಕಿರಂಗದೂರು ಅವರು ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಟಾಪ್ ನ್ಯೂಸ್
